"ಸಾರ್ಥಕತೆ ಪಡೆಯುವುದೇ ಜೀವನ"

Life is about attaining fulfillment
ಸಾಂದರ್ಭಿಕ ಚಿತ್ರigovar igovar / Pexels.com
Updated on: 

ಬರಹ: ಅಂಬಿಕಾ.ಕೆ, ಎಂ.ಜಿ.ಎಂ ಕಾಲೇಜು, ಉಡುಪಿ

ಸಾರ್ಥಕತೆ ಪಡೆಯುವುದೇ ಜೀವನ ಎಂಬುದು ಬಹಳ ಅತ್ಯಂತ ಅಳವಾದ ಅರ್ಥವನ್ನು ಹೊಂದಿರುವ ಒಂದು ಸುಂದರ ಪರಿಕಲ್ಪನೆಯಾಗಿದೆ.

ಬದುಕುವುದು ಎಂದರೆ ಕೇವಲ ಉಸಿರಾಡುವುದಲ್ಲ ಬದಲಾಗಿ ನಮ್ಮ ಬದುಕಿಗೆ ಒಂದು ಉದಾತ್ತವಾದ ಅರ್ಥವನ್ನು ಕಂಡುಕೊಳ್ಳುವುದು ಎಂದರ್ಥ .ಜಗತ್ತಿನಲ್ಲಿ ಎಲ್ಲಾ ಜೀವಿಗಳು ಹುಟ್ಟುತ್ತವೆ ,ತಿನ್ನುತ್ತವೆ , ಮಲಗುತ್ತವೆ,ಮತ್ತು ಕೊನೆಗೂ ಸಾಯುತ್ತವೆ ಮನುಷ್ಯನು ಕೇವಲ ಇದನ್ನೇ ಮಾಡಿದರೆ ಪ್ರಾಣಿಗಳಿಗೂ ನಮಗೂ ವ್ಯತ್ಯಾಸವಿರುವುದಿಲ್ಲ .

ಹಾಗೆಯೇ ಸಾರ್ಥಕತೆ ಎಂಬುದು ಕೇವಲ ನಮ್ಮ ಗುರಿಯನ್ನು ಸಾಧಿಸಿದಾಗ ಸಿಗುವುದಿಲ್ಲ ಬದಲಾಗಿ ಕಷ್ಟದಲ್ಲಿರುವವರಿಗೆ ನೆರವಾಗುವುದು ಮತ್ತು ಹಸಿದವರಿಗೆ ಅನ್ನವನ್ನು ನೀಡುವುದು ,ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುವುದು ಹೀಗೆಯೇ ಚಿಕ್ಕ ಪುಟ್ಟ ಸಹಾಯವನ್ನು ಮಾಡುವುದರಿಂದ ನಮ್ಮ ಜೀವನಕ್ಕೆ ಒಂದು ಬೆಲೆಯನ್ನು ತಂದುಕೊಳ್ಳಬಹುದು .

ನಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗವನ್ನು ಪಡೆದುಕೊಂಡು ಹಣ ಸಂಪಾದಿಸಿ ಜೀವನ ನಡೆಸಬೇಕು ನಿಜ ಆದರೆ ಹಣವೇ ಹಣವೇ ಜೀವನ ಆಗಬಾರದು ಕೇವಲ ಬದುಕಿರುವುದೇ ಹಣ ಸಂಪಾದಿಸಲಿಕೆ ಎನ್ನುವ ಯೋಚನೆಯನ್ನು ಬಿಟ್ಟು ಜೀವನದಲ್ಲಿ ಕಷ್ಟಬರಲಿ ಸುಖಬರಲಿ ಅದನ್ನು ಸಂತೋಷದಿಂದ ಸ್ವೀಕರಿಸಿ ಜೀವನವನ್ನು ನಡೆಸಬೇಕು ಏಕೆಂದರೆ ನಾವು ಇಷ್ಟು ಕಷ್ಟ ಪಟ್ಟು ಸಂಪಾದಿಸಿದ ಆಸ್ತಿ , ಅಂತಸ್ತು ಮುಂತಾದವು ನಮ್ಮ ಸಾವಿನ ನಂತರ ಯಾವುದು ಸಹ ನಮ್ಮೊಂದಿಗೆ ಬರುವುದಿಲ್ಲ ಆದ್ದರಿಂದ ಪ್ರತಿಯೊಂದು ಕ್ಷಣದಲ್ಲಿ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು .

ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡತಹ ನಗು, ಸಂತೋಷವನ್ನು ಇತರರ ಬದುಕಿನಲ್ಲಿ ಮೂಡಿಸುವುದರಿಂದ ಹಾಗೇ ನಾವು ಮಾಡಿರುವ ಸಣ್ಣ ಪುಟ್ಟ ಸಹಾಯವು ಎಂದೆಂದಿಗೂ ಜೀವಂತವಾಗಿರುತ್ತದೆ .

ಜೀವನ ಎಂಬುದು ಒಂದು ನಿರಂತರ ಕಲಿಕೆಯಾಗಿರುತ್ತದೆ ಅದು ಹೊಸ ರೀತಿಯ ವಿಷಯಗಳು ಮತ್ತು ಹಲವಾರು ರೀತಿಯ ಹೊಸ ಹೊಸ ಚಿಂತನೆಯನ್ನು ಕಲಿಸುತ್ತದೆ.

ಇದೆ ಸಂದರ್ಭದಲ್ಲಿ ಒಂದು ಮಾತನ್ನು ಹೇಳಬಹುದು ಅದು " ಬದುಕೆಂಬ ಸಾಗರದಲ್ಲಿ ಅಲೆಗಳೆಂಬ ಪ್ರಶ್ನೆಗಳನ್ನು ದಾಟಿ ದೋಣಿ ಎಂಬ ಕನಸನ್ನು ಹೊತ್ತು ತಂದು ದಡ ಎಂಬ ಗುರಿಯನ್ನು ಮುಟ್ಟಿದಾಗ ಸಿಗುವುದೇ ಸಾರ್ಥಕತೆಯ ಬದುಕು "

ಈ ಮೇಲಿನ ವಾಕ್ಯದಲ್ಲಿ ಜೀವನದಲ್ಲಿ ಬರುವ ಎಷ್ಟೋ ರೀತಿಯ ಸಮಸ್ಯೆಗಳು ,ಕಷ್ಟಗಳು, ಒರಟಾದ ಕಿಡಿ ಮಾತುಗಳು ಕಂಡುಬರುತ್ತವೆ . ಈ ಸಮಾಜ ಎಂಬುದು ಕೆಳಗೆ ಬಿದ್ದವರನ್ನು ಮೇಲೆ ಎತ್ತುವುದಕಿಂತ ಅವರನ್ನು ಇನ್ನಷ್ಟು ತುಳಿದು ಹಾಕುವುದೇ ಹೆಚ್ಚು ಆದ್ದರಿಂದ ಇಂತಹ ಸಂದರ್ಭದಲ್ಲಿ ತಾವು ಕಂಡತಹ ಕನಸನ್ನು ಕೈಬಿಡದೆ ಅದನ್ನು ದಡ ಮುಟ್ಟಿಸಿದಾಗ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ ಜೀವನದಲ್ಲಿ ಸಾರ್ಥಕತೆ ಇಲ್ಲ ,ಆದರೆ ಸಾರ್ಥಕತೆ ಪಡೆಯುವುದೇ ಜೀವನ.

ನಾವು ಜಗತ್ತಿಗೆ ಬರುವುದು ನಮ್ಮ ಆಯ್ಕೆಯಲ್ಲ ಹೋಗುವುದು ನಮ್ಮ ಆಯ್ಕೆಯಲ್ಲ ಆದರೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬಾಳಿ ಅಹಂಕಾರವನ್ನು ಬಿಟ್ಟು ಕಷ್ಟಗಳಿಗೆ ಹೆದರದೆ ಅವುಗಳನ್ನು ದೃಢ ಮನಸ್ಸಿನಿಂದ ಎದುರಿಸಿ ಬಾಳುವುದೇ ಬದುಕಿನ ಸಾರ್ಥಕತೆ.

ಕೊನೆಯದಾಗಿ ಹೇಳಬೇಕೆಂದರೆ ಬದುಕು ಒಂದು ಸುಂದರವಾದ ಅವಕಾಶ ನಾವು ಸತ್ತ ಮೇಲೂ ನಮ್ಮ ಒಳ್ಳೆಯ ಕೆಲಸಗಳ ಮೂಲಕ ಜನರಲ್ಲಿ ನೆನಪಿನಲ್ಲಿ ಉಳಿಯುವುದೇ ಬದುಕಿನ ಸಾರ್ಥಕತೆ.

Life is about attaining fulfillment
"ಕನಸುಗಳಿಗೆ ರೆಕ್ಕೆ ಕಟ್ಟುವ ಆತ್ಮವಿಶ್ವಾಸ"

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X