ಗೂಗಲ್ ಮ್ಯಾಪ್‍ ದನಿ ನಕ್ಷೆ

ರಾಜ್ಯದಿಂದ ಬೇರೆಡೆ ನಿರಂತರ ಪ್ರಯಾಣ ಬೆಳೆಸುವರಿಗೆ ಒಂದು ಸಿಹಿಸುದ್ದಿ, ಇದೀಗ ಗೂಗಲ್‍ನಿಂದ...
ಗೂಗಲ್‍ನಿಂದ ಇನ್ನೊಂದು ವಿಶಿಷ್ಟವಾದ ಲೇನ್ ಗೈಡೆನ್ಸ್ ಧ್ವನಿ ಮಾರ್ಗಸೂಚಿ
ಗೂಗಲ್‍ನಿಂದ ಇನ್ನೊಂದು ವಿಶಿಷ್ಟವಾದ ಲೇನ್ ಗೈಡೆನ್ಸ್ ಧ್ವನಿ ಮಾರ್ಗಸೂಚಿ

ರಾಜ್ಯದಿಂದ ಬೇರೆಡೆ ನಿರಂತರ ಪ್ರಯಾಣ ಬೆಳೆಸುವರಿಗೆ ಒಂದು ಸಿಹಿಸುದ್ದಿ, ಇದೀಗ ಗೂಗಲ್‍ನಿಂದ ಇನ್ನೊಂದು ವಿಶಿಷ್ಟವಾದ ಲೇನ್ ಗೈಡೆನ್ಸ್ ಧ್ವನಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಚಾಲಕ ವಾಹನವನ್ನು ಚಲಾಯಿಸುತ್ತಾ ಮೊಬೈಲ್‍ನಲ್ಲಿ ನ್ಯಾವಿಗೇಟರ್ ಆನ್ ಮಾಡಿ ಕಷ್ಟಪಟ್ಟು ತಾನು ಹೋಗುವ ಜಾಗವನ್ನು ಕಂಡುಕೊಳ್ಳುವ ಚಿಂತೆ ದೂರವಾಗಿದೆ. ಈಗ ಕೇವಲ ಸ್ಥಳವನ್ನು ಉಚ್ಛಾರ ಮಾಡುವ ಮೂಲಕ ಗೂಗಲ್ ಮ್ಯಾಪ್‍ನಿಂದ ಮಾಹಿತಿ ಪಡೆಯಬಹುದು. ಭಾರತದ ಎಲ್ಲಾ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಗಳಲ್ಲಿ ಲಭ್ಯವಿದೆ. ಐಫೋನ್, ಐಪಾಡ್ ಹಾಗೂ ಆ್ಯಂಡ್ರಾಯ್ಡ್  ಬಳಕೆದಾರರು ಇದರ ಉಪಯೋಗ ಪಡೆಯಬಹುದಾಗಿದೆ.

ಈ ಗೂಗಲ್ ಮ್ಯಾಪ್ 20 ಭಾರತದ ನಗರಗಳಲ್ಲಿ ಸೇವೆ ಲಭ್ಯವಿದೆ. ಅಹಮದಾಬಾದ್, ಬೆಂಗಳೂರು, ಭೋಪಾಲ್, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ, ಹೈದರಾಬಾದ್, ಇಂದೋರ್, ಜೈಪುರ, ಕಲ್ಕತ್ತಾ, ಲಖ್ನೌ,ಮುಂಬೈ, ಮೈಸೂರು ಸೇರಿದಂತೆ 20 ನಗರಗಳಲ್ಲಿ ಲಭ್ಯವಿದೆ. ಚಾಲಕರಿಗೆ ಮುಂಬೈ ಹಾಗೂ ಪೂಣೆ ಎಕ್ಸ್ ಪ್ರೆಸ್ ವೇ ಸೇರಿದಂತೆ ಪ್ರಮುಖವಾದ ಭಾರತೀಯ ಎಕ್ಸ್ ಪ್ರೆಸ್‍ವೇಸ್ ಗಳಲ್ಲಿ ಸೌಲಭ್ಯ ಲಭ್ಯವಿದೆ. ಈ ಮಾರ್ಗಸೂಚಿಯಲ್ಲಿ ಚಾಲಕರು ಪ್ರತಿಯೊಂದು ರಸ್ತೆ ತಿರುವಿನ ಮಾಹಿತಿ ಪಡೆಯುತ್ತಾರೆ.

ಮಾಹಿತಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿರುತ್ತದೆ, ಚಾಲಕ ತನಗೆ ಬೇಕಾದ ಲ್ಯಾಂಗ್ವೇಜ್ ಆ್ಯಂಡ್ ಇನ್‍ಪುಟ್'ನಲ್ಲಿ ಭಾಷೆಯನ್ನು ಆಯ್ದುಕೊಳ್ಳಬಹುದು. ಇಷ್ಟೇ ಅಲ್ಲದೆ ಚಾಲಕನು ಮಾಹಿತಿ ಕೇಳುವಾಗ ಭಾಷೆಯ ಸಮಸ್ಯೆಯಿಲ್ಲ ಆದರೆ ಮಾಹಿತಿ ಪಡೆಯುವಾಗ ಇಂಗ್ಲಿಷ್‍ನಲ್ಲಿ ಮಾತ್ರ ದೊರೆಯುತ್ತದೆ.?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com