RSS ದಾಖಲೆಗಳನ್ನು ಸಲ್ಲಿಸದಿದ್ದರೆ ಕಾನೂನು ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸುಳಿವು

ನಾನು ಬರೆದ ಪತ್ರಕ್ಕೆ ಆರ್ ಎಸ್ಎಸ್ ನಿಂದ ಯಾವುದೇ ತೃಪ್ತಿದಾಯಕ ಉತ್ತರ ಸಿಗದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.
Priyank Kharge
ಗೃಹ ಸಚಿವ ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ನೋಂದಣಿ ಬಗ್ಗೆ ಮಾಹಿತಿ ನೀಡುವಂತೆ ಪಟ್ಟು ಹಿಡಿದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದಿದ್ದರೆ ಸಂಘದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಂಗಳವಾರ ಸುಳಿವು ನೀಡಿದ್ದಾರೆ.

ನಾನು ಬರೆದ ಪತ್ರಕ್ಕೆ ಆರ್ ಎಸ್ಎಸ್ ನಿಂದ ಯಾವುದೇ ತೃಪ್ತಿದಾಯಕ ಉತ್ತರ ಸಿಗದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಆರ್‌ಎಸ್‌ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಗೃಹ ಸಚಿವರು, ಆರ್ ಎಸ್ ಎಸ್ ನೋಂದಣಿ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದೇನೆ . ಇದೇ ಅಂತಿಮ ಅಲ್ಲ. ಅವರು ಉತ್ತರ ಕೊಡಲಿ. ತಾಳ್ಮೆಯಿಂದ ಕಾಯೋಣ ಎಂದರು.

"ನಾನು ಅವರ ಬಳಿ ವಿವರಗಳನ್ನು ಕೇಳಿ ಕೇವಲ ಒಂದು ವಾರವಾಗಿದೆ. ಅವರು 100 ವರ್ಷಗಳ ಇತಿಹಾಸ ಹೊಂದಿರುವ ದೇಶಭಕ್ತರು. ಅವರು ಎಲ್ಲೋ ದಾಖಲೆಗಳನ್ನು ಇಟ್ಟಿರಬೇಕು. ಅದು ನಾಗ್ಪುರದಲ್ಲಿ, ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಅಥವಾ ಸರಸಂಘ ಚಾಲಕ್ ಅವರ ನಿವಾಸದಲ್ಲಿ" ಇರಬಹುದು. ಅದನ್ನು ಹುಡುಕಲು ಅವರಿಗೆ ಸಮಯ ಬೇಕು ಅಲ್ವಾ ಎಂದರು.

Priyank Kharge
RSS ನೋಂದಣಿ ಬಗ್ಗೆ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ: ಕಾನೂನು ಪಾಲನೆ ಕುರಿತು ಸ್ಪಷ್ಟನೆ ಕೇಳಿದ ಗೃಹ ಸಚಿವ!
Priyank Kharge
ದುರಹಂಕಾರ ಬಿಟ್ಟು ಕಾನೂನು ಪಾಲಿಸಿ: ಇಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಇನ್ನು ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಕೊಡಬಾರ್ದಾ? Video

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನವರು ದಾಖಲೆ ಕೊಡದೆ ಕಾನೂನು ಮೀರುವಂತಿಲ್ಲ. ಅವರು ದಾಖಲೆ ಕೊಡದೇ ಕಾನೂನು ಚೌಕಟು ಮೀರಲು ನಾನು ಬಿಡಲ್ಲ. ಆರ್ ಎಸ್ ಎಸ್ ಬಳಿ ದಾಖಲೆ ಇದ್ದಿದ್ದರೇ ನನ್ನ ಮುಖಕ್ಕೆ ಎಸೆಯುತ್ತಿದ್ದರು ಎಂದು ಕುಟುಕಿದರು.

ಆರ್‌ಎಸ್‌ಎಸ್ ದಾಖಲೆಗಳನ್ನು ನೀಡದಿದ್ದರೆ ಮುಂದಿನ ಕ್ರಮ ಏನು? ಎಂದು ವರದಿಗಾರರು ಕೇಳಿದಾಗ, ದೇಶದಲ್ಲಿ ಕಾನೂನು ಇದೆ. ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಖರ್ಗೆ ತಿಳಿಸಿದರು.

ಆರ್‌ಎಸ್‌ಎಸ್‌ಗೆ ತಮ್ಮ ನೋಂದಣಿ ಪತ್ರವನ್ನು ಒದಗಿಸುವಂತೆ ಕೇಳುತ್ತಿದ್ದೀರಾ ಎಂದು ಕೇಳಿದಾಗ, ಇದು ನೋಂದಣಿ ಪತ್ರದ ಬಗ್ಗೆ ಅಲ್ಲ, ಅವರು ಯಾರೆಂದು ತಿಳಿಯುವ ಪ್ರಯತ್ನ ಎಂದು ಖರ್ಗೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com