ತಮಿಳು ನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ, ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಅನಿಸುತ್ತದೆ: ಸಿದ್ದರಾಮಯ್ಯ-Video

ತಮಿಳು ಜನತೆ ಬದಲಾವಣೆ ಬಯಸಿದ್ದರು. ಬದಲಾವಣೆಗೋಸ್ಕರ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಮತ ಹಾಕಿರಬಹುದು, ಕೇರಳದಲ್ಲಿ ನಾವು ನಿರೀಕ್ಷೆ ಮಾಡಿದ್ದೆವು, ನಮ್ಮ ನಿರೀಕ್ಷೆಗಿಂತ ಹೆಚ್ಚು ಫಲಿತಾಂಶ ಬಂದಿದೆ ಎಂದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಸತತ 15 ವರ್ಷ ಮಮತಾ ಬ್ಯಾನರ್ಜಿಯವರ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ. ಆಡಳಿತ ವಿರೋಧಿ ಅಲೆ ಅಲ್ಲಿ ಕೆಲಸ ಮಾಡಿರಬಹುದು ಎಂದು ನನಗೆ ಅನಿಸಿದೆ, ನಾನು ಚುನಾವಣೆ ಸಮಯದಲ್ಲಿ ಅಲ್ಲಿಗೆ ಹೋಗಲಿಲ್ಲ, SIR ಪ್ರಕ್ರಿಯೆಯಿಂದ 91 ಲಕ್ಷ ಮತದಾರರಿಗೆ ಮತದಾನ ಹಕ್ಕು ನಿರಾಕರಿಸಿರುವುದು ಕೂಡ ಅವರ ಸೋಲಿಗೆ ಕಾರಣವಾಗಿರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮಿಳು ನಾಡಿನ ಚುನಾವಣೆ ಫಲಿತಾಂಶ ನಮಗೆ ಅಚ್ಚರಿ ತಂದಿದೆ, ತಮಿಳು ನಾಡಿನಲ್ಲಿ ಬಹುತೇಕ ಯುವಜನತೆ ಬಹುಶಃ ದಳಪತಿ ವಿಜಯ್ ಅವರಿಗೆ ಮತ ಹಾಕಿರಬಹುದು.

ತಮಿಳು ಜನತೆ ಬದಲಾವಣೆ ಬಯಸಿದ್ದರು. ಬದಲಾವಣೆಗೋಸ್ಕರ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಮತ ಹಾಕಿರಬಹುದು, ಕೇರಳದಲ್ಲಿ ನಾವು ನಿರೀಕ್ಷೆ ಮಾಡಿದ್ದೆವು, ನಮ್ಮ ನಿರೀಕ್ಷೆಗಿಂತ ಹೆಚ್ಚು ಫಲಿತಾಂಶ ಬಂದಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com