ಇಸ್ರೋಗೆ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಪೂರೈಸಿದ ಹೆಚ್ಎಎಲ್ 

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್ ಕಂಪನಿ ತಯಾರಿಸಿದ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್  (ಸಿ32 ಎಲ್ ಹೆಚ್ 2)ನ್ನು ಒಪ್ಪಂದ ವೇಳಾಪಟ್ಟಿಗಿಂತ ಬಹಳಷ್ಟು ಮುಂಚಿತವಾಗಿ ಇಸ್ರೋಗೆ ಪೂರೈಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್ ಕಂಪನಿ ತಯಾರಿಸಿದ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್  (ಸಿ32 ಎಲ್ ಹೆಚ್ 2)ನ್ನು ಒಪ್ಪಂದ ವೇಳಾಪಟ್ಟಿಗಿಂತ ಬಹಳಷ್ಟು ಮುಂಚಿತವಾಗಿ ಇಸ್ರೋಗೆ ಪೂರೈಸಿದೆ.

  ಸಿ 32-ಎಲ್‌ಹೆಚ್ 2 ಟ್ಯಾಂಕ್ ಅಲ್ಯೂಮಿನಿಯಂ ಮಿಶ್ರಲೋಹದ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಆಗಿದ್ದು, ಜಿಎಸ್ ಎಲ್ ವಿ ಎಂಕೆ-3 ಉಡಾವಣಾ ವಾಹಕದ ಪೆಲೋಡ್ ಸಾಮರ್ಥ್ಯವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೆಚ್ ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ ಎಎಲ್ ಪ್ರಕಾರ, 89 ಘನ ಮೀಟರ್ ಪರಿಮಾಣದಲ್ಲಿ 5, 755 ಕೆಜಿ ಪ್ರೊಪೆಲ್ಲಂಟ್ ತುಂಬಲು 8 ಮೀಟರ್ ಉದ್ದದ ನಾಲ್ಕು ಮೀಟರ್ ವ್ಯಾಸದ ಟ್ಯಾಂಕ್ ಇದಾಗಿದೆ. ಕಠಿಣ ಗುಣಮಟ್ಟದ ಅವಶ್ಯಕತೆಗಳಿಗೆ ಅಲ್ಯೂಮಿನಿಯಂ ಮಿಶ್ರಲೋಹದ ಬೆಸುಗೆ ಹಾಕಿದ ಪ್ರೊಪೆಲ್ಲಂಟ್ ಟ್ಯಾಂಕ್‌ಗಳನ್ನು ತಯಾರಿಸಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಜ್ಞಾನಗಳನ್ನು ಎಚ್‌ಎಎಲ್ ಕರಗತ ಮಾಡಿಕೊಂಡಿದೆ ಎಂದು ಅದು ಹೇಳಿದೆ.

 ವಿಶ್ವಾಸಾರ್ಹ ಪಾಲುದಾರನಾಗಿ ಹೆಚ್ಎಎಲ್ ,  ಕಳೆದ ಐದು ದಶಕಗಳಿಂದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಇಸ್ರೋ ಜೊತೆ ಸಹಭಾಗಿತ್ವ ಹೊಂದಿದ್ದು,  ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ-ಎಂಕೆಐಐ ಮತ್ತು ಜಿಎಸ್‌ಎಲ್‌ವಿ-ಎಂಕೆ 3 ಉಡಾವಣಾ ವಾಹಕಗಳಿಗಾಗಿ ನಿರ್ಣಾಯಕ ರಚನೆಗಳು, ಟ್ಯಾಂಕೇಜ್ ಗಳು ಮತ್ತು ಸ್ಯಾಟಲೈಟ್ ರಚನೆಗಳನ್ನು ಪೂರೈಸಿದೆ ಎಂದು ಹೆಚ್ ಎಎಲ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com