ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

ಶಾಸಕರಿಂದ ಆಯ್ಕೆಯಾದ ಏಳು ಎಂಎಲ್‌ಸಿಗಳ ಅವಧಿ ಜೂನ್ 30 ರಂದು ಮುಕ್ತಾಯಗೊಳ್ಳಲಿದೆ.
Biennial polls to seven Karnataka Legislative Council seats on June 18
ವಿಧಾನಸೌಧ
Updated on

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಿಸಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ ಎಂದು ಮಂಗಳವಾರ ತಿಳಿಸಿದೆ.

ಶಾಸಕರಿಂದ ಆಯ್ಕೆಯಾದ ಏಳು ಎಂಎಲ್‌ಸಿಗಳ ಅವಧಿ ಜೂನ್ 30 ರಂದು ಮುಕ್ತಾಯಗೊಳ್ಳಲಿದೆ.

ಕಾಂಗ್ರೆಸ್ ಸದಸ್ಯರಾದ ಗೋವಿಂದ ರಾಜು, ನಸೀರ್ ಅಹ್ಮದ್, ತಿಪ್ಪಣ್ಣಪ್ಪ ಮತ್ತು ಬಿ ಕೆ ಹರಿಪ್ರಸಾದ್, ಬಿಜೆಪಿ ಸದಸ್ಯರಾದ ಎನ್ ನಾಗರಾಜು(ಎಂಟಿಬಿ), ಪ್ರತಾಪ್ ಸಿಂಹ ನಾಯಕ್ ಕೆ ಮತ್ತು ಸುನಿಲ್ ವಲ್ಲ್ಯಾಪುರ ಅವರ ಅವಧಿ ಜೂನ್ 30 ರಂದು ಮುಕ್ತಾಯಗೊಳ್ಳಲಿದೆ.

Biennial polls to seven Karnataka Legislative Council seats on June 18
ಕರ್ನಾಟಕದ 4 ಸೇರಿ 10 ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಜೂನ್ 18ಕ್ಕೆ ಚುನಾವಣೆ: EC ಘೋಷಣೆ

ತೆರವಾಗುವ ಈ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಈ ಸಂಬಂಧ ಜೂನ್ 1 ರಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದೆ.

ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 8 ಆಗಿದ್ದು, ಮರುದಿನ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂಪಡೆಯಲು ಜೂನ್ 11 ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಅದೇ ಮತ ಎಣಿಕೆ ಸಹ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com