ಸಾವನ್ನು ಸಾರ್ವಜನಿಕ ಲೋಕಕ್ಕೆ ಮತ್ತೆ ತರುವ ಸಾಮಾಜಿಕ ಮಾಧ್ಯಮ

ಇಂದು ಸಾವು ಮತ್ತು ಶೋಕಾಚರಣೆ ಖಾಸಗಿ ವಿಷಯವಾಗಿ ಉಳಿದಿಲ್ಲ. ಟ್ವಿಟ್ಟರ್ ನಂತಹ ಸಾಮಾಜಿಕ...
ಟ್ವಿಟ್ಟರ್ ನ ಲೋಗೋ
ಟ್ವಿಟ್ಟರ್ ನ ಲೋಗೋ
ನ್ಯೂಯಾರ್ಕ್: ಇಂದು ಸಾವು ಮತ್ತು ಶೋಕಾಚರಣೆ ಖಾಸಗಿ ವಿಷಯವಾಗಿ ಉಳಿದಿಲ್ಲ. ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮಗಳು ಜನರ ಸಾವು, ಅದಕ್ಕೆ ಸಂಬಂಧಪಟ್ಟ ಸಂದೇಶ, ಶೋಕಾಚರಣೆಗಳನ್ನು ಬಹಳ ಬೇಗನೆ ಪ್ರಸಾರ ಮಾಡುತ್ತಿರುವುದರಿಂದ ಶೋಕತಪ್ತರ ಸುರಿಮಳೆಯೇ ಹರಿಯುತ್ತಿರುತ್ತದೆ ಎನ್ನುತ್ತಾರೆ ಸಮಾಜಶಾಸ್ತ್ರಜ್ಞರು.
ತಮ್ಮ ಆಪ್ತರು, ಬಂಧುಗಳು ತೀರಿ ಹೋದಾಗ ಜನರು ಹೇಗೆ ಶೋಕಾಚರಣೆ ಮಾಡುತ್ತಾರೆ, ನಂತರ ಪ್ರತಿವರ್ಷ ಅವರನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಮರು ವ್ಯಾಖ್ಯಾನಿಸಿದೆ ಎಂದು ವಾಶಿಂಗ್ಟನ್ ನ ಸೀಟ್ಲ್ಸ್ ವಿಶ್ವವಿದ್ಯಾಲಯದ ತಂಡ ಗುರುತಿಸಿದೆ.
ಸಾಮಾಜಿಕ ಮಾಧ್ಯಮ ಅಪರಿಚಿತರನ್ನು ಒಟ್ಟಿಗೆ ತಂದು ಒಂದೇ ಅಭಿಪ್ರಾಯವನ್ನು ಹಂಚುತ್ತದೆ ಮತ್ತು ತುಂಬಾ ವಿಶಿಷ್ಟವಾಗಿ ಸಾವಿನ ಕುರಿತು ಮಾತುಕತೆಯನ್ನು ತೆರೆಯುತ್ತದೆ ಎಂದು ಡಾಕ್ಟರೇಟ್ ವಿದ್ಯಾರ್ಥಿ ನೀನಾ ಸೆಸಾರೆ ಹೇಳಿದ್ದಾರೆ. ಈ ಹೇಳಿಕೆಗೆ ಬರಲು ಸೆಸಾರೆ ಮತ್ತು ಜೆನ್ನಿಫರ್ ಬ್ರಾನ್ ಸ್ಟಡ್ ಸಾವಿಗೀಡಾದವರ ಟ್ವಿಟ್ಟರ್ ಖಾತೆಗಳಲ್ಲಿ ಜನರ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿದೆ.
ಫೇಸ್ ಬುಕ್ ನಲ್ಲಿ ತಮ್ಮ ಹತ್ತಿರದವರ ಸಾವು ಸಂಭವಿಸಿದರೆ ಮಾತ್ರ ಷೇರ್ ಮಾಡಿ ಕಮೆಂಟ್ ಹಾಕುತ್ತಾರೆ. ಆದರೆ ಟ್ವಿಟ್ಟರ್ ನಲ್ಲಿ ಕೆಲವೊಮ್ಮೆ ಸತ್ತವರು ಯಾರೆಂದು ಗೊತ್ತಿಲ್ಲದಿದ್ದರೂ ಕೂಡ ಸತ್ತವರ ಬಗ್ಗೆ ವೈಯಕ್ತಿಕ ಮತ್ತು ಸಾಮಾನ್ಯ ಹೇಳಿಕೆ ನೀಡುತ್ತಾರೆ. ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಯಂತಹ ಕಾರಣಗಳಿಂದ ಸತ್ತರೆ ಕಮೆಂಟ್ ಗಳು ಇನ್ನೂ ಜಾಸ್ತಿಯಾಗಿರುತ್ತದೆ.
ಸಮಾಜಶಾಸ್ತ್ರಜ್ಞರು mydeathspace.com ಎಂಬ ವೆಬ್ ಸೈಟ್ ನಲ್ಲಿ ಸಾಮಾಜಿಕ ಮಾಧ್ಯಮದ ಪುಟದ ಲಿಂಕ್ ತೆರೆದು ನೋಡಿದಾಗ ಈ ಎಲ್ಲ ಅಂಶಗಳು ಕಂಡುಬಂದಿದೆ. ಆನ್ ಲೈನ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದವರನ್ನು ಹುಡುಕಿದಾಗ 21 ಸಾವಿರ ಶ್ರದ್ಧಾಂಜಲಿಗಳನ್ನು ಅಖೈರುಗೊಳಿಸಿ ಅವರಲ್ಲಿ 39 ಸತ್ತವರ ಟ್ವಿಟ್ಟರ್ ಖಾತೆಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಆತ್ಮಹತ್ಯೆ ಮಾಡಿಕೊಂಡು, ವಾಹನ ಅಪಘಾತ ಮತ್ತು ಗುಂಡಿನ ದಾಳಿಗೆ ಒಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com