ಉಡಾವಣೆಯಾದ ಬೆನ್ನಲ್ಲೇ ಇಸ್ರೋ ಸಂಪರ್ಕ ಕಳೆದುಕೊಂಡ ಜಿಸ್ಯಾಟ್ 6ಎ ಉಪಗ್ರಹ

ಇತ್ತೀಚೆಗೆ ಯಶಸ್ವಿಯಾಗಿ ಉಡಾವಣೆಯಾಗಿದ್ದ ಇಸ್ರೋದ ಜಿಸ್ಯಾಟ್ 6ಎ ಉಪಗ್ರಹ ಇದೀಗ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಇತ್ತೀಚೆಗೆ ಯಶಸ್ವಿಯಾಗಿ ಉಡಾವಣೆಯಾಗಿದ್ದ ಇಸ್ರೋದ ಜಿಸ್ಯಾಟ್ 6ಎ ಉಪಗ್ರಹ ಇದೀಗ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಯಶಸ್ವಿಯಾಗಿ ಉಡಾವಣೆಯಾದ ಬಳಿಕ ಈ ವರೆಗೂ ಜಿಸ್ಯಾಟ್ 6ಎ ಕುರಿತು ಯಾವುದೇ ರೀತಿಯ ಮಾಹಿತಿ ಲಭ್ಯವಾಗಿರಲಿಲ್ಲ. ಇಸ್ರೋ ಕೂಡ ಈ ಬಗ್ಗೆ ಮೌನಕ್ಕೆ ಶರಣಾಗಿತ್ತು. ಈ ಸಂಬಂಧ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಕೂಡ ನಡೆದಿತ್ತು. ಇದೀಗ ಈ ಎಲ್ಲ ಊಹಾಪೋಹಗಳಿಗೆ ಇಸ್ರೋ ತೆರೆ ಎಳೆದಿದ್ದು, ನಭಕ್ಕೆ ಚಿಮ್ಮಿದ ಜಿಸ್ಯಾಟ್‌ - 6ಎ ಉಪಗ್ರಹ ನಿಯಂತ್ರಣ ಘಟಕದ ಸಂಪರ್ಕ ಕಳೆದುಕೊಂಡಿದೆ ಎಂದು ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ (ಇಸ್ರೋ) ಹೇಳಿದೆ.
ಭಾರಿ ನಿರೀಕ್ಷೆಗಳೊಂದಿಗೆ ನಭಕ್ಕೆ ಚಿಮ್ಮಿದ ಸಂಪರ್ಕ ಉಪಗ್ರಹ ಆರಂಭದಲ್ಲಿ ಉತ್ತರ ರೀತಿಯಲ್ಲಿ ಸಾಗಿ ಕಕ್ಷೆ ತಲುಪಿತ್ತು ಎಂದು ಇಸ್ರೋ ಮಾಹಿತಿ ನೀಡಿತ್ತು. ಆದರೆ ನಂತರ ಸಂಪರ್ಕ ಕಳೆದುಕೊಂಡಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪವರ್‌ ಸಿಸ್ಟಂನಲ್ಲಿ ದೋಷ ಕಾಣಿಸಿಕೊಂಡಿರಬಹುದು ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ರಾತ್ರಿಯಿಂದಲೇ ಉಪಗ್ರಹ ಸಂಪರ್ಕ ಕಳೆದುಕೊಂಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರು ವಿಜ್ಞಾನಿಗಳು, ತಜ್ಞರು ಹಾಗೂ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಕುರಿತು ಅಧ್ಯಯನ ನಡೆಸಲು ಪ್ರತ್ಯೇಕ ತಂಡವನ್ನು ರಚಿಸಲು ಇಸ್ರೋ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com