2028ರಲ್ಲಿ JD(S)-BJP ಮೈತ್ರಿಕೂಟ ಅಧಿಕಾರಕ್ಕೆ; ಈ ಬಾರಿ ನನ್ನ ಇನ್ನೊಂದು ಮುಖ ತೋರಿಸುತ್ತೇನೆ: ಹೆಚ್ ಡಿಕೆ

2008-09ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಸ್ಮರಿಸಿದ ಕುಮಾರಸ್ವಾಮಿ, ಆಗ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಹೋರಾಟ ನಡೆಸಿರಲಿಲ್ಲ. ತಾವೇ ಸ್ವತಃ ಹೋರಾಟ ನಡೆಸಿ, ಆಡಳಿತದಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದೆ, ಆಗ ಕಾಂಗ್ರೆಸ್‌ ಎಲ್ಲಿತ್ತು ಎಂದು ಕೇಳಿದರು.
H D Kumaraswamy
ಹೆಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: 2028ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಬಾರಿ ತಾವು ಬೇರೆ ಮುಖವನ್ನು ತೋರಿಸುವುದಾಗಿ ಹೇಳಿದ್ದಾರೆ.

ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಂದಿಗೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ, ಎಲ್ಲವನ್ನೂ ಮುಕ್ತವಾಗಿ ಬಿಟ್ಟಿದ್ದೆ ಎಂದು ತಿಳಿಸಿದರು.

ತಮ್ಮ ವಿರುದ್ಧ ಕೇಳಿಬಂದಿದ್ದ 150 ಕೋಟಿ ರೂಪಾಯಿ ಹಗರಣದ ಆರೋಪವನ್ನು ಪ್ರಸ್ತಾಪಿಸಿದ ಅವರು, ಆಗಲೂ ತಾವು ಅಧಿಕಾರ ದುರುಪಯೋಗ ಮಾಡಿಕೊಂಡಿರಲಿಲ್ಲ. ಇಂದಿನಂತೆಯೇ ಅಂದೂ ಏಕಾಂಗಿಯಾಗಿ ಹೋರಾಡಿದ್ದೆ ಎಂದು ಹೇಳಿದರು.

H D Kumaraswamy
ನಾನೇ ವಿಡಿಯೋ ಮಾಡಿದ್ದೇನೆಂದು ಕಿಂಗ್ ಪಿನ್ ಹೇಳಿದ್ದಾರೆ; ಇದನ್ನೆಲ್ಲ ನೋಡಿ ಸಿದ್ದರಾಮಯ್ಯ ರಕ್ತ ಕುದಿಯುತ್ತಿಲ್ವಾ?: HDK

2008-09ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಸ್ಮರಿಸಿದ ಕುಮಾರಸ್ವಾಮಿ, ಆಗ ಕಾಂಗ್ರೆಸ್‌ ಆಡಳಿತಾರೂಢ ಪಕ್ಷದ ವಿರುದ್ಧ ಹೋರಾಟ ನಡೆಸಿರಲಿಲ್ಲ. ಬದಲಿಗೆ, ತಾವೇ ಸ್ವತಃ ಹೋರಾಟ ನಡೆಸಿ, ಆಡಳಿತದಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದೆ, ಆಗ ಕಾಂಗ್ರೆಸ್‌ ಎಲ್ಲಿತ್ತು ಎಂದು ಕೇಳಿದರು.

ಇಂದಿನ ಆಡಳಿತಾರೂಢ ಪಕ್ಷಕ್ಕೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ಇಂದೂ ನಾನು ನಿಮಗೆ ಹೇಳುತ್ತಿದ್ದೇನೆ. ಅಧಿಕಾರದಲ್ಲಿರುವ ಪಕ್ಷ ತನ್ನ ಆಡಳಿತಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದರು.

ಚದುರಂಗದ ಆಟವನ್ನು ಉದಾಹರಣೆಯಾಗಿ ನೀಡಿದ ಅವರು, ಚದುರಂಗದ ಆಟದಲ್ಲಿ ಕಾಯಿಗಳನ್ನು ಹೇಗೆ ನಡೆಸಬೇಕು ಎಂಬುದು ಅವರಿಗೆ ಮಾತ್ರ ಗೊತ್ತಿಲ್ಲ. ಕಾಯಿಗಳನ್ನು ಹೇಗೆ ಚಲಿಸಬೇಕು ಎಂಬುದೂ ನನಗೆ ಗೊತ್ತಿದೆ. ಆ ಸಮಯ ಬರುತ್ತದೆ, ಅಲ್ಲಿಯವರೆಗೆ ಕಾಯೋಣ ಎಂದು ಹೇಳಿದರು.

2028ರಲ್ಲಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಈಗಿನ ದುರಾಡಳಿತಕ್ಕಾಗಿ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ ಎಂದರು.

H D Kumaraswamy
'ಸ್ಟಿಂಗ್' ಹಿಂದೆ ಕುಮಾರಸ್ವಾಮಿಯೇ ಯಾಕೆ ಇರಬಾರದು? ಅವರ ಬಳಿ ದಾಖಲೆ ಇದ್ದರೇ ನೀಡಲಿ: ಪ್ರಿಯಾಂಕ್ ಖರ್ಗೆ

‘ಆರೋಪಿತ ಸ್ಟಿಂಗ್‌ ಆಪರೇಷನ್‌ ಬಗ್ಗೆ ಸೂಕ್ತ ತನಿಖೆಯ ಸುಳಿವಿಲ್ಲ’

ಆರೋಪಿತ ಸ್ಟಿಂಗ್‌ ಆಪರೇಷನ್‌ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ ನಿನ್ನೆ ತಾವು ಪೊಲೀಸ್ ಮಹಾನಿರ್ದೇಶಕರನ್ನು (DGP) ಭೇಟಿಯಾಗಿ ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.

ಅಲ್ಲಿ ಹಾಜರಿದ್ದವರ ಮುಖಭಾವ ನೋಡಿದರೆ, ಸೂಕ್ತ ತನಿಖೆ ನಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಪ್ರಕರಣದಲ್ಲಿ ಯಾರೆಲ್ಲ ಸಿಲುಕಿಕೊಂಡಿದ್ದಾರೆ ಎಂಬುದೂ ತಮಗೆ ತಿಳಿದಿಲ್ಲ ಎಂದು ತಿಳಿಸಿದರು.

ಸ್ಟಿಂಗ್‌ ಆಪರೇಷನ್‌ ಹಿಂದೆ ಇರುವ ವ್ಯಕ್ತಿಯ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಆ ವ್ಯಕ್ತಿ ತಾನೇ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾನೆ ಮತ್ತು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ, ಅವನೇ ಅದನ್ನು ಒಪ್ಪಿಕೊಂಡಿದ್ದಾನೆ. ನಾನಿನ್ನು ಯಾವ ದಾಖಲೆಗಳನ್ನು ಒದಗಿಸಬೇಕು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಆ ವ್ಯಕ್ತಿಯ ಮುಂದೆ ದಾಸ್ಯ ಮನೋಭಾವ ತಾಳಿದ್ದು, ಆತನನ್ನು ಪೋಷಿಸುತ್ತಿದೆ, ಮಾಜಿ ಪ್ರಧಾನಿಯೊಬ್ಬರನ್ನು ಉಲ್ಲೇಖಿಸುವಾಗ ಆ ವ್ಯಕ್ತಿ ಏಕವಚನದಲ್ಲಿ ಅಗೌರವಯುತವಾಗಿ ಮಾತನಾಡಿದ್ದಾನೆ ಮತ್ತು ಸಂಬಂಧವಿಲ್ಲದ ಪ್ರಕರಣಗಳನ್ನು ಪರಸ್ಪರ ಜೋಡಿಸುತ್ತಿದ್ದಾನೆ ಎಂದೂ ಆರೋಪಿಸಿದರು.

ಕಳೆದ ಒಂದು ವಾರದಲ್ಲಿ ಗೃಹ ಸಚಿವರು ನಡೆದುಕೊಂಡ ರೀತಿಯನ್ನು ಗಮನಿಸಿದರೆ, ತಮ್ಮನ್ನು ಕೆರಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿರುವಂತೆ ಕಾಣುತ್ತಿದೆ, ಇನ್ನು ಸಿದ್ದರಾಮಯ್ಯ ಅವರ ಮೌನವೂ ಸಂದೇಹ ಹುಟ್ಟಿಸುತ್ತಿದೆ. ಅವರು ನೀಡಿದ ದೂರಿನ ಆಧಾರದಲ್ಲಿ ಯಾವುದಾದರೂ ತನಿಖೆ ನಡೆಯುತ್ತಿದೆಯೇ ಎಂಬ ಅನುಮಾನ ನನಗಿದೆ ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳ ಕುರಿತು ತಾವು ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಸರ್ಕಾರವೇ ತಮ್ಮ ಬಳಿ ದಾಖಲೆಗಳನ್ನು ಕೇಳುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com