ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಸನ್- ಈಗ ತಮಿಳುನಾಡಿನ ಸುಲ್ತಾನ್: ದಳಪತಿ ವಿಜಯ್ ಹಾಡಿ ಹೊಗಳಿದ ಎಚ್.ಡಿ ದೇವೇಗೌಡ

ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ, ಮಾಜಿ ಸಿಎಂ ಸ್ಟಾಲಿನ್‌ ಅವರನ್ನು ಹಿಂದಿಕ್ಕಿ ಹೊಸ ರಾಜಕೀಯ ಶಕ್ತಿ ಉದಯವಾಗಿದೆ. ಸಾಮಾನ್ಯ ನಿರ್ದೇಶಕನ ಮಗ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ನೂತನ ಸಿಎಂ ಆಗಿರುವ ವಿಜಯ್‌ ಅವರನ್ನು ಅಭಿನಂದಿಸುತ್ತೇನೆ,
HD Devegowda
ಎಚ್.ಡಿ ದೇವೇಗೌಡonline desk
Updated on

ಬೆಂಗಳೂರು: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ನಟ, ಜೋಸೆಫ್ ವಿಜಯ್ ಅವರ ಸಾಧನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಡಿ ಹೊಗಳಿದ್ದಾರೆ.

ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಮೀರಿಸಿ ಬೆಳೆದಿರುವುದು ಸಾಮಾನ್ಯ ಸುದ್ದಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಜಯ್ ಎಲ್ಲೇ ಹೋದರೂ 40 ರಿಂದ 50 ಲಕ್ಷ ಜನರು ಸೇರುತ್ತಾರೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ, ಮಾಜಿ ಸಿಎಂ ಸ್ಟಾಲಿನ್‌ ಅವರನ್ನು ಹಿಂದಿಕ್ಕಿ ಹೊಸ ರಾಜಕೀಯ ಶಕ್ತಿ ಉದಯವಾಗಿದೆ. ಸಾಮಾನ್ಯ ನಿರ್ದೇಶಕನ ಮಗ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ನೂತನ ಸಿಎಂ ಆಗಿರುವ ವಿಜಯ್‌ ಅವರನ್ನು ಅಭಿನಂದಿಸುತ್ತೇನೆ ಎಂದು ದೇವೇಗೌಡರು ಹೇಳಿದರು.

ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಈ ಎತ್ತರಕ್ಕೆ ಬೆಳೆದಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿ ಎಂದು ಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹಲವು ಸಮಸ್ಯೆಗಳಿವೆ (ಕಾವೇರಿ ವಿಚಾರ). ವಿಜಯ್ ಅವರೊಂದಿಗೆ ಕುಳಿತು ಮಾತನಾಡುವ ಮೂಲಕ ಆ ಸಮಸ್ಯೆಗಳನ್ನು ಬಗೆಹರಿಸುವ ಕಾಲ ಬರಬಹುದು ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

HD Devegowda
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಾರದ ಪುತ್ರನ ಬಗ್ಗೆ ಈ ಹಿಂದೆ ವಿಜಯ್ ಏನು ಹೇಳಿದ್ರು ಗೊತ್ತಾ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com