ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದ ಭಾರತದ ಆದಿತ್ಯ-ಎಲ್1 ಮಿಷನ್

ಭಾರತದ ಆದಿತ್ಯ-ಎಲ್1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು (ಫುಲ್ ಡಿಸ್ಕ್ ಚಿತ್ರ) ಸೆರೆ ಹಿಡಿದಿದೆ ಎಂದು ಇಸ್ರೋ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. 
ಆದಿತ್ಯ-ಎಲ್1 ಮಿಷನ್ ಸೆರೆ ಹಿಡಿದ ಸೂರ್ಯನ ಚಿತ್ರ
ಆದಿತ್ಯ-ಎಲ್1 ಮಿಷನ್ ಸೆರೆ ಹಿಡಿದ ಸೂರ್ಯನ ಚಿತ್ರ

ನವದೆಹಲಿ: ಭಾರತದ ಆದಿತ್ಯ-ಎಲ್1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು (ಫುಲ್ ಡಿಸ್ಕ್ ಚಿತ್ರ) ಸೆರೆ ಹಿಡಿದಿದೆ ಎಂದು ಇಸ್ರೋ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. 

ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ವಿವರಗಳಿಗೆ ಒಳನೋಟಗಳನ್ನು ಒದಗಿಸುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿದೆ. 

ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ಅಲ್ಟ್ರಾವೈಲೆಟ್ ಟೆಲಿಸ್ಕೋಪ್ ಅಥವಾ SUIT ಉಪಕರಣವು 200-400 nm ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ಹೇಳಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿಯುತ್ತದೆ.

ಸನ್‌ಸ್ಪಾಟ್‌ಗಳು, ಪ್ಲೇಜ್ ಮತ್ತು ಸ್ತಬ್ಧವಾದ ಸನ್ ರಿಕಿಯಾನ್‌ಗಳು ಫೋಟೋಗಳಲ್ಲಿ ಸೆರೆಯಾದ  ವೈಶಿಷ್ಟ್ಯಗಳಲ್ಲಿ ಸೇರಿವೆ. SUIT ನಿಂದ ಪಡೆದ ಮಾಹಿತಿ ವಿಜ್ಞಾನಿಗಳಿಗೆ ಕಾಂತೀಯ ಸೌರ ವಾತಾವರಣ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. "ನವೆಂಬರ್ 20 ರಂದು, SUIT ಪೇಲೋಡ್ ನ್ನು ಸಕ್ರಿಯಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com