ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!

ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ.

Published: 30th January 2019 12:00 PM  |   Last Updated: 31st January 2019 06:08 AM   |  A+A-


Google 'really really' wants to know why Indians keep asking Google Assistant to marry

ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!

Posted By : SBV SBV
Source : Online Desk
ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ. ಆದರೆ ಭಾರತೀಯರ ಕುರಿತ ಆ ಒಂದು ಸಂಗತಿ ಮಾತ್ರ ಗೂಗಲ್ ಗೆ ಇನ್ನೂ ಅರ್ಥವಾಗದ ವಿಷಯವಾಗಿ ಉಳಿದುಹೋಗಿದೆ. 

ನಿಮ್ಮ ಆಲೋಚನೆ ಸರಿ ಇದೆ. ಅದೇ ವಿವಾಹಕ್ಕೆ ಸಂಬಂಧಿಸಿದ ವಿಷಯ. ಭಾರತೀಯರು ಯದ್ವಾ ತದ್ವಾ ವಿವಾಹದ ಬಗ್ಗೆಯೇ ಗೂಗಲ್ ಮಾಡುತ್ತಿರುತ್ತಾರಂತೆ. ಇದರಿಂದ ದಿಕ್ಕೆಟ್ಟಂತಾಗಿರುವ ಗೂಗಲ್ ಟ್ವಿಟರ್ ನಲ್ಲಿ ತಾನೇ ಪ್ರಶ್ನೆಯೊಂದನ್ನು ಕೇಳಿದೆ. ಮದುವೆಯಾಗುವುದಕ್ಕೆ ಗೂಗಲ್ ನ್ನು ಏಕೆ ಕೇಳುತ್ತಿರುತ್ತೀರಿ ಎಂಬುದನ್ನು  ನಿಜವಾಗಿಯೂ..... ನಿಜವಾಗಿಯೂ ನಾವು ತಿಳಿದುಕೊಳ್ಳಬೇಕಿದೆ ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ. 

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp