ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಫೇಕ್!

ಗೂಗಲ್ ಫಾರ್ಚೂನ್ ಟೆಲ್ಲಿಂಗ್ ವೆಬ್‌ಸೈಟಿಗೂ ಗೂಗಲ್‌ಗೂ ಯಾವುದೇ ಸಂಬಂಧವಿಲ್ಲ. ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಎಂಬುದು ಫೇಕ್ ...
ಗೂಗಲ್ ಫಾರ್ಚೂನ್ ಟೆಲ್ಲಿಂಗ್
ಗೂಗಲ್ ಫಾರ್ಚೂನ್ ಟೆಲ್ಲಿಂಗ್
ಅದೇನೇ ಪ್ರಶ್ನೆಗಳಿದ್ದರೂ ಗೂಗಲ್ ನಲ್ಲಿ ಉತ್ತರ ಹುಡುಕುವವರು ನಾವು. ಯಾವುದೇ ವಿಷಯಗಳನ್ನು ಅರಿತುಕೊಳ್ಳಬೇಕು ಎಂದರೆ ಮೊದಲು ಗೂಗಲ್‌ನಲ್ಲೇ ಹುಡುಕಾಡುತ್ತೇವೆ. ಸ್ಮಾರ್ಟ್‌ಫೋನ್ ಯುಗ ಆರಂಭವಾದೊಡನೆ ಹುಡುಕಾಟಗಳೂ ಜಾಸ್ತಿಯಾದವು. ಎರಡು ದಿನಗಳ ಹಿಂದೆಯಷ್ಟೇ ಅಂದ್ರೆ ಗೂಗಲ್ ನಮ್ಮ ಭವಿಷ್ಯವನ್ನೂ ಹೇಳುತ್ತದೆ ಎಂಬ ಸುದ್ದಿ ಬಿತ್ತರವಾದುದ್ದೇ ತಡ, ನೆಟಿಜನ್‌ಗಳು ಮುಗಿಬೀಳತೊಡಗಿದರು.
ಅಂತರ್ಜಾಲ ಬಳಕೆದಾರರು ತಮ್ಮ ಭವಿಷ್ಯ ಅರಿಯಬೇಕಿದ್ದರೆ ಗೂಗಲ್‌ನಲ್ಲಿ ಕೇಳಿ ಎಂಬ ಘೋಷವಾಕ್ಯದೊಂದಿಗೆ ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಎಂಬ ಲಿಂಕ್ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಆದರೆ ಗೂಗಲ್ ಫಾರ್ಚೂನ್ ಟೆಲ್ಲಿಂಗ್ ವೆಬ್‌ಸೈಟಿಗೂ ಗೂಗಲ್‌ಗೂ ಯಾವುದೇ ಸಂಬಂಧವಿಲ್ಲ. ಗೂಗಲ್ ಫಾರ್ಚೂನ್ ಟೆಲ್ಲಿಂಗ್ ಎಂಬುದು ಫೇಕ್ ವೆಬ್‌ಸೈಟ್ ಆಗಿತ್ತು.
ಗೂಗಲ್ ಫಾರ್ಚೂನ್ ಟೆಲ್ಲಿಂಗ್ -ಪ್ರೆಡಿಕ್ಟ್ ಯುವರ್ ಫಾರ್ಚೂನ್ ಎಂಬದು ಫೇಕ್ ವೆಬ್‌ಸೈಟ್ ಆಗಿದೆ. ಇತ್ತ ಈ ವೆಬ್‌ಸೈಟ್ ವೈರಲ್ ಆಗುತ್ತಿದ್ದಂತೆ  ಬೀಟಾಗೂಗಲ್ ಡಾಟ್ ಕಾಂ ವೆಬ್‌ಸೈಟ್ ಬ್ಲಾಕ್ ಆಯ್ತು .
ನಿರಾಶ್ರಿತರಿಗೆ ಬೆಂಬಲ ನೀಡುವ ಸಲುವಾಗಿ ಈ ವೆಬ್‌ಸೈಟ್ ತಯಾರಿಸಲಾಗಿದೆ. 60 ಮಿಲಿಯನ್ ನಿರಾಶ್ರಿತರಿಗೆ ಅವರ ನಾಳೆಗಳ ಬಗ್ಗೆ ಗೊತ್ತಿಲ್ಲ. ಇಂತಿರುವಾಗ ನಿರಾಶ್ರಿತರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಿಮ್ಮ ನಾಳೆಗಳ ಬಗ್ಗೆ ಚಿಂತಿಸುವಾಗ, ನಾಳೆಗಳೇ ಇಲ್ಲದ ನಿರಾಶ್ರಿತರತ್ತ ಗಮನ ಸೆಳೆಯುವುದಕ್ಕಾಗಿ ಈ ವೆಬ್‌ಸೈಟ್ ತಯಾರಿಸಲಾಗಿದೆ ಎಂದು ವೆಬ್‌ಸೈಟ್ ನಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com