ವ್ಯಾಲಂಟೈನ್ಸ್ ಡೇ ಆಚರಿಸಿಕೊಳ್ಳುವವರು ಕಾಟಾಚಾರದ ಪ್ರೇಮಿಗಳು: ನಮಗೆ ಅನುದಿನವೂ ಪ್ರೀತಿಯ ದಿನ!
'ಲವ್' ಎಂಬ ಪದವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸುವಂತಹ ಅನಿವಾರ್ಯತೆ ಅಥವಾ ಅಗತ್ಯತೆ ನಮಗೆ ಕಂಡು ಬರುವುದಿಲ್ಲ. ಏಕೆಂದರೆ ನಮ್ಮ ಕುಟುಂಬ ವ್ಯವಸ್ಥೆ ಇವತ್ತಿಗೂ ಗಟ್ಟಿಯಾಗಿದೆ.
Published: 14th February 2022 01:43 PM | Last Updated: 14th February 2022 01:55 PM | A+A A-

ಅನಾಯುಂ ರಸೂಲುಂ ಮಲಯಾಳಂ ಸಿನಿಮಾ ಸ್ಟಿಲ್

ಬರಹಗಾರ್ತಿ ಸಾವಿತ್ರಿ ಹಟ್ಟಿ, ಗದುಗಿನವರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರ ಹವ್ಯಾಸ ಓದು ಬರಹ ಮತ್ತು ತಿರುಗಾಟ. ಇವರ ಬರಹಗಳು, ಅಂಕಣಗಳು, ಕವಿತೆಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಸಾವಿತ್ರಿ ಅವರ ಬರಹಗಳು ಮತ್ತು ಕವಿತೆಗಳು ಗ್ರಾಮೀಣ ಜೀವನವನ್ನೂ ಹಳ್ಳಿಗಳ ಚಿತ್ರಣವನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತವೆ. ಕೃಷಿ ಕೆಲಸದಲ್ಲಿಯೂ ತೊಡಗಿಕೊಳ್ಳುವ ಸಾವಿತ್ರಿ ಅವರಿಗೆ ಅಡುಗೆ ಬಗ್ಗೆಯೂ ಎಲ್ಲಿಲ್ಲದ ಆಸಕ್ತಿ.
ವ್ಯಾಲಂಟೈನ್ಸ್ ಡೇ ಅನ್ನುವಂಥ ದಿನಾಚರಣೆ ಒಂದಿದೆ ಎಂದು ಇವತ್ತಿಗೂ ಹಳೆಯ ತಲೆಮಾರಿನ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರಲ್ಲಿ ಎಷ್ಟೋ ಜನ ನಿರ್ಲಕ್ಷಿಸುತ್ತಾರೆ. ಮೊದಲೇ ನಮ್ಮದಲ್ಲದ ಶೋಕಿ ದಿನಾಚರಣೆಯಿದು. ವಾಸ್ತವದಲ್ಲಿ ಪ್ರೇಮ ಎಂಬುದು ಸಕಲ ಜೀವಿಗಳ ಬದುಕಿನ ಸಾರ. ಅದು ಭಾರತದ ನೆಲದಲ್ಲಿ ವಿವಿಧ ಸಂಬಂಧಗಳ ನೆಲೆಗಟ್ಟಿನಲ್ಲಿ ತನ್ನದೇ ಆದ ರೂಪುರೇಷೆಯೊಂದಿಗೆ ಆವರಿಸಿಕೊಂಡಿದೆ.
ಪ್ರೀತಿ ಒಂದಿನಕ್ಕೆ ಸೀಮಿತವಲ್ಲ
ನಮ್ಮ ದೇಶದ ಕುಟುಂಬ ವ್ಯವಸ್ಥೆಯಲ್ಲಿ ಪ್ರೇಮ ಎಂದಾಗ ಅದು ಶುದ್ಧ ದಂಪತಿಗಳ ನಡುವಿನ ಅನ್ಯೋನ್ಯ ಭಾವವಾಗಿ ಎಲ್ಲರಿಗೂ ಗೋಚರವಾಗುತ್ತದೆ. ಇಲ್ಲಿ ಲವ್ ಎಂಬ ಪದವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸುವಂತಹ ಅನಿವಾರ್ಯತೆ ಅಥವಾ ಅಗತ್ಯತೆ ನಮಗೆ ಕಂಡು ಬರುವುದಿಲ್ಲ. ಏಕೆಂದರೆ ನಮ್ಮ ಕುಟುಂಬ ವ್ಯವಸ್ಥೆ ಇವತ್ತಿಗೂ ಗಟ್ಟಿಯಾಗಿದೆ.
ಇದನ್ನೂ ಓದಿ: ಅವನು ನನಗೆ ಹೃದಯ ಕೊಟ್ಟಿದ್ದ: ನಾನು ನನ್ನ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟೆ: ವ್ಯಾಲೆಂಟೈನ್ಸ್ ಡೇ ಸ್ಪೆಷಲ್
ಕುಟುಂಬ ವ್ಯವಸ್ಥೆಗೆ ವಿರುದ್ಧ
ವಿವಾಹಪೂರ್ವ ಲವ್ ಅಂತ ನಿಲ್ಲುವ ಜೋಡಿಗಳನ್ನು ಕುಟುಂಬ ವ್ಯವಸ್ಥೆ ಸಾರಾಸಗಟಾಗಿ ವಿರೋಧಿಸುತ್ತದೆ. ಇಲ್ಲವೇ ಸಮಾಧಾನ ಚಿತ್ತದಿಂದ ಆ ಲವ್ ಗೆ ಮದುವೆ ಎಂಬ ರಕ್ಷಣಾ ಕವಚವನ್ನು ತೊಡಿಸಿಬಿಡುತ್ತದೆ. ವ್ಯಾಲಂಟೈನ್ಸ್ ಡೇ ದಿನ ಮದುವೆಯಾದ ಎಷ್ಟೋ ದಂಪತಿಗಳು ವ್ಯಾಲಂಟೈನ್ ಡೇ ಆಚರಿಸಿಕೊಳ್ಳುವುದು ಗುಟ್ಟಾಗಿ. ಬೆಳೆಯುವ ಮಕ್ಕಳ ಮೇಲೆ ಇದರ ಪ್ರಭಾವ ಆಗಬಾರದು ಎಂಬ ಚಿಂತನೆಯೇ ಇದಕ್ಕೆ ಕಾರಣ.
ಮಾರ್ಗದರ್ಶನ ಅಗತ್ಯ
ಶಾಲಾ ಹಂತದಲ್ಲಿ ಪ್ರೇಮ ಎಂಬುದು ಕಬ್ ಲವ್ ರೂಪದಲ್ಲಿ ಗೋಚರವಾದರೂ ಅದರಿಂದ ವಿಮುಖಗೊಳಿಸಿ ಮಕ್ಕಳನ್ನು ಓದಿನಲ್ಲಿ ತೊಡಗಿಸುವ ತಂತ್ರಗಳನ್ನು ಬಳಸಲಾಗುತ್ತದೆ. ಕಾಲೇಜು ಓದುವ ಯುವಕ ಯುವತಿಯರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯ ಇದೆ. ದಾರಿ ತಪ್ಪಲು ಅನೇಕ ಅವಕಾಶಗಳು ಯುವ ಜನಾಂಗದ ಮುಂದಿವೆ.
ಇದನ್ನೂ ಓದಿ: ಮನೆ ತಾರಸಿ ಮೇಲೆ ಪ್ರೇಮ ನಿವೇದನೆಗೆ ಸ್ಕೆಚ್!: ವ್ಯಾಲೆಂಟೈನ್ಸ್ ಡೇ ಸ್ಪೆಷಲ್
ಪ್ರೀತಿ ಎನ್ನುವ ಉದ್ಯಮ
ಸದೃಢವಾಗಿ ಅಭಿವೃದ್ಧಿ ಹೊಂದಬೇಕಾದ ಮಾನವ ಸಂಪನ್ಮೂಲ ಈ ವಿಚಾರದಿಂದ ದುರ್ಬಲವಾಗುತ್ತಿದೆ. ಕಾಲೇಜು ಹಂತದಲ್ಲಿ ವ್ಯಾಲಂಟೈನ್ಸ್ ಡೇ ಆಚರಣೆ ಮಾಡುವ ಯುವಕ ಯುವತಿಯರು ತಮ್ಮ ಪ್ರೇಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಎಂಬುದು ಅವರ ಕೌಟುಂಬಿಕ, ಸಾಮಾಜಿಕ ಸ್ಥಾನಮಾನಗಳನ್ನು ಅವಲಂಬಿಸಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಪ್ರೇರಣೆಯಾಗುವ ಗಿಫ್ಟ್ ಸೆಂಟರ್ಸ್, ಕ್ಲಬ್, ಪಬ್ ಇತ್ಯಾದಿ ಉದ್ಯಮಗಳಿಗಂತೂ ಇದೊಂದು ಶುದ್ಧ ವ್ಯಾಪಾರ ಪ್ರಕ್ರಿಯೆ.
ಇದನ್ನೂ ಓದಿ: ಬಿಂದಿಗೆ ಹಿಡಿದು ಬಂದವಳ ಜೊತೆ ಮೋರಿ ಮೇಲೆ ಕೂತವನ ಪ್ರೀತಿ ವಿನಿಮಯ: ಹಳ್ಳಿಗಳಲೂ ವ್ಯಾಲೆಂಟೈನ್ಸ್ ಡೇ