'ಅತಿ ತುರ್ತಾಗಿ ಕಾಂಗ್ರೆಸ್ ಕೊಳಚೆ ನೀರು ಸಂಸ್ಕರಣಾ ಘಟಕ' ಅಳವಡಿಸಬೇಕು: ಸುರೇಶ್ ಕುಮಾರ್

ಈ ಹೊಲಸು ಬಾಯಿ ಹೊರಸೂಸುವ ದುರ್ವಾಸನೆ ರಾಜ್ಯದಲ್ಲೆಲ್ಲಾ ಹರಡಿ ಬೇರೆ ಬೇರೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಲೇವಡಿ ಮಾಡಿದ್ದರು.
'ಅತಿ ತುರ್ತಾಗಿ ಕಾಂಗ್ರೆಸ್ ಕೊಳಚೆ ನೀರು ಸಂಸ್ಕರಣಾ ಘಟಕ' ಅಳವಡಿಸಬೇಕು: ಸುರೇಶ್ ಕುಮಾರ್
Updated on

ಬೆಂಗಳೂರು: ಕಾಂಗ್ರೆಸ್ ರಾಜ್ಯಾಧ್ಯಕ್ಷ BK ಹರಿಪ್ರಸಾದ್ ರವರ ಅತ್ಯಂತ ಕೀಳು ಮಟ್ಟದ ಮಾತುಗಳನ್ನು ನೋಡಿದಾಗ ಮನಸ್ಸಿಗೆ ಸ್ಪಷ್ಟವಾಗಿ ಅನಿಸುವುದು ಆ ಪಕ್ಷಕ್ಕೆ ಅತಿ ತುರ್ತಾಗಿ ಕಾಂಗ್ರೆಸ್ ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಸಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಹೊಲಸು ಬಾಯಿ ಹೊರಸೂಸುವ ದುರ್ವಾಸನೆ ರಾಜ್ಯದಲ್ಲೆಲ್ಲಾ ಹರಡಿ ಬೇರೆ ಬೇರೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಲೇವಡಿ ಮಾಡಿದ್ದರು.

ಇದಕ್ಕೆ ಎಕ್ಸ್ ಖಾತೆ ಮೂಲಕ ಹರಿಪ್ರಸಾದ್ ತಿರುಗೇಟು ನೀಡಿದ್ದು, ಶ್ಯಾಡೋ ಪಿಎಂ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯ ಮೇಲಿನ ವೈಯುಕ್ತಿಕ ದಾಳಿ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಖರ್ಗೆ ಮೇಲಿನ ಅಸ್ಪೃಶ್ಯತೆಯ ಪ್ರಯೋಗಗಳು ದುರ್ಜನ ಶಾಸಕ ಸುರೇಶ್ ಕುಮಾರ್ ಗೆ ಕಣ್ಣಿಗೆ ಬಿದ್ದಿಲ್ಲವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಮೋದಿಯ ವಿರುದ್ದ ಮಾತಾಡಿದ ತಕ್ಷಣ ‘ಬಿ ಕೆ ಹರಿಪ್ರಸಾದ್ ಅವರದ್ದು ಹೊಲಸು ಬಾಯಿ’ ಎಂದು ಸುರೇಶ್ ಕುಮಾರ್ ಟೀಕಿಸುತ್ತಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಕೈ ಬಾಯಿ ಹೊಲಸು ಮಾಡಿಕೊಂಡಿಲ್ಲ. ಆದರೆ ಸುರೇಶ್ ಕುಮಾರ್ ಮಾತ್ರ ಹೊಲಸಲ್ಲೇ ಹೊರಲಾಡಿ ‘ಸಜ್ಜನ’ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಸುರೇಶ್ ಕುಮಾರ್ ಮೈಗೆ ಮೆತ್ತಿಕೊಂಡಿರುವ ಹೊಲಸು ತೊಳೆಯಲು ವಿಶ್ವದ ಅತೀ ದೊಡ್ಡ ಕೊಳಚೆ ಸಂಸ್ಕರಣಾ ಘಟಕವಾದ ಈಜಿಪ್ಟ್‌ನಲ್ಲಿರುವ ನ್ಯೂ ಡೆಲ್ಟಾ ನೀರು ಸಂಸ್ಕರಣಾ ಘಟಕಕ್ಕೂ ಸಾದ್ಯವಾಗಲ್ಲ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಸುರೇಶ್ ಕುಮಾರನ ಹೊಲಸು ತೊಳೆಯಲು 'ಕೊಳಚೆ ನೀರು ಸಂಸ್ಕರಣಾ ಘಟಕ' ಸಾಲುವುದಿಲ್ಲ. ಈ ಹೊಲಸು ಬಿಜೆಪಿಯ ಪರಾಂಪರಾಗತ ಹೊಲಸು. ಪ್ರಧಾನಿ ಮೋದಿ ಪಿಎಂ ಕೇರ್ ನ ಹಣ ನುಂಗಿದರೆ, ಅವರ ಅನುಯಾಯಿ ದುರ್ಜನ ಸುರೇಶ್ ಕುಮಾರ್ ಸಿಎಂ ನಿಧಿಯ ಹಣ ನುಂಗಿದ್ದಾನೆ. 'ಸಜ್ಜನ’ ಎಂಬ ಬೋರ್ಡ್ ಹಾಕಿಕೊಂಡ ಮಾತ್ರಕ್ಕೆ ಯಾವ ದುರ್ಜನರೂ ಸಜ್ಜನರಾಗುವುದಿಲ್ಲ. ಜನರ ಹಣ, ಜನರ ಹಕ್ಕು ಮತ್ತು ಪ್ರಜಾಪ್ರಭುತ್ವದ ಪ್ರಶ್ನೆ ಬಂದಾಗ ಮುಖವಾಡ ಕಳಚುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com