ಕಂಕಣ ಸೂರ್ಯಗ್ರಹಣ ವೀಕ್ಷಣೆಯಿಂದ ಯಾವುದೇ ದೋಷ, ಅವಘಡ ಸಂಭವಿಸುವುದಿಲ್ಲ: ವಿಜ್ಞಾನ ಪರಿಷತ್

ಜೂನ್ 21ರ ಭಾನುವಾರ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ವೀಕ್ಷಣೆಯಿಂದ ಯಾವುದೇ ದೋಷ ಅಥವಾ ಅವಘಡ ಸಂಭವಿಸುವುದಿಲ್ಲ ಎಂದು ರಾಜ್ಯ ವಿಜ್ಞಾನ ಪರಿಷತ್ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೂನ್ 21 ರ ಭಾನುವಾರ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ವೀಕ್ಷಣೆಯಿಂದ ಯಾವುದೇ ದೋಷ ಅಥವಾ ಅವಘಡ ಸಂಭವಿಸುವುದಿಲ್ಲ ಎಂದು ರಾಜ್ಯ ವಿಜ್ಞಾನ ಪರಿಷತ್ ತಿಳಿಸಿದೆ.

'ಈ ವಿದ್ಯಮಾನ ನೋಡುವುದರಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸುವುದಿಲ್ಲ. ಪ್ರಕೃತಿಯ ಮೇಲೆ ಯಾವ ಅಡ್ಡ ಪರಿಣಾಮಗಳೂ ಇದರಿಂದ ಉಂಟಾಗುವುದಿಲ್ಲ. ಯಾವುದೇ ಭಯವಿಲ್ಲದೆ, ಈ ಎಲ್ಲ ಪ್ರಕ್ರಿಯೆ ವೀಕ್ಷಿಸಬಹುದು. ಎಂದು ಹೇಳಿದೆ.

ಇದೊಂದು ಖಗೋಳ ಮಂಡಲದಲ್ಲಿ ನಡೆಯುವ ಸಹಜ ಪಕ್ರಿಯೆಯಾಗಿದ್ದು, ವೈಯಕ್ತಿಕವಾಗಿ ಯಾರಿಗೂ ಯಾವ ದೋಷಗಳು ಸಂಭವಿಸುವುದಿಲ್ಲ ಯಾರೂ ಮೂಢನಂಬಿಕೆಗಳಿಗೆ ಬಲಿಯಾಗಬಾರದು ಎಂದು ವಿಜ್ಞಾನ ಪರಿಷತ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

'ಕಂಕಣ ಸೂರ್ಯ ಗ್ರಹಣ ’ಮುಖ್ಯವಾಗಿ ಜಾರ್ಖಂಡ್, ಉತ್ತರಾಖಂಡ, ದೆಹಲಿ, ಜೋಧಪುರ ಪ್ರದೇಶಗಳಲ್ಲಿ ಸಂಪೂರ್ಣ ಉಂಗುರ ಗ್ರಹಣವಾಗಿ ಗೋಚರಿಸಲಿದೆ. ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಶೇ೦.೪೦ರಷ್ಟು ಮಾತ್ರ ಕಾಣಲಿದೆ. ಈ ಪ್ರದೇಶಗಳಲ್ಲಿ ಬೆಳಿಗ್ಗೆ ೧೦.೧೩ರಿಂದ ಆರಂಭವಾಗಿ ಮಧ್ಯಾಹ್ನ ೧.೩೫ಕ್ಕೆ ಕೊನೆಗೊಳ್ಳಲಿದೆ.

'ಈ ಸೂರ್ಯಗ್ರಹಣದ ವಿಶೇಷವೆಂದರೆ, ಹಗಲಿನ ಅವಧಿ ಹೆಚ್ಚಾಗಿದೆ. ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ತನ್ನ ಪಯಣ ಆರಂಭಿಸುತ್ತಾನೆ. ಇದನ್ನು ಬೈನಾಕ್ಯುಲರ್ ಇಲ್ಲವೆ ದೂರದರ್ಶಕ ಇದ್ದಲ್ಲಿ ಬಿಳಿಗೋಡೆಯ ಅಥವಾ ಬಿಳಿಹಾಳೆಯ ಮೇಲೆ ಪ್ರತಿಬಿಂಬವನ್ನು ಮೂಡಿಸಿ ನೋಡಬಹುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್. ಮಹೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com