ಪಬ್ ಜಿ ಮೊಬೈಲ್ ಲೈಟ್: ಭಾರತದಲ್ಲೂ ಲಭ್ಯ, ವಿಶೇಷತೆಗಳೇನು?

ಪಬ್ ಜಿ ಗೇಮ್ ಅದಾಗಲೇ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜನಪ್ರಿಯ ಆನ್ ಲೈನ್ ಗೇಮ್ ಗೆ ಯುವಜನತೆ ಫಿದಾ ಆಗಿದೆ. ಈಗ ಮೊಬೈಲ್ ಲೈಟ್ ಆವೃತ್ತಿಯಲ್ಲಿ ಲಭ್ಯವಾಗುತ್ತಿದೆ.

Published: 26th July 2019 12:00 PM  |   Last Updated: 26th July 2019 03:16 AM   |  A+A-


ಪಬ್ ಜಿ ಗೇಮ್

Posted By : VS VS
Source : Online Desk
ಪಬ್ ಜಿ ಗೇಮ್ ಅದಾಗಲೇ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜನಪ್ರಿಯ ಆನ್ ಲೈನ್ ಗೇಮ್ ಗೆ ಯುವಜನತೆ ಫಿದಾ ಆಗಿದೆ. ಈಗ ಮೊಬೈಲ್ ಲೈಟ್ ಆವೃತ್ತಿಯಲ್ಲಿ ಲಭ್ಯವಾಗುತ್ತಿದೆ. 

ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಬಳಸಲು ಅನುಕೂಲವಾಗುವಂತೆ ಕಡಿಮೆ ರ್ಯಾಮ್ ಮತ್ತು ಸ್ಟೋರೇಜ್ ಹೊಂದಿರುವ ಪಬ್ ಜಿ ಲೈಟ್ ಆವೃತ್ತಿಯನ್ನು ಪರಿಚಯಿಸಲಾಗಿತ್ತು. ಇದೀಗ ಪಬ್ ಜಿ ಮೊಬೈಲ್ ಲೈಟ್ ಕೂಡ ಲಭ್ಯವಾಗುತ್ತಿದ್ದು ಕಡಿಮೆ ಸಾಮರ್ಥ್ಯದ ಮೊಬೈಲ್ ನಲ್ಲಿ ಬಳಸಬಹುದು. 

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗಾಗಲೇ ಪಬ್ ಜಿ ಮೊಬೈಲ್ ಲೈಟ್ ಆವೃತ್ತಿ ಡೌನ್ ಲೋಡ್ ಗೆ ಲಭ್ಯವಿದೆ. 400 ಎಂಬಿ ಫೈಲ್ ಗಾತ್ರವಿರುವ ಹೊಸ ಪಬ್ ಜಿ ಮೊಬೈಲ್ ಲೈಟ್ ಆವೃತ್ತಿಯು 2 ಜಿಬಿ ರ್ಯಾಮ್ ಮತ್ತು ಅದಕ್ಕಿಂತ ಕಡಿಮೆ ರ್ಯಾಮ್ ಇದ್ದರೂ, ಸುಲಭದಲ್ಲಿ ಆಡಬಹುದಾಗಿದೆ. 

ಇಂಟರ್ ನೆಟ್ ಸಾಮರ್ಥ್ಯ ತುಂಬಾ ಕಡಿಮೆ ಇದ್ದ ಸಂದರ್ಭದಲ್ಲೂ ಸಹ ಪಬ್ ಜಿ ಗೇಮ್ ಅನ್ನು ಗುಣಮಟ್ಟದಲ್ಲಿ ಯಾವುದೇ ಅಡ್ಡಿ ಇಲ್ಲದೆ ಆಟಬಹುದು. ಸರಳ ನಿಯಂತ್ರಣಗಳೊಂದಿಗೆ ಪಬ್ ಜಿ ಮೊಬೈಲ್ ಅನುಭವವನ್ನು ಇದು ನೀಡಲಿದೆ.
Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
facebook twitter whatsapp