

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕವನ ವಾಚಿಸಿ ತೀವ್ರ ವಾಗ್ದಾಳಿ ನಡೆಸಿದ ಸಚಿವ ಶಿವರಾಜ ತಂಗಡಗಿ ಅವರು, ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಆರೋಪಿಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೋದಿಗೆ ವಿರೋಧ ಪಕ್ಷವಿಲ್ಲದ ಭಾರತ ಬೇಕು, ಹೆಂಡತಿ ಇಲ್ಲದ ಜೀವನ ಬೇಕು, ಮಕ್ಕಳಿಲ್ಲದ ಅಂಗಳ ಬೇಕು, ಪ್ರಶ್ನೆಗಳಿಲ್ಲದ ಸಂಸತ್ ಬೇಕು. ಏನನ್ನೂ ಕೇಳದ ಮಾಧ್ಯಮಗಳು ಬೇಕು. ಬುದ್ಧಿ ಇಲ್ಲದ ಭಕ್ತರು ಬೇಕು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ತರಲು ಸಭೆ ಮಾಡಲಾಗಿದ್ದು, ಅದರಲ್ಲಿ ಉತ್ಸವ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕಲಾವಿದರಿಗೆ ಅವಕಾಶಗಳನ್ನು ನೀಡುವ ಕುರಿತು ಮಾನದಂಡ ರೂಪಿಸಲಾಗಿದೆ ಎಂದರು.
Advertisement