ಬೆಂಗಳೂರು ರಸ್ತೆಗಳಲ್ಲಿ ಎಲ್ಲೆಲ್ಲೂ ಮರಗಳ ರಾಶಿ: ಡಿಕೆಶಿ ಏನು ಮಾಡುತ್ತಿದ್ದಾರೆ?: ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಡಿಕೆ.ಶಿವಕುಮಾರ್ ಅವರು ಮರ ತೆರವುಗಿಂತ, ಸಿಎಂ ಕುರ್ಚಿ ತೆರವುಗೊಳಿಸುವ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ದೆಹಲಿಗೆ ಕರೆದು "ಶುಭ ಸುದ್ದಿ" ಕೊಡುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ.
ಆರ್‌.ಅಶೋಕ್‌
ಆರ್‌.ಅಶೋಕ್‌
Updated on

ಬೆಂಗಳೂರು: ಭಾರೀ ಮಳೆಯಿಂದಾಗಿ ನಗರದಕ ರಸ್ತೆಗಳಲ್ಲಿ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಕುರ್ಚಿ ತೆರವುಗೊಳಿಸುವಲ್ಲಿ ಇರುವ ಆಸಕ್ತಿ, ರಸ್ತೆಯಲ್ಲಿ ಬಿದ್ದರುವ ಮರ ತೆರವುಗೊಳಿಸುವಲ್ಲಿ ಇಲ್ಲ. ಏಪ್ರಿಲ್ 29ರ ಮಳೆಗೆ 500ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ವಾರ ಕಳೆದರೂ 1,305ಕ್ಕೂ ಹೆಚ್ಚು ಮರ-ಕೊಂಬೆಗಳು ಇನ್ನೂ ರಸ್ತೆ ಬದಿಯಲ್ಲೇ ಕೊಳೆಯುತ್ತಿವೆ. ಪಾದಚಾರಿ ಮಾರ್ಗಗಳು ಬಂದ್ ಆಗಿವೆ. ಜನ ಜೀವ ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ನಡೆಯುವ ಪರಿಸ್ಥಿತಿ. ಆದರೆ ಡಿಸಿಎಂ ಡಿಕೆ.ಶಿವಕುಮಾರ್ ಅವರು ಎಲ್ಲಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಡಿಕೆ.ಶಿವಕುಮಾರ್ ಅವರು ಮರ ತೆರವುಗಿಂತ, ಸಿಎಂ ಕುರ್ಚಿ ತೆರವುಗೊಳಿಸುವ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ದೆಹಲಿಗೆ ಕರೆದು "ಶುಭ ಸುದ್ದಿ" ಕೊಡುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ. 30 ತಂಡಗಳನ್ನು ನಿಯೋಜಿಸಿದ್ದೇವೆ” ಎಂದು ಸರ್ಕಾರ ಘೋಷಣೆ ಮಾಡುತ್ತದೆ. ಆದರೆ ವಾಸ್ತವದಲ್ಲಿ ಕಾಣಿಸುವುದು ಏನು? ಅಸ್ತವ್ಯಸ್ತವಾಗಿ ಬಿದ್ದಿರುವ ಕೊಂಬೆಗಳ ರಾಶಿ… ನಿರ್ಲಕ್ಷ್ಯದ ಆಡಳಿತ ಎಂದು ಟೀಕಿಸಿದ್ದಾರೆ.

ಫ್ಲೆಕ್ಸ್‌ಗಳಲ್ಲಿ, ಜಾಹೀರಾತುಗಳಲ್ಲಿ “Brand Bengaluru” ಕಟ್ಟುವ ಸರ್ಕಾರಕ್ಕೆ, ರಸ್ತೆಯ ಮೇಲೆ ಬಿದ್ದ ಒಂದು ಮರವನ್ನು ತೆರವುಗೊಳಿಸುವ ಸಾಮರ್ಥ್ಯವೂ ಇಲ್ಲವೇ? ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಬೆಂಗಳೂರಿನ ಜನರ ಸುರಕ್ಷತೆಯ ಮೇಲಿನ ನಿರ್ಲಕ್ಷ್ಯ.

ನಿಮ್ಮ ಬಳಿ ಬಜೆಟ್ ಇಲ್ಲವೇ? ಇಚ್ಛಾಶಕ್ತಿ ಇಲ್ಲವೇ? ಅಥವಾ ಮರ ತೆರವಿಗೂ “ಕಮಿಷನ್” ಬೇಕೇ? ಬೆಂಗಳೂರು ಎಲ್ಲವನ್ನೂ ನೋಡುತ್ತಿದೆ. ಜನ ಉತ್ತರ ಕೇಳುತ್ತಿದ್ದಾರೆಂದು ಹೇಳಿದ್ದಾರೆ.

ಆರ್‌.ಅಶೋಕ್‌
ಲೋಕಾಯುಕ್ತ ದಾಳಿ: ಮಂಗಳೂರು ಸಹಾಯಕ ಡ್ರಗ್ ಕಂಟ್ರೋಲರ್ ಬಳಿ 3.37 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com