ನಾವಿಬ್ರು ಚಿಕ್ಕಂದಿನಿಂದ್ಲೂ ಒಂದೇ ಕ್ಲಾಸ್ನಲ್ಲಿ ಓದಿದವರು, ಹಾಗಾಗಿ ನಮ್ಮಿಬ್ಬರ ಮದ್ಯೆ ಸ್ವಲ್ಪ ಹೊಂದಾಣಿಕೆಯಾಗಲಿ, ತಿಳುವಳಿಕೆಯಾಗಲಿ ಮೊದಲಿಂದಲೂ ಸ್ವಲ್ಪ ಚೆನ್ನಾಗಿಯೇ ಇತ್ತು. ಆದರೆ, ನಾನು ಹೈಸ್ಕೂಲ್ಗೆ ಅಂತ ಬಾಯ್ಸ್ ಸ್ಕೂಲ್ಗೆ ಸೇರಬೇಕಾಯಿತು. ಅವಳು ಸಹ ಬೇರೆ ಸ್ಕೂಲ್. ಅವಳದ್ದು ಕಂಬೈನ್ಡ್ ಸ್ಕೂಲ್ ಆಗಿದ್ದರಿಂದ ನನಗೆ ಅವಳ ಶಾಲೆಯ ಹುಡುಗರ ಮೇಲೆ ಶಂಕೆ ಮತ್ತು ಒಂದು ಬಗೆಯಲ್ಲಿ ಜೆಲಸಿಯೂ ಶುರುವಾಯಿತು.
ಮಾತ್ ಮಾತಿಗೂ ಜಗಳ, ಮಾತ್ ಮಾತಿಗೂ ಅನುಮಾನ, ಮಾತ್ ಮಾತಿಗೂ ಕೋಪ, ಈ ಮೂರಕ್ಷರಗಳೇ ನನ್ನನ್ನ ಈ ಪ್ರೀತಿ ಪ್ರೇಮ ಎಂಬ ಬಂಧನದಲ್ಲಿ ಭಾಗಿಯಾಗಲು ಬಿಡೋದೇ ಇಲ್ಲ, ನಾನೆಷ್ಟೇ ನಿಷ್ಠುರ ಭಾವನೆಯಿಂದಿದ್ದರು ಅವಳ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಈಗಿನ ಕಾಲದಲ್ಲಿ ಇದು ಸ್ವಲ್ಪ ಕಷ್ಟವೇ ಸರಿ ಅಂತ ಅನ್ನಿಸಿದ್ದರು, ನನ್ನವಳಿಗಾಗಿ ನಾನು ಇಷ್ಟನ್ನು ಸಹಿಸಿಕೊಳ್ಳದಿದ್ದರೆ ಹೇಗೆ ಎಂದು ನನ್ನಷ್ಟಕ್ಕೆ ನಾನೇ ಗಟ್ಟಿ ಮನಸ್ಸಿನಿಂದ ಎಲ್ಲವನ್ನು ಸಹಿಸಿಕೊಳ್ಳುತಿದ್ದೆ, ಕೆಲವೊಮ್ಮೆ ಮನೆಯ ಪರಿಸ್ಥಿತಿ ನೋಡಿದಾಗಲೆಲ್ಲ ಅನ್ನಿಸುವುದು ಇದೆಲ್ಲ ಸರಿ ಬರೋಲ್ಲ ಅಂತ. ಆದರೂ ಅವಳ ರುದ್ರ ತಾಂಡವವನ್ನು ಕೆಲವೊಮ್ಮೆ ಅವಳ ಮನೆಯವರಷ್ಟೇ ಅಲ್ಲ ನನಗೂ ಸಹಿಸಲಾಗುತ್ತಿರಲಿಲ್ಲ. ಯಾವುದೋ ಕೆಟ್ಟ ಗಳಿಗೆ ಎಂದು ಹೇಗೋ ಅವಳನ್ನು ಸಮಾಧಾನ ಪಡಿಸುತಿದ್ದೆ.
ಆದರೆ ಇದೆಲ್ಲ ಆ ವಯಸ್ಸಿನ ಬುದ್ಧಿಗೆ ಅರ್ಥವೇ ಆಗಲಾರದಂತಹದ್ದಾಗಿದ್ದರು ನನ್ನಮ್ಮನ ತಾಳ್ಮೆಯನ್ನು ನೋಡಿಯಾದರೂ ನಾನು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಸಹನೆಯನ್ನು ಕಲಿತಿದ್ದೆ. ಆವತ್ತಿನ ಸೂರ್ಯೋದಯ ಸ್ವಲ್ಪ ಬೇಗವೇ ಆದರೂ ನನಗೆ ಅದು ಆಗಿರಲಿಲ್ಲ, ಮನೆಯವರೆಲ್ಲ ಬೇಗ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದರು, ಕಾರಣ ಅದು ಅಮವಾಸ್ಯೆಯ ಸೋಮವಾರ, ಯಾರು ಇರದ ಹೊತ್ತನ್ನು ಒಂದೊಳ್ಳೆ ಮುಹೂರ್ತವನ್ನಾಗಿಸೋ ನನ್ನ ಮನವು ಯಾಕೋ ಚಡಪಡಿಸುತ್ತಲೇ ಇತ್ತು.
ಆದರೂ ಹೇಗೊ ನಮ್ಮ ಮನೆಯ ಮೇಲ್ಚಾವಣಿಯ ಹತ್ತಿರ ಹೋದೆ, ಅವಳು ಸಹ ಅವಲಕ್ಕಿ ಒಣಗಿಸಲೆಂದೇ ಮೇಲೆ ಬಂದಿದ್ದಳು. ಒಂದೊಮ್ಮೆ ನಾನು ಕತ್ತು ತಿರುಗಿಸಿ ಹಿಂದೆ ಮುಂದೆ ನೋಡಿದೆ ಯಾರು ಇಲ್ಲದ ಹಾಗೆ ತೋಚಿತು, ಅಲ್ಲೇ ಪಕ್ಕದಲ್ಲಿದ್ದ ಹೂಕುಂಡದಲ್ಲಿನ ಒಂದೆರಡು ಮಲ್ಲಿಗೆ ಹೂಗಳನ್ನು ಕಿತ್ತು ಅವಳ ತಲೆಗೆ ಮೂಡಿಸಿದೆ.
ಗಾಬರಿಯಾದ ಅವಳು ಒಂದೊಮ್ಮೆ ತಿರುಗಿನೋಡಿದಾಗ ಅವಳ ಮೃದವಾದ ಕೈಗಳಿಗೊಮ್ಮೆ ನನ್ನ ಕೈ ತಾಗಿಸಿ 'ಐ ಲವ್ ಯು' ಕಣೆ ನೀ ಏನಾದ್ರೂ ಮಾಡ್ಕೋ ನನಗಂತೂ ನಿನ್ನ ಬಿಟ್ಟು ಇರಲಿಕ್ಕೆ ಆಗಲ್ಲ ಅಂತ ಹೇಳಿದವನೇ ಓಡೋಡಿ ನಮ್ಮ ಮನೆಯೊಳಗೇ ಹಾರಿ ಬಂದೆ.
Advertisement