ತಮಿಳುನಾಡಿನಲ್ಲಿ ಹೊಸ ಯುಗಾರಂಭ: ರಾಜ್ಯದ ಜನತೆ ನಮ್ಮೊಂದಿಗಿದ್ದಾರೆ; ಡಿಕೆ ಶಿವಕುಮಾರ್

ತಮಿಳುನಾಡು ಫಲಿತಾಂಶ ಗ್ರಹಿಸಲು ಆಗಲಿಲ್ಲ. 30-40% ವೋಟ್ ಹೋಗಬಹುದು ಅಂದುಕೊಂಡಿದ್ದೆವು. ಈ ಪ್ರಮಾಣದಲ್ಲಿ ಬದಲಾವಣೆ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ ಎಂದರು.
DK shivkumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ಜನ ನಮ್ಮ ಜೊತೆ ಇದ್ದಾರೆ, ನಮ್ಮ ಗ್ಯಾರಂಟಿ ನಮ್ಮ ಕೈ ಹಿಡಿದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಹಾಗೂ ಪಂಚರಾಜ್ಯಗಳ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಾವಣಗೆರೆಯಲ್ಲಿ ಕಾಂಗ್ರೆಸ್ ಲೀಡ್ ಇದೆ. ಎಸ್‌ಡಿಪಿಐ ವೋಟ್ ನಮಗೆ ಡೇಂಜರ್ ಆಗಿದೆ. ಎಸ್‌ಡಿಪಿಐ ಅವರನ್ನು ಲೈಟಾಗಿ ತೆಗೆದುಕೊಂಡಿಲ್ಲ. ಇಷ್ಟು ಆಗಲಿದೆ ಅಂತ ಅಂದಾಜಿಸಿರಲಿಲ್ಲ ಎಂದಿದ್ದಾರೆ.

ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಎಂಬ ಬಗ್ಗೆ ನಾನು ಮಾತನಾಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲಾ ವಿಷಯ ತಿಳಿಸಿದ್ದಾರೆ, ಎಸ್‌ಡಿಪಿಐ ಕೂಡ 12 ಸಾವಿರ ವೋಟ್ ತೆಗೆದುಕೊಂಡಿದೆ. ನಮ್ಮ ಗ್ಯಾರಂಟಿ ರಾಜ್ಯದಲ್ಲಿ ಚೆನ್ನಾಗಿ ನಡೆಯುತ್ತಿದೆ. ಜನ ಸ್ಪಂದಿಸಿದ್ದಾರೆ. ಇದಕ್ಕೆ ಈ ಫಲಿತಾಂಶ ಉದಾಹರಣೆ. ಇನ್ನೂ ರೌಂಡ್ ಇದೆ, ಚೆನ್ನಾಗಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ತಮಿಳುನಾಡು ಫಲಿತಾಂಶದಿಂದ ಆಶ್ಚರ್ಯ ಆಗಿದೆ. ಅಲ್ಲಿ ಹೊಸ ಯುಗಾರಂಭವಾಗಿದೆ ಎಂದಿದ್ದಾರೆ. ತಮಿಳುನಾಡು ಫಲಿತಾಂಶ ಗ್ರಹಿಸಲು ಆಗಲಿಲ್ಲ. 30-40% ವೋಟ್ ಹೋಗಬಹುದು ಅಂದುಕೊಂಡಿದ್ದೆವು. ಈ ಪ್ರಮಾಣದಲ್ಲಿ ಬದಲಾವಣೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು.

DK shivkumar
ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್‌: ಫಲಿತಾಂಶದ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

ಕೇರಳ ಫಲಿತಾಂಶದ ಬಗ್ಗೆ ನಂಬಿಕೆ ಇತ್ತು. 10 ವರ್ಷ ಆಗಿತ್ತು. ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ. ಇವತ್ತು ದೊಡ್ಡ ಬೆಂಬಲ ಸಿಕ್ಕಿದೆ. ಅಸ್ಸಾಂನಲ್ಲಿ ಪಾರ್ಟಿ ಡ್ಯೂಟಿ ಮಾಡಿದ್ದೇನೆ. ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಲೋಕಲ್ ಕೂಡ 50 ಹೇಳಿತ್ತು.

ಡಿಲಿಮಿಟೇಷನ್ ಕೂಡ ಒಂದು ಕಾರಣ ವಾಗಿದೆ. ಪಶ್ಚಿಮ ಬಂಗಾಳದಲ್ಲಿ ವೋಟ್ ಡಿಲೀಟ್ ಮಾಡಿದ್ದಾರೆ. ಮೆಷಿನ್ ಕೂಡ ಸಮಸ್ಯೆ ಮಾಡಿದ್ರು. ಗೆಲ್ಲಲೇಬೇಕು ಅನ್ನೋ ಕಾರಣಕ್ಕೆ ಬಿಜೆಪಿ ಏನೇನೋ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com