ಪ್ರೀತಿ ಎಂದರೆ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದಲ್ಲ, ಅದೊಂದು ಜವಾಬ್ದಾರಿ, ಬದ್ಧತೆ!
ಆದರ್ಶ ಪ್ರೇಮಕಥೆಗಳು ಅಮರವಾಗಿ ಉಳಿದಿರೋದು ತ್ಯಾಗದಿಂದಲೇ ಹೊರತು ಸಂಘರ್ಷದಿಂದಲ್ಲ. ಉಳಿದುಕೊಳ್ಳುವ ಪ್ರೇಮವಾದರೆ ಆ ಹೃದಯ ಮತ್ತೆ ನಿಮ್ಮನ್ನು ಹಂಬಲಿಸಿ ಬರುತ್ತೆ.
Published: 14th February 2022 09:45 AM | Last Updated: 14th February 2022 03:23 PM | A+A A-

ಸಾಂದರ್ಭಿಕ ಚಿತ್ರ

ಶುಭಾಶಯ ಮನಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ, ಹಾಗೂ ಇಂಗ್ಲಿಶ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಟಿವಿ ಮಾಧ್ಯಮದಲ್ಲಿ ಸುದ್ದಿ ನಿರೂಪಕಿಯಾಗಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿ ಅನುಭವವೂ ಬೆನ್ನಿಗಿದೆ. ಅಪ್ಪ ತರೋ ಚಾಕ್ಲೆಟ್ ಗೆ ಕಾಯೋದು, ಅಜ್ಜನ ಮೀಸೆ (ವಟ್ಟಕಾಕದ ಕೋಡಿನ ಹೂವು) ಹಿಡಿಯೋದು... ಫ್ರೆಂಡ್ಸ್ ಬೈಕ್ ಸಿಕ್ಕಿದ್ರೆ ಜಾಲಿ ರೈಡ್ ಹೋಗೋದು ತುಂಬಾ ಇಷ್ಟದ ಸಂಗತಿಗಳು.
ಪ್ರೇಮ, ಸಂಗಾತಿ ಸಂಬಂಧಗಳು ಸುದೀರ್ಘ ಕಾಲ ಉಳಿದುಕೊಳ್ಳುವುದು ಅದೃಷ್ಟ. ಪರಸ್ಪರ ಹೃದಯಗಳಲ್ಲಿ ಪ್ರೀತಿ ಗಾಢವಾದಷ್ಟೂ ತನ್ನ ಸಂಗಾತಿ ತನಗೆ ಮಾತ್ರ ಸೇರಿದವನು/ಳು ಎನ್ನುವಂತಹ ಪೊಸೆಸಿವ್ ನೆಸ್ ಹುಟ್ಟಿಕೊಂಡುಬಿಡುತ್ತೆ.
ಪ್ರತಿಯೊಬ್ಬ ಪ್ರೇಮಿಯೂ/ಗಂಡ/ಹೆಂಡತಿ ತನ್ನ ಸಂಗಾತಿಯಿಂದ ನಿಷ್ಠೆ ಬಯಸ್ತಾರೆ. ಹಾಗಾಗಿಯೇ ತನ್ನ ಸಂಗಾತಿ ತನ್ನನ್ನು ಬಿಟ್ಟು ಬೇರೆಯವರ ಬಗ್ಗೆ ಕಾಳಜಿ ವಹಿಸಿದ್ರೆ, ಅತಿಯಾಗಿ ಸ್ನೇಹ ಸಲುಗೆ ಹೊಂದಿದ್ರೆ ಮನಸಿಗೇನೋ ತಳಮಳ, ಗುಮಾನಿ. ಮಾತ್ಸರ್ಯ.
ಇದನ್ನೂ ಓದಿ: ಅವನು ನನಗೆ ಹೃದಯ ಕೊಟ್ಟಿದ್ದ: ನಾನು ನನ್ನ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟೆ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್
ಪ್ರೀತಿ ಪೊಸೆಸಿವ್ ನೆಸ್ ಕೂಡ
ಪ್ರೀತಿ ಗಟ್ಟಿಯಾಗಬೇಕಾದ್ರೆ ಮೇಲೆ ಹೇಳಿದಂತಹಾ ಒಂದು ಪೊಸೆಸಿವ್ ನೆಸ್ ಅಗತ್ಯವೇ. ಆದರೆ ಪ್ರೀತಿ ಎಂಬ ಹಕ್ಕಿಯನ್ನು ಬಲವಂತದಿಂದ ಕೂಡಿಟ್ರೆ ಉಸಿರುಗಟ್ಟಿ ಸಾಯುತ್ತಂತೆ. ಮುಕ್ತವಾಗಿ ಹಾರೋಕೆ ಬಿಟ್ರೆ ನಿಮ್ಮ ಪ್ರೀತಿಯ ಮಹತ್ವ ಅರಿವಾದಾಗ ಅದಾಗಿಯೇ ಸನಿಹ ಬರುತ್ತೆ, ನಿಮ್ಮ ಸಂಗಾತಿಯನ್ನು ಪ್ರೀತಿ ಎಂಬ ಹೆಸರಿನಲ್ಲಿ ಶಿಸ್ತಿನ ಚೌಕಟ್ಟಿನಲ್ಲಿ ಕೂಡಿ ಹಾಕದಿರಿ.
ಸ್ವಚ್ಛಂದತೆ ಬೇಡ
ಪ್ರೇಮವೆಂದರೆ ಸಿಕ್ಕ ಸಿಕ್ಕವರನ್ನು ಪಡೆಯಬಹುದು ಎನ್ನುವ ಸ್ವಚ್ಛಂದತೆಯೇ?? ಅಂಥ ಕರ್ಮಕ್ಕೆ ಮದುವೆ ಯಾಕೆ ಮಾಡ್ಕೋಬೇಕಿತ್ತು? ಎಂಬೆಲ್ಲ ಪ್ರಶ್ನೆಗಳು ಉದಿಸಬಹುದು. ಅಲ್ಲ.. ಪ್ರೇಮವೆಂದರೆ ಸ್ವಚ್ಛಂದತೆಯಲ್ಲ. ಆದರೆ ಬೇರೆಯವರ ಮನಸು ನಮ್ಮ ಇಷ್ಟಕ್ಕನುಗುಣವಾಗಿ ನಡೆದುಕೊಳ್ಳದೇ ಹೋದಾಗ, ಆ ಪ್ರೀತಿ ನಮಗಾಗಿ ಉಳಿದುಕೊಳ್ಳಲಿ ಎಂದು ಬಯಸುವುದಷ್ಟೇ ಆ ಕ್ಷಣಕ್ಕೆ ಸಾಧ್ಯ.
ಇದನ್ನೂ ಓದಿ: ವ್ಯಾಲಂಟೈನ್ಸ್ ಡೇ ಆಚರಿಸಿಕೊಳ್ಳುವವರು ಕಾಟಾಚಾರದ ಪ್ರೇಮಿಗಳು: ನಮಗೆ ಅನುದಿನವೂ ಪ್ರೀತಿಯ ದಿನ!
ಉಳಿದುಕೊಳ್ಳುವ ಪ್ರೇಮ
ಆದರ್ಶ ಪ್ರೇಮಕಥೆಗಳು ಅಮರವಾಗಿ ಉಳಿದಿರೋದು ತ್ಯಾಗದಿಂದಲೇ ಹೊರತು ಸಂಘರ್ಷದಿಂದಲ್ಲ. ದ್ವೇಷದಿಂದಲ್ಲ. ಉಳಿದುಕೊಳ್ಳುವ ಪ್ರೇಮವಾದರೆ ಆ ಹೃದಯ ಮತ್ತೆ ನಿಮ್ಮನ್ನು ಹಂಬಲಿಸಿ ಬರುತ್ತೆ. ಪ್ರೇಮವೆನ್ನುವುದು ಎಂದಿಗೂ ಬಲವಂತವಾಗಿ ಉಳಿಸಿಕೊಳ್ಳಲಾಗದು, ಮತ್ತು ನಿಜವಾದ ಪ್ರೀತಿ ಎಂದೂ ಬಿಟ್ಟು ಹೋಗದು. ಪರಸ್ಪರ ನಂಬಿಕೆ, ಸಂಬಂಧದಲ್ಲಿ ಸ್ವತಂತ್ರತೆ ಎಂಬ ಕಂಫರ್ಟ್ ಝೋನ್, ಸದಾ ಜೊತೆಗಿರುವ ಹಂಬಲ, ಜೀವಂತವಿರುವಷ್ಟು ಕಾಲ ಪ್ರೀತಿ ಬಾಳುತ್ತೆ.
ಪ್ರೀತಿ ಎಂದರೆ ಖುಷಿ
ಪ್ರೀತಿ ಎಂದರೆ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದಲ್ಲ. ಅದೊಂದು ಜವಾಬ್ದಾರಿ, ಬದ್ಧತೆ, ಪ್ರಬುದ್ಧತೆ. ಅದಕ್ಕೆ ಹೊರತಾಗಿ ಸ್ವಚ್ಛಂದತೆ ಎಂಬರ್ಥದಲ್ಲಿ ಭಾವನೆಗಳನ್ನು ಬೇಕಾದಂತೆ ಬಳಸಿಕೊಳ್ಳುವವರ ಸ್ವಚ್ಛಂದತೆಯ ಪ್ರಯಾಣ ಯಾವತ್ತೂ ಅವರನ್ನು ಅಪಾಯದಂಚಿಗೇ ತಂದು ನಿಲ್ಲಿಸುತ್ತೆ. ನೀವು ನಿಮ್ಮ ಸಂಗಾತಿಗೆ ಪ್ರಾಮಾಣಿಕ ಪ್ರೀತಿ ನೀಡುತ್ತಿದ್ದೀರಿ ಎಂಬ ಖುಷಿ ನಿಮ್ಮಲ್ಲಿರಲಿ. ಹ್ಯಾಪಿ ವಾಲೆಂಟೈನ್ಸ್ ಡೇ.
ಇದನ್ನೂ ಓದಿ: ಮನೆ ತಾರಸಿ ಮೇಲೆ ಪ್ರೇಮ ನಿವೇದನೆಗೆ ಸ್ಕೆಚ್!: ವ್ಯಾಲೆಂಟೈನ್ಸ್ ಡೇ ಸ್ಪೆಷಲ್