ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ್-ವಿಜಯೇಂದ್ರ ಭೇಟಿ: ರಾಜಕೀಯದಲ್ಲಿ ಗರಿಗೆದರಿದ ಲೆಕ್ಕಾಚಾರ!

ಬಿಜೆಪಿ ಹುಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಮಾಡಿದ್ದು ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬುದು ಸಾಬೀತಾಗಿದೆ.
BY Vijayendra, Basanagouda Patil Yatnal
ಬಿವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್
Updated on: 

ಬೆಂಗಳೂರು/ಧಾರವಾಡ: ಬಿಜೆಪಿ ಹುಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಮಾಡಿದ್ದು ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ ಎಂಬುದು ಸಾಬೀತಾಗಿದೆ. ಧಾರವಾಡದ ಛಬ್ಬಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಉಭಯ ನಾಯಕರು ಪರಸ್ಪರ ಭೇಟಿ‌ಯಾಗಿದ್ದಾರೆ.

BY Vijayendra, Basanagouda Patil Yatnal
ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಘಟನೆಗಳಿಗೆ ರಾಹುಲ್ ಗಾಂಧಿ ಬೆಂಬಲ, ಆರ್ಥಿಕ ನೆರವು ನೀಡುತ್ತಿದ್ದಾರೆ: ವಿಜಯೇಂದ್ರ ಆರೋಪ; Video

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಕು ಆರೋಪಗಳ ಮೇಲೆ ಆರೋಪ ಮಾಡಿದ್ದರಿಂದ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ವಿನಾಕಾರಣ ಆರೋಪಗಳನ್ನು ಮಾಡಬೇಡಿ ಎಂದು ಪಕ್ಷ ಹಲವು ಬಾರಿ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ಈ ನೋಟಿಸ್ ಗಳಿಗೆ ಸುಮ್ಮನಾಗದ ಯತ್ನಾಳ್ ಅವರು, ನಂತರ ಬಹಿರಂಗವಾಗಿಯೇ ಬಿಎಸ್​​ವೈ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com