ಕಾಂಗ್ರೆಸ್ಸಿಗರ DNA ಯಲ್ಲೇ ಸರ್ವಾಧಿಕಾರಿ ಧೋರಣೆ: ಪ್ರಚೋದನೆ ಹೇಳಿಕೆ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ; ನಿಖಿಲ್

ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ತುರ್ತು ಪರಿಸ್ಥಿತಿ ಹೇರಿ ಐವತ್ತು ವರ್ಷ ಕಳೆದ ಸಂದರ್ಭದಲ್ಲಿ ಅದನ್ನು ಸುವರ್ಣ ಮಹೋತ್ಸವವನ್ನಾಗಿ ಆಚರಿಸುತ್ತಿದೆ.
Nikhil Kumaraswamy
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಕಾಂಗ್ರೆಸ್ ನಾಯಕರ ರಕ್ತದಲ್ಲೇ ಸರ್ವಾಧಿಕಾರತನವಿದೆ, ಅಂದಿನಿಂದ ಇಂದಿನವರೆಗೆ ಅವರ DNA ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ತುರ್ತು ಪರಿಸ್ಥಿತಿ ಹೇರಿ ಐವತ್ತು ವರ್ಷ ಕಳೆದ ಸಂದರ್ಭದಲ್ಲಿ ಅದನ್ನು ಸುವರ್ಣ ಮಹೋತ್ಸವವನ್ನಾಗಿ ಆಚರಿಸುತ್ತಿದೆ. ಇದು, ಸರ್ವಾಧಿಕಾರಿ ಧೋರಣೆಗೆ ಕೊಡಬಹುದಾದ ಮೊದಲ ಉದಾಹರಣೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾದರ ವೇಮಗಲ್ ನಲ್ಲಿ ಹೊಸ ಕಾರ್ಖಾನೆ ಆರಂಭವಾಗುತ್ತಿದೆ. ಇದಕ್ಕೆ ಸ್ಥಳೀಯ ಶಾಸಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇವರಿಗೆಲ್ಲಾ, ಉದ್ಯೋಗ ಸೃಷ್ಟಿಯಾಗಬೇಕು ಎನ್ನುವುದು ಇಲ್ಲವೇ ಎಂದು ಶಾಸಕರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧ ಎನ್ನುವುದು ನಮ್ಮ ರಾಜ್ಯದ ಶಕ್ತಿಸೌಧ, ಇಂತಹ ಜಾಗದಲ್ಲಿ ತುರ್ತು ಪರಿಸ್ಥಿತಿಯಂತಹ ಕಾನೂನನ್ನು ಸಿದ್ದರಾಮಯ್ಯ ಸರ್ಕಾರ ತಂದಿದೆ. ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಇವರ ಸರ್ವಾಧಿಕಾರತನದ ಮತ್ತೊಂದು ಮುಖ. ಇವರ ಮನಸ್ಥಿತಿ ಇಂದಿರಾ ಗಾಂಧಿ ಕಾಲದಲ್ಲಿ ಹೇಗಿದೆಯೋ ಅದೇ ಈಗಲೂ ಮುಂದುವರಿದಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

Nikhil Kumaraswamy
BJP ಜತೆ ಕೈಜೋಡಿಸಿದರೂ JDS ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ: ನಿಖಿಲ್ ಕುಮಾರಸ್ವಾಮಿ

ಕೋಲಾರದ ವೇಮಗಲ್ ನಲ್ಲಿ ಹೆಲಿಕಾಪ್ಟರ್ ಘಟಕ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ವಿರೋಧ ವ್ಯಕ್ತ ಪಡಿಸುತ್ತಿರುವುದಕ್ಕೆ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕಕ್ಕೆ ಬರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಇವರಿಗಿಲ್ಲವೇ? ಎಲ್ಲದರಲ್ಲೂ ರಾಜಕೀಯವೇ? ಅಭಿವೃದ್ದಿಗೆ ಸಹಕರಿಸಬೇಕೆಂದು ಇವರಿಗಿಲ್ಲವೇ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com