‘ಬಾಂಬೆ ಡೇಸ್‌’ ಪುಸ್ತಕ ಬಿಡುಗಡೆ ಮಾಡಲ್ಲ, ಮತ್ತಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟ ಇಲ್ಲ: ಎಚ್‌. ವಿಶ್ವನಾಥ್‌

ಪುಸ್ತಕ ಹೊರಬಂದರೆ ಮೂರೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದೀರಿ. ಸಾರ್ವಜನಿಕರಿಗೆ ಎಲ್ಲವೂ ಅರ್ಥವಾಗುತ್ತದೆ' ಎಂದು ಈ ಹಿಂದೆ ವಿಶ್ವನಾಥ್ ಎಚ್ಚರಿಕೆ ನೀಡಿದ್ದರು.
H Vishwanath
ಎಚ್‌ ವಿಶ್ವನಾಥ್‌
Updated on: 

ಮೈಸೂರು: ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ ವಿಶ್ವನಾಥ್‌ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದು, ‘ಬಾಂಬೆ ಡೇಸ್’ ಪುಸ್ತಕವನ್ನು ನಾನು ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆ ಡೇಸ್ ಪುಸ್ತಕವನ್ನು ನಾನು ಸಂಪೂರ್ಣವಾಗಿ ಬರೆದಿದ್ದೇನೆ. ಆದರೆ, ಪ್ರಕಟ ಮಾಡದಿರಲು ನಿರ್ಧರಿಸಿದ್ದೇನೆ. ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ ಜನ ಮತ್ತಷ್ಟು ಅಸಹ್ಯಪಟ್ಟುಕೊಳ್ಳುತ್ತಾರೆ. ಈ ಕಾರಣದಿಂದ ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದರು.

ಈಗಾಗಲೇ ಜನ ರಾಜಕೀಯ ಮತ್ತು ರಾಜಕೀಯ ನಾಯಕರ ಬಗ್ಗೆ ಬಹಳ ಅಸಹ್ಯ ಭಾವನೆ ಹೊಂದಿದ್ದಾರೆ. ಈ ಪುಸ್ತಕದ ಮೂಲಕ ಮತ್ತಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟ ಇಲ್ಲ ಎಂದು ಅವರು ಹೇಳಿದರು.

'ಬಾಂಬೇ ಬಾಯ್ಸ್' ಪುಸ್ತಕ ಹೊರಬಂದರೆ ಮೂರೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದೀರಿ. ಸಾರ್ವಜನಿಕರಿಗೆ ಎಲ್ಲವೂ ಅರ್ಥವಾಗುತ್ತದೆ. ಜನರು ದಡ್ಡರಲ್ಲ ಎಂದು ಈ ಹಿಂದೆ ವಿಶ್ವನಾಥ್ ಅವರು ಎಚ್ಚರಿಕೆ ನೀಡಿದ್ದರು.

H Vishwanath
ರಾಜಕೀಯವಾಗಿ ಸಿದ್ದರಾಮಯ್ಯರನ್ನು ಮುಗಿಸಿದರೆ ಕೆಲವರ ಹಾದಿ ಸುಲಭ: 'ಸ್ಟಿಂಗ್' ಹಿಂದಿನ ಲೆಕ್ಕಾಚಾರ ಬಿಚ್ಚಿಟ್ಟ ಎಚ್‌ ವಿಶ್ವನಾಥ್!

ರಾಜ್ಯದಲ್ಲಿ ಇಂತಹ ಕೆಟ್ಟ ರಾಜಕಾರಣ ನಡೆಯುತ್ತಿರುವುದು ನಾವೆಲ್ಲರೂ ತಲೆತಗ್ಗಿಸಬೇಕಾದ ವಿಷಯ. 'ಸ್ಟಿಂಗ್ ಆಪರೇಷನ್' ಕುತಂತ್ರದ ರಾಜಕಾರಣದಿಂದ ವಿರೋಧ ಪಕ್ಷದವರು ಅಥವಾ ಸ್ವಪಕ್ಷದವರು ಪರಸ್ಪರ ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com