

ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಮಿತಿ ಮೀರಿದ್ದು, ಇಬ್ಬರೂ ನಾಯಕರು ಪರಸ್ಪರ ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡಿದ್ದಾರೆ.
ಪ್ರದೀಪ್ ಈಶ್ವರ್ ರನ್ನು ಮುಳ್ಳು ಹಂದಿ, ಕಾಮಿಡಿ ಪೀಸ್ ಎಂದಿದ್ದ ಪ್ರತಾಪ್ ಸಿಂಹ ಅವರ ಮಾತಿಗೆ ತಿರುಗೇಟು ನೀಡಿರುವ ಪ್ರದೀಪ್ ಈಶ್ವರ್, ಏಕವಚನದಲ್ಲೇ ತೀರಾ ವೈಯುಕ್ತಿಕವಾಗಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, 'ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಅವರ ಸಾಧನೆಗಳ ಪ್ರಶ್ನಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾದ ಬಳಿಕ ಎಷ್ಟು ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ.. ಮಗನೇ ಮೈಸೂರು ಬಿಟ್ಟು ಬೆಂಗಳೂರಿಗೆ ಬಾ.. ಇಲ್ಲಿಗೆ ಬಂದು ನೋಡು.. ಪ್ರಿಯಾಂಕ್ ಖರ್ಗೆ ಸಾಹೇಬ್ರು ಆರ್ ಡಿಪಿಆರ್ ಗೆ ಬಂದ ಮೇಲೆ ಎಷ್ಟು ಬದಲಾವಣೆ ತಂದಿದ್ದಾರೆ ಅಂತ ಮೈಸೂರಿಂದ ಆಚೆ ಬಂದು ನೋಡು' ಎಂದು ಹೇಳಿದ್ದಾರೆ.
ಅಂತೆಯೇ, 'ಓಹ್ ನೀನ್ ಸಾರಿ.. ಅವ್ನು ಬೆಳಕಲ್ಲಿ ಕತ್ತಲಲ್ಲಿ ಹುಡುಕೋದ್ರಲ್ಲಿ ಬಿಸಿ ಇದಾರೆ. ನೀನ್ ಏನಂದೆ ಒಬ್ಬ ಅಪ್ಪಂಗೆ ಹುಟ್ಟಿದ್ಯಾ ಅಂದೆ. ನನ್ ಆಸ್ತಿಯಲ್ಲಿ ಭಾಗ ಬೇಕಾ ಅಂದೆ. ಈಗ ನನ್ನ ತಾಯಿ ಬಗ್ಗೆ ಕೇವಲವಾಗಿ ಮಾತಾಡ್ತಾ ಇದ್ಯಾ.. ನೀನ್ ಮಾತಾಡು ಗುರು ಪರವಾಗಿಲ್ಲ. ಆದ್ರೆ ನಮ್ ತಂದೆ ಅಂತೂ ನಿಮ್ಮ ಊರಿಗೆ ಕಳುಹಿಸಲ್ಲ. ನಮ್ ತಂದೆ ನಿಮ್ಮ ಊರಿಗೆ ಬರ್ಲಿಲ್ಲಾ ಅಂತಾ ಬೇಜಾರಾ..? ನಾನ್ ಕಳ್ಸಕ್ ರೆಡಿ ಇಲ್ಲಾ ಗುರು. ನಮ್ಮದು ಸಂಪ್ರದಾಯಸ್ಥ ಕುಟುಂಬ. ಇದಂತೂ ಸತ್ಯ' ಎಂದು ವ್ಯಂಗ್ಯ ಮಾಡಿದ್ದಾರೆ.
ಅಲ್ಲದೆ, ಏನ್ ಪ್ರತಾಪ್ ಸಿಂಹ್ ಇನ್ನೊಂದ್ ಸಲ ರಿವೈಂಡ್ ಮಾಡ್ಕೊಂಡು ನೋಡು ಮಗನೇ.. ಬೆಳಗ್ಗೆ ಕೂದಲೆಲ್ಲಾ ಬಾಚದೇ ಪ್ರೆಸ್ ಮೀಟ್ ಗೆ ಬರ್ತೀಯಲ್ಲ.. ಅವಾಗ ನಿನ್ನನ್ನ ನೀನ್ ನೋಡ್ಕೋ.. ಮುಳ್ಳು ಹಂದಿ ನೀನಾ ನಾನಾ ಎಂದು ಗೊತ್ತಾಗುತ್ತೆ.. ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಬೆಳಕಲ್ಲಿ ಹುಡುಕಿದ್ರೆ ನಿಂಗ್ ಎಂಪಿ ಟಿಕೆಟ್ ಸಿಕ್ಕಿರೋದು
ಇದೇ ವೇಳೆ ಕತ್ತಲಲ್ಲಿ ನಾನ್ ಕಾಣಲ್ಲಾ ಅಂತ್ಯಾ.. ನೀನ್ ಕತ್ಲಲ್ಲಿ ನನ್ ಯಾಕ್ ಹುಡುಕ್ತಿಯಾ.. ಬೆಳಕಲ್ಲಿ ಹುಡುಕಿದ್ರೆ ನಿಂಗ್ ಎಂಪಿ ಟಿಕೆಟ್ ಸಿಕ್ಕಿರೋದು. ಕತ್ಲಲ್ಲಿ ನಮ್ಮನ್ನೂ ಹುಡುಕ್ತಾ ಇದ್ಯಾ ಏನ್ ಬರಗಾಲ ಗುರು. ನಿಂಗ್ ಇಷ್ಟು ಬರಗಾಲ ಬಂದಿದೆ ಅಂತ ಗೋತ್ತಾಗ್ತಾ ಇಲ್ಲ. ಬೆಳಕಲ್ಲಿ ಎಲ್ಲ ಖಾಲಿ ಆದ್ ಮೇಲೆ ಕತ್ಲಲ್ಲಿ ನಮ್ಮನ್ನ ಹುಡುಕೋದಕ್ಕೆ ಸ್ಟಾರ್ಟ್ ಮಾಡಿದ್ದಾನೆ. ನಾನ್ ಹಂಗಲ್ಲ ಗುರು. ನೀನ್ ಹೇಳಿದ ಕಥೆಯಲ್ಲಿ ಮುಳ್ಳು ಹಂದಿ ನೀನು. ಸ್ಟೋರಿ ಸಿಂಕ್ ಮಾಡ್ಕೋ ಗುರು' ಎಂದು ಹೇಳಿದ್ದಾರೆ.
Advertisement