ಅತಿಯಾದ ಮೊಬೈಲ್ ಬಳಕೆ-ಬ್ರೈನ್ ಕ್ಯಾನ್ಸರ್‌ಗೆ ಆಹ್ವಾನ!

ಗಂಟೆಗಟ್ಟಲೆ ಮೊಬೈಲ್ ಬಳಕೆ ಮಾಡುವವರು ಇನ್ನು ಮುಂದೆ ಎಚ್ಚರ...
ಅತಿಯಾದ ಮೊಬೈಲ್ ಬಳಕೆ-ಬ್ರೈನ್ ಕ್ಯಾನ್ಸರ್‌ಗೆ ಆಹ್ವಾನ!
Updated on

ಹೌದು, ಗಂಟೆಗಟ್ಟಲೆ ಮೊಬೈಲ್ ಬಳಕೆ ಮಾಡುವವರು ಇನ್ನು ಮುಂದೆ ಎಚ್ಚರವಾಗುವ ಸಮಯ ಬಂದಿದೆ. ಹೌದು ನಿರಂತರವಾಗಿ ಸೆಲ್‌ಫೋನ್ ಬಳಕೆ ಮಾಡುವವರು, ಹೆಚ್ಚಿನ ಪ್ರಮಾಣದಲ್ಲಿ ಬ್ರೈನ್ ಕ್ಯಾನ್ಸರ್‌ಗೆ ತುತ್ತಾಗುವ ಅವಕಾಶವಿದೆ ಎಂದು ವರದಿಯೊಂದು ಬಹಿರಂಗಪಡಿದೆ.

ಯಾರು ಸತತವಾಗಿ 25 ವರ್ಷಗಳಿಗಿಂತ ಹೆಚ್ಚು ಸೆಲ್‌ಫೋನ್‌ನ್ನು ಬಳಕೆ ಮಾಡುತ್ತಾರೋ ಅವರು ಮೂರು ಪಟ್ಟು ಹೆಚ್ಚು ಬ್ರೈನ್ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ವೀಡನ್‌ನಲ್ಲಿರುವ ಒರೆಬ್ರೋ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿನ ಸಂಶೋಧಕಿ ಲೆನಾರ್ಟ್ ಹರ್ಡೆಲ್ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

25 ವರ್ಷಕ್ಕಿಂತ ಹೆಚ್ಚು ಅಧಿಕ ಪ್ರಮಾಣದಲ್ಲಿ, ನಿರಂತರವಾಗಿ ಸೆಲ್‌ಫೋನ್ ಬಳಕೆ ಮಾಡುವುದರಿಂದ, ಫೋನಿನ ತರಂಗಗಳು ಮಿದುಳಿನ ನರಗಳ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ. ಇದರ ಪರಿಣಾಮವಾಗಿ ಮೆದುಳಿನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸತತ ಒಂದು ವರ್ಷ ಕಾಲ ಸೆಲ್‌ಫೋನ್ ಬಳಸಿದವರ ಹಾಗೂ ಸತತ 25 ವರ್ಷಗಳ ಮೊಬೈಲ್ ಬಳಕೆ ದಾರರ ಹೋಲಿಕೆ ಮಾಡಿದಾಗ, ಅಧಿಕ ವರ್ಷ ಸೆಲ್‌ಫೋನ್ ಬಳಕೆ ಮಾಡುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ 3ರಷ್ಟ ಹೆಚ್ಚಾಗಿರುತ್ತದೆ ಎಂದು ಲೆನೆರ್ಟ್ ವಿವರಿಸಿದ್ದಾರೆ.

ಲೆನೆರ್ಟ್ ಹಾಗೂ ಅವರ ಸಹ ಸಂಶೋಧಕರಾದ ಮೈಕಲ್ ಕ್ಯಾಲ್‌ಬರ್ಗ್ ಇಬ್ಬರು ನಡೆಸಿದ ಸಂಶೋಧನೆಯಲ್ಲಿ, ಅಧಿಕ ಪ್ರಮಾಣದಲ್ಲಿ, ಸೆಲ್‌ಫೋನ್ ಉಪಯೋಗಿಸಿದವರ ಮಿದುಳಿನ ಮೇಲೆ ಅಧಿಕ ಪ್ರಭಾವ ಬೀರುತ್ತದೆ.

 ಸೆಲ್‌ಫೋನ್‌ನ ತರಂಗಗಳು ಹೆಚ್ಚಿನ ಪ್ರಮಾಣದಲ್ಲಿ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತರಂಗಗಳ ಮೇಲೂ ಆಧರಿಸಿದೆ.

2011ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು. 14 ರಾಷ್ಟ್ರಗಳ ಸುಮಾರು 31 ವಿಜ್ಞಾನಿಗಳ ತಂಡವೊಂದು ಕ್ಯಾನ್ಸರ್‌ಗೆ ಆಹ್ವಾನಿಸುವಂತಹ ಅಪಾಯಕಾರಿ ಸೆಲ್‌ಫೋನ್‌ಗಳನ್ನು ವಿಂಗಡಿಸಲಾಗಿತ್ತು. ಅಲ್ಲದೆ ಯಾವ ಬಗೆಯ ಸೆಲ್‌ನಿಂದ ಯಾವ ಪ್ರಮಾಣದ ಕ್ಯಾನ್ಸರ್ ಬರಲಿದೆ ಎಂಬುದನ್ನು ವಿವರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com