ಚಂದ್ರಯಾನ-2ಗೆ ಇಸ್ರೋ ಸಿದ್ಧತೆ

ಚಂದ್ರಯಾನ-1ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಚಂದ್ರಯಾನ-2 ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ನೌಕೆಯನ್ನು ತಯಾರಿಸಿ ಇಸ್ರೋಗೆ ರವಾನಿಸಿದೆ.
ಎಚ್.ಎಎಲ್ ಅಭಿವೃದ್ಧಿಪಡಿಸಿರುವ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್
ಎಚ್.ಎಎಲ್ ಅಭಿವೃದ್ಧಿಪಡಿಸಿರುವ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್

ಬೆಂಗಳೂರು: ಚಂದ್ರಯಾನ-1ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಚಂದ್ರಯಾನ-2 ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ನೌಕೆಯನ್ನು ತಯಾರಿಸಿ ಇಸ್ರೋಗೆ ರವಾನಿಸಿದೆ.

ಮೂಲಗಳ ಪ್ರಕಾರ ಇಸ್ರೋದ ಈ ಉದ್ದೇಶಿತ ಯೋಜನೆ 2017 ಅಥವಾ 18ರಲ್ಲಿ ಪೂರ್ಣಗೊಳ್ಳಲ್ಲಿದ್ದು, ಅದೇ ವರ್ಷ ಚಂದ್ರಯಾನ-2 ನಭಕ್ಕೆ ಹಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಚ್ ಎಎಲ್ ಚಂದ್ರಯಾನ-2ಗೆ ಅಗತ್ಯವಿರುವ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ಪರಿಭ್ರಮಣ ನೌಕೆಯನ್ನು ತಯಾರಿಸಿ ಇಸ್ರೋಗೆ ಹಸ್ತಾಂತರಿಸಿದ್ದು, ಯೋಜನಾ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಇನ್ನುಳಿದಂತೆ ಚಂದ್ರಯಾನ-2ಗೆಪ್ರಮುಖವಾಗಿ ಕಕ್ಷೆ ಪರಿಭ್ರಮಣ ನೌಕೆ ಮತ್ತು ಲ್ಯಾಂಡರ್ ನೌಕೆಗಳ ಅಗತ್ಯವಿದ್ದು, ಅವುಗಳ ತಯಾರಿಗೆ ಇಸ್ರೋ ಮುಂದಾಗಿದೆ.

ಚಂದ್ರನ ಕಕ್ಷೆಯವರೆಗೂ ಸಾಗುವ ಪರಿಭ್ರಮಣ ನೌಕೆ, ಉಪಗ್ರಹವನ್ನು ಚಂದ್ರನ ಮೇಲ್ಮೈವರೆಗೂ ಸಾಗಿಸಿ ಬಳಿಕ ಚಂದ್ರನ ಮೇಲ್ಮೈ ಅಂಗಳದ ಮೇಲೆ ಲ್ಯಾಂಡರ್ ನೌಕೆಯನ್ನು ಇಳಿಸುತ್ತದೆ. ಈ ಎರಡೂ ಪ್ರಮುಖ ನೌಕೆಗಳನ್ನು ಹೊಂದುವ ಚಂದ್ರಯಾನ-2 ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರಬಲ ಉಡಾವಣಾ ವಾಹನವಾದ ಜಿ.ಎಸ್.ಎಲ್.ವಿ ಎಂಕೆ-2 ಮೂಲಕ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.

ಇಸ್ರೋದ ಬಾಹ್ಯಾಕಾಶ ಯಾನಗಳಿಗೆ ಬೆಂಗಳೂರಿನಲ್ಲಿರುವ ಹೆಚ್.ಎ.ಎಲ್. ಸಂಸ್ಥೆ ತಾಂತ್ರಿಕ ಉಪಕರಣಗಳನ್ನು, ಸಾಧನಗಳನ್ನು ಒದಗಿಸುತ್ತ ಬಂದಿದ್ದು, ಚಂದ್ರಯಾನ 2ರಲ್ಲೂ ಹೆಚ್.ಎ.ಎಲ್.ನ ಹೆಚ್ಚಿನ ಸಹಯೋಗ ಮುಂದುವರೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com