'ವಿದೇಶಕ್ಕೆ ಹೋಗಿ ಏನು ರಾಜಕೀಯ ಮಾಡೋದು?': ಫಾರಿನ್ ಟ್ರಿಪ್ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್

'ವಿದೇಶಕ್ಕೆ ಹೋಗಿ ಏನು ರಾಜಕೀಯ ಮಾಡೋದು?': ಫಾರಿನ್ ಟ್ರಿಪ್ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವಿದೇಶ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ನ ಸುಮಾರು 20 ಶಾಸಕರು ಇಂದು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ.
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಕುರ್ಚಿ ಕದನ ಒಂದೆಡೆ ಮುಂದುವರಿಯುತ್ತಿದ್ದರೆ ಮತ್ತೊಂದೆಡೆ ಇದೇ ಮಾರ್ಚ್ 6ಕ್ಕೆ ಬಜೆಜ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸುತ್ತಿದ್ದಾರೆ.

ಈ ಮಧ್ಯೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವಿದೇಶ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ನ ಸುಮಾರು 20 ಶಾಸಕರು ಇಂದು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ.

ಕೆಂಪೇಗೌಡ ಏರ್​​​ಪೋರ್ಟ್​ಗೆ ಹೆಚ್​.ಡಿ.ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್​ ಶಾಸಕರು ಮಧ್ಯರಾತ್ರಿ ಆಗಮಿಸಿದ್ದಾರೆ. ಬಹುತೇಕ ಶಾಸಕರು ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ತರಾತುರಿಯಲ್ಲಿ ಕಾರು ಹತ್ತಿ ತೆರಳುತ್ತಿರುವುದು ಕಂಡುಬಂತು.

ವಿದೇಶ ಪ್ರವಾಸದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಗುಪ್ಪ ಶಾಸಕ ಬಿಎಂ ನಾಗರಾಜ್, ಆಸ್ಟ್ರೇಲಿಯಾ ನ್ಯೂಜಿಲೆಂಡ್ ಹೋಗಿ ಬಂದೆವು. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನಾವು ಯಾವುದೇ ಅಧ್ಯಯನ ಮಾಡಿಲ್ಲ. ಫ್ಯಾಮಿಲಿ ಟ್ರಿಪ್ ಹೋಗಿದ್ದೆವು. ನಮ್ಮ ಯಾವ ರಾಜಕೀಯ ನಾಯಕರೂ ಕರೆ ಮಾಡಿಲ್ಲ. ಅಲ್ಲಿನ ಕೆಲ ತೋಟಗಳಿಗೆ ಹೋಗಿದ್ದೆವು. ಕೆಲವು ಕಡೆ ನಮಗೆ ಹೋಗೋದಕ್ಕೆ ಅವಕಾಶ ಸಿಗಲಿಲ್ಲ. ನಾವು ಅಧಿಕೃತ ಸರ್ಕಾರಿ ಪ್ರವಾಸಕ್ಕೆ ಹೋಗಿಲ್ಲ. ಅದಕ್ಕೆ ಕೆಲವು ಕಡೆ ಅವಕಾಶ ಸಿಕ್ಕಿಲ್ಲ ಎಂದರು.

ಜಗಳೂರು ಶಾಸಕ ದೇವೆಂದ್ರಪ್ಪ, ಪ್ರವಾಸದ ಜೊತೆಗೆ ಅಧ್ಯಯನಕ್ಕೆ ಹೋಗಿದ್ದೆವು. ಹೈನುಗಾರಿಕೆ, ಕಾನೂನು ಎಲ್ಲದರ ಬಗ್ಗೆ ಅಧ್ಯಯನ ಮಾಡಿದ್ದೇವೆ. ಆ ದೇಶಗಳಲ್ಲಿನ ವ್ಯವಸ್ಥೆ ನಾವು ಅಳವಡಿಸಿಕೊಳ್ಳುವ ಅಗತ್ಯತೆ ಇದೆ. ನಮ್ಮ ಕ್ಷೇತ್ರಗಳಲ್ಲಿ ನಾವು ಅಧ್ಯಯನ ಮಾಡಿಕೊಳ್ಳುತ್ತೇವೆ.

'ವಿದೇಶಕ್ಕೆ ಹೋಗಿ ಏನು ರಾಜಕೀಯ ಮಾಡೋದು?': ಫಾರಿನ್ ಟ್ರಿಪ್ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್
ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ,​​​ ಪಿವಿ ಸಿಂಧು ಸೇರಿ 213 ಮಂದಿ ಸುರಕ್ಷಿತವಾಗಿ ಬೆಂಗಳೂರಿಗೆ

ಆಸ್ಟ್ರೇಲಿಯಾಗೆ ಹೋಗಿ ನಾವು ಯಾವ ರಾಜಕೀಯ ಮಾಡೋಕೆ ಆಗುತ್ತೆ? ಇಲ್ಲಿ ಇದ್ರೆನೇ ನಾವು ಯಾವ ರಾಜಕೀಯವೂ ಮಾಡಿಲ್ಲ. ನಮ್ಮ ನಾಯಕರಲ್ಲಿ ಏನೂ ಗೊಂದಲಗಳಿಲ್ಲ. ರಾಜಕೀಯ ಚರ್ಚೆಗೂ ಈ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ. ಟೀ ಕುಡಿಯುವ ಸಮಯದಲ್ಲೂ ರಾಜಕೀಯ ಮಾತಾಡಿಲ್ಲ. ಮೂರು ವರ್ಷದಿಂದ ಇದೇ ಚರ್ಚೆ ಆಗುತ್ತದೆ. ಕುಟುಂಬದ ಜೊತೆಗೆ ಹೋಗಿ ನಾವು ರಾಜಕೀಯ ಮಾಡಲು ಆಗುತ್ತಾ? ನಿಜವಾಗ್ಲೂ ರಾಜಕೀಯ ಮಾಡಲು ಹೋಗಿದ್ರೆ ನಾವು ಮಾಧ್ಯಮಕ್ಕೆ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಚಾಮರಾಜನಗರ ಪುಟ್ಟರಂಗಶೆಟ್ಟಿ, ಹೈನುಗಾರಿಕೆ, ಅಲ್ಲಿನ ರಸ್ತೆಗಳನ್ನ ನೋಡಲು ಹೋಗಿದ್ದೆವು. ಸರ್ಕಾರಕ್ಕೆ ಹೇಗೆ ರಸ್ತೆ ಮಾಡಬೇಕು ಎಂದು ಹೇಳುತ್ತೇನೆ. ರಾಜಕೀಯ ಇಲ್ಲಿ ಬಂದ ಮೇಲೆ ಮಾಡೋದು, ಅಲ್ಲಿ ಹೋಗಿ ರಾಜಕೀಯ ಮಾಡಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com