ದಲಿತರು, ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರಬೇಡಿ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಕರೆ

ತಕ್ಷಣದ ರಾಜಕೀಯ ಲಾಭಕ್ಕಾಗಿ ಬಿಜೆಪಿಗೆ ಸೇರಬೇಡಿ ಎಂದು ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷವು ಅವರಿಗೆ ಸೂಕ್ತ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುತ್ತದೆ ಎಂದು ಪ್ರತಿಪಾದಿಸಿದರು.
BK Hariprasad
ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಕೆ ಹರಿಪ್ರಸಾದ್
Updated on

ಬೆಂಗಳೂರು: ತಕ್ಷಣದ ರಾಜಕೀಯ ಲಾಭಕ್ಕಾಗಿ ಬಿಜೆಪಿಗೆ ಸೇರಬೇಡಿ ಎಂದು ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷವು ಅವರಿಗೆ ಸೂಕ್ತ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುತ್ತದೆ ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕ ಎನ್.ಎಲ್. ನರೇಂದ್ರ ಬಾಬು ಕಾಂಗ್ರೆಸ್‌ಗೆ ಮರಳಿದ ಸಂದರ್ಭದಲ್ಲಿ 'ಭಾರತ್ ಜೋಡೋ ಸಭಾಂಗಣ'ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್, ತ್ವರಿತ ರಾಜಕೀಯ ಏಳಿಗೆಯ ಆಸೆಯಿಂದ ಬಿಜೆಪಿಗೆ ಸೇರುವವರನ್ನು ಆ ಪಕ್ಷವು ಅಂತಿಮವಾಗಿ ಕೇವಲ 'ಬಳಸಿಕೊಳ್ಳುತ್ತದೆ' ಎಂದರು. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ತೊರೆದಿದ್ದವರು ಪಕ್ಷಕ್ಕೆ ಮರಳುವಂತೆಯೂ ಹರಿಪ್ರಸಾದ್ ಮನವಿ ಮಾಡಿದರು.

BK Hariprasad
ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

ನರೇಂದ್ರ ಬಾಬು ರಾಜಕೀಯ ಪಯಣವನ್ನು ಸ್ಮರಿಸಿದ ಹರಿಪ್ರಸಾದ್, 2001ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ನಂತರ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ತಾವು ಸಹಾಯ ಮಾಡಿದ್ದಾಗಿ ಹಾಗೂ ನಂತರ ಅವರಿಗೆ ಪಕ್ಷದ ಟಿಕೆಟ್ ದೊರೆತು ಅವರು ಶಾಸಕರಾಗಿದ್ದನ್ನು ನೆನಪಿಸಿದರು. ಬಾಬು ಅವರನ್ನು ನೋಡಿ ತಾವೂ ತಕ್ಷಣ ಶಾಸಕ ಅಥವಾ ಸಚಿವರಾಗಬಹುದು ಎಂದು ನಿರೀಕ್ಷಿಸಬೇಡಿ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ತಮಗೆ ಕೆಪಿಸಿಸಿ ಅಧ್ಯಕ್ಷರಾಗಲು 53 ವರ್ಷಗಳ ಕಾಲಾವಕಾಶ ಬೇಕಾಯಿತು ಎಂಬುದನ್ನು ಉಲ್ಲೇಖಿಸಿದರು.

ಹಲಾಲ್ ಮತ್ತು ಹಿಜಾಬ್‌ನಂತಹ ವಿಷಯಗಳಿಗೆ ಸಂಬಂಧಿಸಿದ ಕೋಮುಗಲಭೆ ಅಥವಾ ಪ್ರತಿಭಟನೆಗಳಲ್ಲಿ ಜೈಲಿಗೆ ಹೋದವರು ಶೂದ್ರರು. ಯಡಿಯೂರಪ್ಪ ಮತ್ತು ಸಿ.ಟಿ. ರವಿಯಂತಹ ಬಿಜೆಪಿ ನಾಯಕರ ಮಕ್ಕಳು ಅಂತಹ ಪ್ರತಿಭಟನೆಗಳಿಗಾಗಿ ಜೈಲಿಗೆ ಹೋಗಲಿಲ್ಲ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಾರೆ, ಆದರೆ ನಿಮ್ಮ ಮಕ್ಕಳು ಜೈಲು ಸೇರುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com