ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಉತ್ತರ ಫೆಸಿಫಿಕ್ ಸಮುದ್ರದಲ್ಲಿ (North Pacific Ocean) ಬೀಳಬಹುದು ಎಂದು ತಿಳಿದುಬಂದಿದೆ.
Published: 16th November 2023 06:03 PM | Last Updated: 16th November 2023 08:15 PM | A+A A-

LVM3 M4 ರಾಕೆಟ್
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಬಹುಶಃ ಉತ್ತರ ಫೆಸಿಫಿಕ್ ಸಮುದ್ರದಲ್ಲಿ (North Pacific Ocean) ಬೀಳಬಹುದು ಎಂದು ತಿಳಿದುಬಂದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಈ ಬಗ್ಗೆ ಮಾಹಿತಿ ನೀಡಿದ್ದು, “ಎಲ್‌ವಿಎಂ3 ಎಂ4 (LVM3 M4 launch vehicle) ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಭೂಮಿಯ ವಾತಾವರಣಕ್ಕೆ ಬುಧವಾರ ಸುಮಾರು 14:42ರ ಅವಧಿಯಲ್ಲಿ ಅನಿಯಂತ್ರಿತ ಮರು ಪ್ರವೇಶ ಮಾಡಿದ್ದು, ಬಹುಶಃ ಫೆಸಿಫಿಕ್ ಸಮುದ್ರದಲ್ಲಿ ಬೀಳುವ ಸಾಧ್ಯತೆ ಇದೆ. ಈ ರಾಕೆಟ್ ಬಾಡಿ (NORAD id 57321) ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ x 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: ವಿವಾದದ ನಡುವೆ 'ಆತ್ಮಚರಿತ್ರೆ' ಪ್ರಕಟಣೆಯಿಂದ ಹಿಂದೆ ಸರಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್
ಲಾಂಚ್ ಆದ 124 ದಿನಗಳ ಬಳಿಕ ರಾಕೆಟ್ ಬಾಡಿ ವಾಪಸ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) (Inter-Agency Space Debris Coordination Committee) ಶಿಫಾರಸು ಮಾಡಿದ ಲೋ ಅರ್ಥ್ ಆರ್ಬಿಟ್ ಆಬ್ಜೆಕ್ಟ್ (Low Earth Orbit Object)ಗಳಿಗೆ 25 ವರ್ಷಗಳ ನಿಯಮವನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚಂದ್ರಯಾನ 3 ಭಾರತದ ಮೂರನೇ ಲೂನಾರ್ ಮಿಷನ್ ಆಘಿದ್ದು, ಜುಲೈ 14ರಂದು ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾಗಿತ್ತು. ಒಂದು ತಿಂಗಳ ಬಳಿಕ ಚಂದ್ರಯಾನ -3 (Chandrayaan-3)ರ ವಿಕ್ರಮ್ ಲ್ಯಾಂಡರ್ (Vikram Lander), ಪ್ರಗ್ಯಾನ್ ರೋವರ್ (Pragyan Rover)ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ 23ರಂದು ಲ್ಯಾಂಡ್ ಆಗಿತ್ತು. ಇದರೊಂದಿಗೆ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ.
ಇದನ್ನೂ ಓದಿ: ಅರಣ್ಯ ಹಾಗೂ ಜೌಗು ಪ್ರದೇಶಗಳ ವಿವರ ಒಳನೋಟ ನೀಡಲಿರುವ ನಾಸಾ-ಇಸ್ರೋ ರಡಾರ್ ಉಪಗ್ರಹ
ಲ್ಯಾಂಡ್ ಆದ 10 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸ್ಲೀಪ್ ಮೋಡ್‌ಗೆ ಹೋಗಿದ್ದವು. ಈ ಮಧ್ಯೆ, ಲ್ಯಾಂಡರ್ ನಿಂದ ಬೇರ್ಪಟ್ಟ ಚಂದ್ರಯಾನ 3ರ ಪ್ರಪಲ್ಷನ್ ಮಾಡೆಲ್ ಈಗಲೂ ಚಂತ್ರದನ ಕಕ್ಷೆಯಲ್ಲಿ ಸುತ್ತುತ್ತಿದೆ. 2019ರಲ್ಲಿ ಇಸ್ರೋ ಚಂದ್ರಯಾನ 2 ಮಿಷನ್ ಅನ್ನು ಇಸ್ರೋ ಕೈಗೊಂಡಿತ್ತು. ಆದರೆ, ಚಂದ್ರನ ನಿರ್ದಿಷ್ಟ ಜಾಗದಲ್ಲಿ ಇಳಿಯಲು ವಿಫಲವಾಗಿತ್ತು. ಇದಕ್ಕೂ ಮೊದಲು ಭಾರತವು ಚಂದ್ರಯಾನ-1 ಯಶಸ್ವಿಯಾಗಿ ಕೈಗೊಂಡಿತ್ತು.