ಮಹಿಳೆಯರ ಪ್ರೊಫೈಲ್ ಫೋಟೋ ರಕ್ಷಣೆಗೆ ಹೊಸ ಟೂಲ್ಸ್ ಒದಗಿಸಿದ ಫೇಸ್ಬುಕ್

ಭಾರತೀಯ ಫೇಸ್ಬುಕ್ ಮಹಿಳಾ ಬಳಕೆದಾರರ ಮುಖ ಕಾಣುವ ಪ್ರೊಫೈಲ್ ಫೋಟೋಗಳನ್ನು ಯಾರೂ ಡೌನ್ ಲೋಡ್ ಮಾಡಲಾರದಂತೆ, ಯಾರು ಶೇರ್ ಮಾಡಲಾರದಂತೆ ಇತ್ಯಾದಿ ನಿಯಂತ್ರಣಗಳನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸ್ಯಾನ್ ಫ್ರಾನ್ಸಿಸ್ಕೋ: ಭಾರತೀಯ ಫೇಸ್ಬುಕ್ ಮಹಿಳಾ ಬಳಕೆದಾರರ ಮುಖ ಕಾಣುವ ಪ್ರೊಫೈಲ್ ಫೋಟೋಗಳನ್ನು ಯಾರೂ ಡೌನ್ ಲೋಡ್ ಮಾಡಲಾರದಂತೆ, ಯಾರು ಶೇರ್ ಮಾಡಲಾರದಂತೆ ಇತ್ಯಾದಿ ನಿಯಂತ್ರಣಗಳನ್ನು ಒದಗಿಸುವ ಟೂಲ್ ಗಳನ್ನು ಭಾರತದಲ್ಲಿ ಫೇಸ್ಬುಕ್ ಪರಿಚಯಿಸಿದೆ. 
"ಭಾರತದ ಜನರೊಂದಿಗೆ ಮತ್ತು ಸುರಕ್ಷತೆ ಕಾಳಜಿಯ ಸಂಸ್ಥೆಗಳೊಂದಿಗೆ ನಾವು ನಡೆಸಿದ ಸಂಶೋಧನೆಯ ಪ್ರಕಾರ, ಮಹಿಳೆಯರು ತಮ್ಮ ಮುಖವನ್ನೊಳಗೊಂಡ ಪ್ರೊಫೈಲ್ ಫೋಟೋವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲು ಬಯಸುವುದಿಲ್ಲ ಮತ್ತು ಅವುಗಳ ದುರ್ಬಳಕೆಯ ಬಗ್ಗೆ ಕಳವಳ ಹೊಂದಿದ್ದಾರೆ" ಎಂದು ಫೇಸ್ಬುಕ್ ನ ಪ್ರಾಡಕ್ಟ್ ಮ್ಯಾನೇಜರ್ ಆರತಿ ಸೋಮನ್ ಬುಧವಾರ ಬರೆದಿದ್ದಾರೆ. 
ಈಗ ಭಾರತದಲ್ಲಿ ಈ ರಕ್ಷಣಾತ್ಮಕ ಟೂಲ್ ನ ಪ್ರತಿಕ್ರಿಯೆಗಳನ್ನು ನೋಡಿ ಬೇರೆ ದೇಶಗಳಲ್ಲಿಯೂ ಇದನ್ನು ಪರಿಚಯಿಸಲು ಫೇಸ್ಬುಕ್ ಚಿಂತಿಸಿದೆ. 
ಸಾಮಾಜಿಕ ಸಂಶೋಧನಾ ಕೇಂದ್ರ, ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಬ್ರೇಕ್ ತ್ರೂ ಮತ್ತು ಯೂತ್ ಕಿ ಆವಾಜ್ ಇತ್ಯಾದಿ ಸುರಕ್ಷತೆಯ ಕಾಳಜಿ ಸಂಸ್ಥೆಗಳೊಂದಿಗೆ ಚರ್ಚಿಸಿ ಈ ಪ್ರೊಫೈಲ್ ಫೋಟೋ ನಿಯಂತ್ರಣ ಟೂಲ್ ಅಭಿವೃದ್ಧಿಪಡಿಸಲಾಗಿದೆ. 
"ಈಗ ಬೇರೆಯವರು ಪ್ರೊಫೈಲ್ ಫೋಟೋವನ್ನು ಡೌನ್ ಲೋಡ್ ಮಾಡುವುದಕ್ಕಾಗಲಿ, ಹಂಚಿಕೊಳ್ಳುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ನಿಮ್ಮ ಜೊತೆ ಫೇಸ್ಬುಕ್ ನಲ್ಲಿ ಗೆಳೆಯರು ಅಲ್ಲದಿರುವವರು ನಿಮ್ಮ ಪ್ರೊಫೈಲ್ ಫೋಟೋಗೆ ಅವರನ್ನು ಸೇರಿದಂತೆ ಬೇರೆ ಯಾರನ್ನು ಟ್ಯಾಗ್ ಮಾಡಲು ಸಾಧ್ಯವಿಲ್ಲ" ಎಂದು ಸೋಮನ್ ಹೇಳಿದ್ದಾರೆ. 
ಫೇಸ್ಬುಕ್ ಪ್ರೊಫೈಲ್ ಫೋಟೋದ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದರಿಂದಲೂ ತಡೆಯುವುದಕ್ಕೆ ಫೇಸ್ಬುಕ್ ಪ್ರಯತ್ನಿಸಿದ್ದು, ಸದ್ಯಕ್ಕೆ ಈ ಅವಕಾಶ ಆಂಡ್ರಾಯ್ಡ್ ಫೋನ್ ಗಳಲ್ಲಿ ಲಭ್ಯವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com