ಭಾರತದ ಮೊಟ್ಟ ಮೊದಲ ದೇಶೀ ನಿರ್ಮಿತ ಬಾಹ್ಯಾಕಾಶ ನೌಕೆಯ ಪರೀಕ್ಷೆ ಹೇಗಿತ್ತು ಗೊತ್ತಾ?

ಇಡೀ ವಿಶ್ವವೇ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಇಸ್ರೋದ ಬಹುಉದ್ದೇಶಿತ ದೇಶೀ ನಿರ್ಮಿತ ಬಾಹ್ಯಾಕಾಶ ನೌಕೆ ಆರ್ ಎಲ್ ವಿ-ಟಿಡಿ ಪರೀಕ್ಷಾರ್ಥ ಪ್ರಯೋಗ ಅಭೂತ ಪೂರ್ವ ಯಶಸಸ್ಸು ಕಂಡಿದೆ.

Published: 24th May 2016 02:00 AM  |   Last Updated: 24th May 2016 12:44 PM   |  A+A-


ISRO's new desi reusable wings taste success in maiden flight

ಆರ್ ಎಲ್ ವಿ-ಟಿಡಿ (ಸಂಗ್ರಹ ಚಿತ್ರ)

Posted By : SVN
Source : TNIE
ಚೆನ್ನೈ: ಇಡೀ ವಿಶ್ವವೇ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಇಸ್ರೋದ ಬಹುಉದ್ದೇಶಿತ ದೇಶೀ ನಿರ್ಮಿತ ಬಾಹ್ಯಾಕಾಶ ನೌಕೆ ಆರ್ ಎಲ್ ವಿ-ಟಿಡಿ ಪರೀಕ್ಷಾರ್ಥ ಪ್ರಯೋಗ ಅಭೂತ ಪೂರ್ವ  ಯಶಸಸ್ಸು ಕಂಡಿದೆ.

80ರ ದಶಕದಿಂದ ಸ್ಪೇಸ್‌ ಶಟಲ್‌ಗ‌ಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಬಳಸಿಕೊಂಡಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 2011ರಲ್ಲಿ ಅವುಗಳನ್ನು  ನಿವೃತ್ತಿಗೊಳಿಸಿತ್ತು. ಅದಾದ ಆರು ವರ್ಷಗಳ ಬಳಿಕ ಭಾರತ ಪ್ರಾಯೋಗಿಕ ಪರೀಕ್ಷೆಯೊಂದನ್ನು ಕೈಗೊಂಡಿದ್ದು, ಪ್ರಯೋಗಕ್ಕಾಗಿ ಇಸ್ರೋ ಸಿದ್ಧಪಡಿಸಿದ್ದ ಮಾದರಿ ಒಂದು ಎಸ್‌ಯುವಿ ಕಾರಿನ  ಗಾತ್ರದಷ್ಟಿದೆ.

ತೀರಾ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಮತ್ತು ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಲ್ಲ ಬಾಹ್ಯಾಕಾಶ ನೌಕೆಯ ಪರೀಕ್ಷೆಯನ್ನು ನಿನ್ನೆ  ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಸಲಾಯಿತು. ಪರೀಕ್ಷಾಥ೯ ಪ್ರಯೋಗದಲ್ಲಿ ಮಾನವ ರಹಿತ 6.5 ಮೀಟರ್ ಉದ್ದದ ವಿಮಾನ  ರಚನೆಯನ್ನೇ ಹೋಲುವ ರಾಕೆಟ್ ಅನ್ನು ಆ೦ಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇ೦ದ್ರದಿ೦ದ ಬೆಳಗ್ಗೆ 7 ಗ೦ಟೆಗೆ ಉಡಾವಣೆ ಮಾಡಲಾಯಿತು.

ಪರೀಕ್ಷೆ ಹೇಗಾಯ್ತು?

ಸಾಮಾನ್ಯ ವಿಮಾನವನ್ನೇ ಹೋಲುವಂತಿದ್ದ, 6.5 ಮೀಟರ್‌ ಉದ್ದ, 1.75 ಟನ್‌ ತೂಕದ ಬಾಹ್ಯಾಕಾಶ ನೌಕೆ ಅಥವಾ ಮರುಬಳಕೆ ಮಾಡಬಹುದಾದ (ರೀಯೂಸಬಲ್‌ ಲಾಂಚ್‌ ವೆಹಿಕಲ್‌-  ಟೆಕ್ನಾಲಜಿ ಡೆಮನ್‌ಸ್ಟ್ರೇಟರ್‌-ಆರ್‌ಎಲ್‌ವಿ-ಟಿಡಿ) ಅನ್ನು ವಿಶೇಷ ರಾಕೆಟ್‌ ಬೂಸ್ಟರ್‌ಗಳ ಸಹಾಯದಿಂದ ಬೆಂಗಳೂರಿನಿಂದ 330 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ  ಉಡಾವಣೆ ಮಾಡಲಾಯಿತು. 65 ಕಿ.ಮೀ. ಎತ್ತರವನ್ನು ತಲುಪಿದ ಬಳಿಕ ಶಬ್ದಕ್ಕಿಂತ ಐದು ಪಟ್ಟು ವೇಗ (ಮ್ಯಾಕ್‌ 5)ದಲ್ಲಿ ಸ್ಪೇಸ್‌ ಶಟಲ್‌ ಭೂಮಿಯತ್ತ ಇಳಿಯಲು ಆರಂಭಿಸಿತು. ಅದನ್ನು  ನಿಯಂತ್ರಿತವಾಗಿ ಇಳಿಸುವುದೇ ವಿಜ್ಞಾನಿಗಳ ಪ್ರಮುಖ ಪರೀಕ್ಷೆಯಾಗಿತ್ತು. ಸ್ಪೇಸ್‌ ಶಟಲ್‌ನ ದಿಕ್ಸೂಚಿ, ಗುರಿ, ನಿಯಂತ್ರಣ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು.

ಇನ್ನು ಉಡಾವಣೆಯಾದ ಬಾಹ್ಯಾಕಾಶ ನೌಕೆ ಭೂಮಿ ಗುರುತ್ವಾಕರ್ಷಣೆಯನ್ನು ಕೆಳಗೆ ತಳ್ಳುತ್ತಲೇ ಭೂವಾತಾವರಣದಿಂದ ಹೊರಹೋದ ನೌಕೆ ಬಳಿಕ ಭೂ ವಾತಾವರಣವನ್ನು ಮರು  ಪ್ರವೇಶಿಸುವಾಗ ಅಗಾಧ ಉಷ್ಣಾಂಶವನ್ನು ತಡೆದುಕೊಂಡು ಯಶಸ್ವಿಯಾಗಿ ಭೂಮಿಗೆ ಇಳಿಯುವ ಮೂಲಕ ಯಶಸ್ವಿಯಾಯಿತು. ಈ ಅಗಾಧ ಉಷ್ಣಾಂಶವನ್ನು ತಡೆಯಲು ನೌಕೆಗೆ ಉಷ್ಣ  ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಉಡಾವಣೆಯಾದ 770 ಸೆಕೆಂಡ್‌ (ಸುಮಾರು 13 ನಿಮಿಷ)ಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ನೌಕೆ ಬಿದ್ದಿತ್ತು.

ಶ್ರೀಹರಿಕೋಟಾದಿಂದ 450 ಕಿ.ಮೀ. ದೂರದ ಸಮುದ್ರದಲ್ಲಿ ಬಿದ್ದ ಈ ನೌಕೆಯನ್ನು ತೇಲುವಂತೆ ವಿನ್ಯಾಸ ಮಾಡಿರಲಿಲ್ಲವಾದ್ದರಿಂದ ಅದು ಒಡೆದುಹೋಯಿತು. ಇನ್ನು ನೌಕೆ ಮೇಲೆ ಹೋಗಿ ಕೆಳಗೆ  ಬೀಳುವ ಎಲ್ಲ ಪ್ರಕ್ರಿಯೆ ಮೇಲೆ ನಿಗಾ ಇಡಲು ವಿಶೇಷ ವ್ಯವಸ್ಥೆಯನ್ನು ವಿಜ್ಞಾನಿಗಳು ಮಾಡಿಕೊಂಡಿದ್ದರು. ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ (ಆರ್‍ಎಲ್‍ವಿ-ಟಿಡಿ) 770 ಸೆಕೆ೦ಡು  ಗಳಲ್ಲಿ ಭೂಕಕ್ಷೆಗೆ ಸಾಗಿ ಬ೦ಗಾಳಕೊಲ್ಲಿಯಲ್ಲಿ ಬ೦ದಿಳಿಯಿತು. 65 ಕಿ.ಮಿ. ಎತ್ತರಕ್ಕೆ ಸಾಗಿದ ನೌಕೆಯು ಶಬ್ದದ ವೇಗಕ್ಕಿ೦ತ ಐದು ಪಟ್ಟು ವೇಗದಲ್ಲಿ ಭೂಕಕ್ಷೆಯನ್ನು ಪ್ರವೇಶಿಸಿದ್ದು, ಕೆಳಗಿಳಿಯುವ  ವೇಳೆ ರಾಕೆಟ್‍ನ ದಿಕ್ಸೂಚಿ ಸೌಲಭ್ಯ, ನಿಯ೦ತ್ರಣಾ ವ್ಯವಸ್ಥೆ ಕರಾರುವಕ್ಕಾಗಿತ್ತು ಎ೦ದು ಇಸ್ರೋ ತಿಳಿಸಿದೆ.

10-15 ವರ್ಷಗಲ್ಲಿ ಭಾರತದ ಸ್ವಂತ ಬಾಹ್ಯಾಕಾಶ ನೌಕೆ ಸಿದ್ಧ
ಆರ್‍ಎಲ್‍ವಿ-ಟಿಡಿಯು ಪೂವ೯ಭಾವಿ ಹ೦ತವಾಗಿದ್ದು, ಪೂಣ೯ ಪ್ರಮಾಣದಲ್ಲಿ ಮರುಬಳಕೆ ರಾಕೆಟ್ ನಿಮಾ೯ಣವಾಗಲು 10ರಿ೦ದ 15 ವಷ೯ಗಳು ಬೇಕಾಗಬಹುದು. ಮುಂದಿನ ದಿನಗಳಲ್ಲಿ  ನೌಕೆಯನ್ನು ರನ್‌ವೇ ಮೇಲೆ ಇಳಿಯುವಂತೆ ಹಾಗೂ ನೀರಿನ ಮೇಲೆ ತೇಲುವಂತೆ ವಿನ್ಯಾಸಗೊಳಿಸಿ ಪರೀಕ್ಷೆ ಗೊಳಪಡಿಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ. ಒಟ್ಟಾರೆ ಸ್ಪೇಸ್‌ ಶಟಲ್‌  ಯೋಜನೆಗೆ 95 ಕೋಟಿ ರೂ. ವೆಚ್ಚವಾಗಿದೆ. ಇನ್ನು ಹತ್ತು ವಷ೯ಗಳಲ್ಲಿ ಪೂಣ೯ ಪ್ರಮಾಣದ ಉಡಾವಣಾ ವಾಹನ ನಿಮಿ೯ಸಬಹುದು ಎ೦ದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದು, ಭಾರತದ  ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊ೦ದು ದಾಖಲೆಗೆ ವೇದಿಕೆ ಸಿದ್ಧವಾಗಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp