ದಾವಣಗೆರೆ ಉಪಚುನಾವಣೆ: ಸುಡು ಬಿಸಿಲಲ್ಲಿ ಬರಿಗಾಲಲ್ಲಿ ಸಮರ್ಥ್‌ ಶಾಮನೂರು ಪ್ರಚಾರ..!

ಸುಡು ಬಿಸಿಲಿನನಡುವೆಯೂ ಹಳೆಯ ದಾವಣಗೆರೆಯ ಬೀದಿ ಬೀದಿಗಳಲ್ಲಿ ಬರಿಗಾಲಲ್ಲಿ ನಡೆದು ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿರುವ ಸಮರ್ಥ್‌ ಅವರು, ಜನರೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದ್ದಾರೆ.
Congress candidate for Davanagere South Samarth Shamanur walks barefoot while campaigning in the city
ಬರಿಗಾಲಲ್ಲಿ ಪ್ರಚಾರ ನಡೆಸುತ್ತಿರುವ ಸಮರ್ಥ್‌ ಶಮನೂರು
Updated on

ದಾವಣಗೆರೆ: ಚುನಾವಣಾ ರಾಜಕೀಯದಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಯುವ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಶಮನೂರು ಅವರು ತಮ್ಮ ವಿಭಿನ್ನ ಪ್ರಚಾರ ಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಮರ್ಥ್‌ ಅವರು, ಸುಡುಬಿಸಿಲಿನಲ್ಲೂ ಬರಿಗಾಲಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಸಮರ್ಥ್‌ ಅವರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರರಾಗಿದ್ದು, ಜಕೀಯ ಹಿನ್ನಲೆ ಇರುವ ಕುಟುಂಬದಲ್ಲಿ ಬೆಳೆದಿರುವ ಇವರು, ನಾವಣಾ ಪ್ರಚಾರಗಳಲ್ಲಿ ಈಗಾಗಲೇ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಸುಡು ಬಿಸಿಲಿನನಡುವೆಯೂ ಹಳೆಯ ದಾವಣಗೆರೆಯ ಬೀದಿ ಬೀದಿಗಳಲ್ಲಿ ಬರಿಗಾಲಲ್ಲಿ ನಡೆದು ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿರುವ ಸಮರ್ಥ್‌, ಜನರೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದ್ದಾರೆ.

“ನನ್ನ ಕಾಲುಗಳನ್ನು ನೋಡಬೇಡಿ, ದಾವಣಗೆರೆ ದಕ್ಷಿಣವನ್ನು ರಾಜ್ಯದ ಅತ್ಯುತ್ತಮ ಕ್ಷೇತ್ರವನ್ನಾಗಿಸುವ ನನ್ನ ಗುರಿಯನ್ನು ನೋಡಿ” ಎಂದು ಅವರು ಹೇಳಿದ್ದಾರೆ.

Congress candidate for Davanagere South Samarth Shamanur walks barefoot while campaigning in the city
ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲುವು ಕಷ್ಟನಾ? : ಸ್ವತಂತ್ರ ಅಭ್ಯರ್ಥಿಗಳಿಂದ ಟಫ್ ಫೈಟ್

ಸಮರ್ಥ್‌ ಅವರ ಈ ವಿಭಿನ್ನ ಪ್ರಚಾರದ ಹಿಂದೆ ಆಧ್ಯಾತ್ಮಿಕ ನಂಬಿಕೆ ಇದೆ ಎಂದು ಅವರ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ ವಿವರಿಸಿದ್ದಾರೆ.

ವೀರಭದ್ರಸ್ವಾಮಿ ಕೊಂಡೋತ್ಸವದ ಪ್ರೇರಣೆಯಿಂದ ಅವರು ಚುನಾವಣಾ ಅವಧಿಯಲ್ಲಿ ಬರಿಗಾಲಲ್ಲಿ ನಡೆಯುವ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. 2023ರ ವಿಧಾನಸಭೆ ಚುನಾವಣೆಯ ವೇಳೆ ಸಮರ್ಥ್‌ ಅಗ್ನಿಕುಂಡದ ಮೇಲೆ ನಡೆದಿದ್ದರು. ನಂತರ ಈ ಆಧ್ಯಾತ್ಮಿ ನಂಬಿಕೆಯನ್ನು ಪಾಲಿಸುತ್ತಿದ್ದಾರೆಂದು ತಿಳಿಸಿದ್ದಾರೆ.

"ನಂತರ ನಾನು ಸಂಸತ್ತಿಗೆ ಆಯ್ಕೆಯಾದಾಗಲೂ, ಫಲಿತಾಂಶಗಳು ಪ್ರಕಟವಾಗುವವರೆಗೆ ಎರಡು ತಿಂಗಳಿಗಿಂತ ಹೆಚ್ಚು ಕಾಲ ಬರಿಗಾಲಿನಲ್ಲಿ ನಡೆದಿದ್ದರು. ಗಂಗೋತ್ರಿ ಮತ್ತು ಯಮುನೋತ್ರಿಗೆ ಭೇಟಿ ನೀಡಿದಾಗಲೂ ಬರಿಗಾಲಲ್ಲಿ ನಡೆದಿದ್ದರು. ನವದೆಹಲಿಯಲ್ಲಿ 42 ಡಿಗ್ರಿ ತಾಪಮಾನದಲ್ಲಿಯೂ ಅವರು ಚಪ್ಪಲಿ ಧರಿಸದೇ ಪ್ರಯಾಣ ಮುಂದುವರಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ರಾಜಕೀಯ ಕುಟುಂಬದಲ್ಲಿ ಬೆಳೆದ ಸಮರ್ಥ್‌, ಜನಸೇವೆಯ ಮಹತ್ವವನ್ನು ಬಾಲ್ಯದಿಂದಲೇ ಗಮನಿಸಿದ್ದಾನೆ. ವಯಸ್ಸು ಅಭಿವೃದ್ಧಿಗೆ ಅಡ್ಡಿಯಲ್ಲ ಎಂಬ ನಂಬಿಕೆಯಿಂದ, ದಾವಣಗೆರೆ ದಕ್ಷಿಣವನ್ನು ರಾಜ್ಯದಲ್ಲೇ ಅತ್ಯುತ್ತಮ ಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com