ಮಕ್ಕಳ ಕೈಯಲ್ಲಿ ಮೊಬೈಲ್ ಕೊಡೋದ್ ತಪ್ಪಾ?: ಹಣ ವಂಚನೆ ಬಯಲಿಗೆಳೆದ ಮೊಬೈಲ್ ಗೀಳಿನ ಬಾಲಕಿ

ಮಕ್ಕಳ ಕೈಗೆ ಮೊಬೈಲು ಕೊಡಬೇಡಿ, ಮಕ್ಕಳು ದುಡ್ಡು ಕಳೀತಾರೆ, ಹಾಳಾಗಿಹೋಗುತ್ತಾರೆ ಎನ್ನುವ ಮಾತಿದೆ. ಆದರೆ ಮಗುವಿನ ಕೈಗೆ ಮೊಬೈಲು ಕೊಟ್ಟಿದ್ದರಿಂದಲೇ ಅನ್ಯಾಯವಾಗಿ ಪರರ ಪಾಲಾಗುತ್ತಿದ್ದ ಎಪ್ಪತ್ತು ರೂ. ಮನೆ ಸೇರಿದ ಸ್ವಾರಸ್ಯಕರ ಕಥೆ ಇಲ್ಲಿದೆ.
ಮಕ್ಕಳ ಕೈಯಲ್ಲಿ ಮೊಬೈಲ್ ಕೊಡೋದ್ ತಪ್ಪಾ?: ಹಣ ವಂಚನೆ ಬಯಲಿಗೆಳೆದ ಮೊಬೈಲ್ ಗೀಳಿನ ಬಾಲಕಿ

ಲೇಖಕಿ: ಹೀರಾ ರಮಾನಂದ್

ನನಗಂತೂ ಮೊಬೈಲ್`ಕಂಡರೆ ಅಷ್ಟಕಷ್ಟೇ.ಒಂದೋ ಸಮಯವಿರಲಿಲ್ಲ. ಇನ್ನೊಂದು ಹೇಳಿದ ಕೂಡಲೇ ನನಗಂತೂ ತಲೆಗೆ ಹೋಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ನಮ್ಮ ಪಕ್ಕದ ಮನೆಯ ಜಾನಕಮ್ಮ ಹೇಳಿದ ವಿಷಯ ಕೇಳಿ ನಾನು ಪೆಚ್ಚಾಗಿ ಕೂತೆ. ನನ್ನ ಕೆಲಸ ಮುಗಿಸಿ ಸೋಫದಲ್ಲಿ ಕೂತಾಗ ಜಾನಕಮ್ಮನ ಮಾತು ಮೆಲುಕು ಹಾಕುತ್ತಾ ಇದ್ದೆ. 

ಜಾನಕಮ್ಮನ ಮಗಳು ವೇದಾ ಇನ್ನೂ ಹೈಸ್ಕೂಲ್ ದಾಟಿರಲಿಲ್ಲ. ಒದುವುದರಲ್ಲಿ ಜಾಣೆ ಅಲ್ಲದಿದ್ದರೂ ತುಂಬಾ ಬುದ್ದಿವಂತೆ. ಅಂಥವಳ ಕೈಯಲ್ಲಿ ಮೊಬೈಲ್ ಬಂದಾಗ ಈ ತರಹ ಆಗುವುದೆಂದು ಯಾರು ಅಂದುಕೊಂಡಿರಲಿಲ್ಲ. ಜಾನಕಮ್ಮ ಕೆಲಸ ಮುಗಿಸಿ ಹುಸ್ಸೆಂದು ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಿರಬೇಕಾದರೆ, ವೇದಾ ಬಂದು ಅಮ್ಮ ನಿನಗೆ ಮೊಬೈಲ್ ಹೇಳಿಕೊಡುತ್ತೇನೆ ಎಂದಳು. 

ನನಗಂತೂ ಸಿಟ್ಟು. ಎನೂ ತಲೆಹರಟೆ ಮಾಡಬೇಡ ಎಂದರೂ ವತ್ತಾಯ ಮಾಡಿ ಕಾಲ್ ಮಾಡುವುದು, ಕಾಲ್ ಡಿಲೀಟ್ ಮಾಡುವುದು ಹಾಗೂ ಪ್ಲೇ ಸ್ಟೋರ್‌ನಿಂದ ಕಾಲ್ ರೆಕಾರ್ಡರ್ ಎಪ್ ಡೌನ್ಲೋಡ್ ಮಾಡಿ ಅಮ್ಮ ನೀನು ಉಪಯೋಗಿಸು ಎಂದು ಕೊಟ್ಟಳು. ಇದೆಲ್ಲಾ ತಿಳಿಯದ ಜಾನಕಮ್ಮ ನಿಧಾನವಾಗಿ ಮೊಬೈಲ್ ಗೀಳು ಶುರು ಮಾಡಿಕೊಂಡಳು. 

ಸುಮಾರು ದಿನಗಳ ನಂತರ ಅಡಿಗೆ ಮನೆಯಲ್ಲಿದ್ದಾಗ ಫೋನ್ ಬಂತು. ಆ ಕಡೆ ಹಲೋ ಎಂದರೂ ಎನೂ ಕೇಳಿಸುತ್ತಿರಲಿಲ್ಲ. ಮಿಕ್ಸಿ ಆಫ್ ಮಾಡಿ ಬಂದಾಗ ಹಲೋ ಎಂದಾಗ ಆಕಡೆ ಹಲೋ ನಾವು ಕಾರ್ಪೆಟ್ ಕ್ಲೀನ್ ಮಾಡುವ ಎಜೆನ್ಸಿಯವರು. ನಿಮ್ಮ ಮಹಡಿ ಮನೆ ಬಾಡಿಗೆಗೆ ಇದೆಯೆಂದು ಕೇಳಿದ್ದೆ. ಕೊಡಬಹುದಾ ಎಂದಾಗ, ಒಂದೇ ಸವನೇ ಸಂತೋಷದಿಂದ ಯಾರು ಎನು ಎತ್ತ ಎಂದೇನೂ ಕೇಳದೇ ಇಪ್ಪತ್ತು ಸಾವಿರ ಬಾಡಿಗೆ ಅಡ್ವಾನ್ಸ್ ಒಂದು ಲಕ್ಷ ಎಂದೆ. ಅವರು ಕೂಡಲೇ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕೊಡಿ ಎಂದರು. ನಾನೂ ಎನೂ ತಿಳಿಯದೇ ಅಕೌಂಟ್ ನಂಬರ್ ಜೊತೆಗೆ, ಗೌಪ್ಯವಾದ ಪಿನ್ ನಂ ಕೂಡಾ ಕೊಟ್ಟು ಸುಮ್ಮನಾದೆ. ನಂತರ ಈ ವಿಚಾರ ಮರೆತೇ ಬಿಟ್ಟಿದ್ದೆ. 

ಮಾರನೇಯ ದಿನ ಆಸ್ಪತ್ರೆಗೆ ಹೋಗಲು ದುಡ್ಡು ಬೇಕಾಗಿತ್ತು, ಯಜಮಾನರು ಎ ಟಿ ಎಮ್‌ಗೆ ಹೋದರೆ ಯಾರೋ ಎಪ್ಪತ್ತು ಸಾವಿರ ಡ್ರಾ ಮಾಡಿದ್ದಾರೆ ಕಸಿವಿಸಿಯಿಂದ ಮನೆಗೆ ಬಂದು ದೊಡ್ಡ ರಾದ್ದಾಂತ ಮಾಡಿದರು. ನಾನಂತೂ ಯಾರಿಗೂ ಕೊಟ್ಟಿಲ್ಲವೆಂದು ಅತ್ತರೂ ದುಡ್ಡು ಹೋಗಿದ್ದಕ್ಕೆ ಹೊಣೆಗಾರ ಯಾರು ಎಂದು ಯಜಮಾನರ ವಾದ. ಬ್ಯಾಂಕ್ ಮೇನೇಜರ್ ಬಳಿ ಕಂಪ್ಲೇಂಟ್ ಕೊಡಲು ಹೋದಾಗ ಎಲ್ಲಾ ವಿಚಾರಣೆ ಆಯಿತು. 

ಯಾರು ಬಂದಿದ್ದರು? ಯಾರ ಫೋನ್ ಬಂದಿತ್ತು? ಎಂಬಿತ್ಯಾದಿ ವಿವರ ಕೇಳಿದಾಗ ನಾನು ಮೊಬೈಲ್ ತೋರಿಸಿದೆ. ಅವರು ಎಲ್ಲಾ ಕಾಲ್ ನೋಟ್ ಮಾಡಿ ಕಾಲ್ ರೆಕಾರ್ಡಿಂಗ್ ನಲ್ಲಿ ಬಾಡಿಗೆ ಮನೆಯ ವಿಚಾರದ ಬಗ್ಗೆ ಕಾಲ್ ಕೇಳಿಸಿಕೊಂಡು, ಆ ನಂಬ್ರಕ್ಕೆ ಫೋನ್ ಮಾಡಿ ಅವರ ವಿಳಾಸ ಪತ್ತೆ ಹಚ್ಚಿದ್ರು. ನಂತರ ಸರಿಯಾಗಿ ವಿಚಾರಣೆ ನಡೆಸಿದ ನಂತರ ನಮ್ಮ ದುಡ್ಡು ಎಲ್ಲಾ ವಾಪಸ್ ಬಂತು. 

ಮನೆಗೆ ವಾಪಸು ಹಿಂದಿರುಗಿದವಳೇ ಜಾನಕಮ್ಮ ಮಗಳು ವೇದಾಳನ್ನು ಹಿಡಿದು ಮುದ್ದಿಸಿ, ಪುಟ್ಟಾ ಇವತ್ತು ನಿನ್ನಿಂದ ನಾವು ಬದುಕಿದ್ದೇವೆ ತಾಯಿ. ಚಿಕ್ಕ ಮಕ್ಕಳಾದರೆ ಎನು? ನಾವು ಮೊಬೈಲ್ ಬಳಸುವ ರೀತಿಯಲ್ಲಿದೆ. ನನಗೆ ತುಂಬಾ ಸಂತೋಷವಾಗುತ್ತಿದೆಯಮ್ಮ ಎಂದು ವೇದಾಳನ್ನು ಮುದ್ದಿಸಿದರು. ಕಾಲ್ ಬೆಲ್ ಕೇಳಿ ಎಚ್ಚೆತ್ತೆ. ಕಾಲ್ ರೆಕಾರ್ಡರ್ ಆಪ್ ರೂಪಿಸಿದ್ದು ಸಾರ್ಥಕ ಆಯಿತು ಎಂದು ಜಾನಕಮ್ಮ ಹೇಳಿದನ್ನು ಮೆಲುಕು ಹಾಕುತ್ತಾ ಇದ್ದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com