ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಷಡ್ಯಂತ್ರದಲ್ಲಿ ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ ಭಾಗಿ: ಕುಮಾರಸ್ವಾಮಿ

ಗೃಹ ಸಚಿವರೇ ಅಧಿಕಾರ ‌ಇದೆ ಅಂತ ಏನು ಬೇಕಾದ್ರು ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನ ಅರೆಸ್ಟ್‌ ಮಾಡ್ತೀರಾ? ನಾನೇ ಈಗ ನಿನ್ನ ಕಚೇರಿಗೆ ಬರ್ತೀನಿ, ತಾಖತ್ತಿದ್ದರೆ ನನ್ನನ್ನ ಅರೆಸ್ಟ್‌ ಮಾಡಿ
kripa alva and kumaraswamy
ಕೃಪಾ ಆಳ್ವಾ ಮತ್ತು ಕುಮಾರಸ್ವಾಮಿ
Updated on: 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ರಾಜ್ಯದ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ನಲ್ಲಿ ಕೃಪಾ ಆಳ್ವಾ ನೇರವಾಗಿ ಭಾಗಿಯಾಗಿದ್ದಾರೆ ಎಂದಿದ್ದಾರೆ. ಗೃಹ ಸಚಿವರೇ ಅಧಿಕಾರ ‌ಇದೆ ಅಂತ ಏನು ಬೇಕಾದ್ರು ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನ ಅರೆಸ್ಟ್‌ ಮಾಡ್ತೀರಾ? ನಾನೇ ಈಗ ನಿನ್ನ ಕಚೇರಿಗೆ ಬರ್ತೀನಿ, ತಾಖತ್ತಿದ್ದರೆ ನನ್ನನ್ನ ಅರೆಸ್ಟ್‌ ಮಾಡಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಮೇಲೆ ಅನುಮಾನ ಬಂದರೆ ಅರೆಸ್ಟ್ ಮಾಡಿಸ್ತೀನಿ ಅಂತೀಯಾ? ಬಾ ಅಖಾಡಕ್ಕೆ ನೋಡೋಣ? ಸಿಎಂ ಪಕ್ಕದಲ್ಲಿ ಕೂತಿದ್ದವನ ಮೇಲೆ ಅನುಮಾನ ಬಂದಿಲ್ಲ. ಸಿಎಂ ಒಬ್ಬರನ್ನ ಟ್ರ್ಯಾಪ್‌ ಮಾಡಿಸಿದ್ದಾರೆ, ಅವರನ್ನ ಬಿಟ್ಟುಬಿಟ್ಟಿದ್ದಾರೆ.

kripa alva and kumaraswamy
ಸ್ಟಿಂಗ್‌ ಆಪರೇಷನ್‌ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಸಂಚು: ನನ್ನನ್ನ ರೇವಣ್ಣನಂತೆ ಜೈಲಿಗೆ ಕಳುಹಿಸಲು ಸಾಧ್ಯವೇ? ಕುಮಾರಸ್ವಾಮಿ

ನನ್ನ ಮಗನ ಪೋಸ್ಟರ್‌ ಅಂಟಿಸಿದಾಗ ಎಲ್ಲಿ ಹೋಗಿದ್ರಿ ಪ್ರಿಯಾಂಕ್‌ ಖರ್ಗೆ ಅವರೇ? ಹೆದರಿಸಿ ಬೆದರಿಸಿ ಮಾಡ್ತೀನಿ ಅಂದರೆ ನಾನು ರೆಡಿ, ನಿಮ್ಮ ಕಮೀಷನರ್ ಕಚೇರಿಗೆ ಬರ್ತೀನಿ ಅರೆಸ್ಟ್ ಮಾಡಿ ಅಂತ ಮಾಡಲಿ ಎಂದು ಸವಾಲ್‌ ಎಸೆದರು.

ನಾವೇನು ಎಲೆಕ್ಟ್ರಾನಿಕ್ ಉಪಕರಣಗಳನ್ನ ಜೆಪಿ ನಗರದ ಮನೆಯಲ್ಲಿ ಇಟ್ಟುಕೊಂಡಿದ್ದೀವಾ? ಅಧಿಕಾರ ಕೊಟ್ಟಾಗ ನ್ಯಾಯಯುತವಾಗಿ ನಡೆಸಬೇಕು ಅಲ್ಲವಾ? ಸ್ಟಿಂಗ್ ಮಾಡಿದವನ್ನ ಯಾಕೆ ಅರೆಸ್ಡ್ ಮಾಡಿಲ್ಲ? ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯನ್ನ ಕೊಲೆ ಮಾಡ್ತೀನಿ ಅಂತಾನೆ. ಯಾಕೆ ಅರೆಸ್ಟ್ ಮಾಡಿಲ್ಲ? ನಾನು ಈ ಮಟ್ಟದ ಪದ ಬಳಕೆ ಮಾಡಲಿಲಿಲ್ಲ. ಅವರು ಪದ ಬಳಸಿದ್ದಕ್ಕೆ ಕೋಪ ಬಂದು ಮಾತನಾಡಿದ್ದೇನೆ, ಅದಕ್ಕಾಗಿ ಜನರಲ್ಲಿ ಕ್ಷಮೆ ಕೇಳ್ತೀನಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com