ChatGPTಗೆ ಭಾರತದ 'ಕೃತ್ರಿಮ್ AI' ಸಡ್ಡು: 22 ಭಾಷೆಗಳ ಸಾಮರ್ಥ್ಯ, 10 ಭಾಷೆಗಳಲ್ಲಿ ಪ್ರತಿಕ್ರಿಯೆ

ಚಾಟ್‌ಜಿಪಿಟಿಗೆ ಭಾರತದ ಪರ್ಯಾಯ ಉತ್ತರ ಎಂದೇ ಹೇಳಲಾಗುತ್ತಿವ ಬಹು-ಭಾಷಾ ಕೃತಕ ಬುದ್ದಿಮತ್ತೆ 'ಕೃತ್ರಿಮ್ ಎಐ' ಅನ್ನು ರೈಡಿಂಗ್ ಸೇವಾ ಸಂಸ್ಥೆ ಓಲಾ ಅನಾವರಣಗೊಳಿಸಿದೆ.
ಕೃತ್ರಿಮ್ ಎಐ
ಕೃತ್ರಿಮ್ ಎಐ

ಬೆಂಗಳೂರು: ಚಾಟ್‌ಜಿಪಿಟಿಗೆ ಭಾರತದ ಪರ್ಯಾಯ ಉತ್ತರ ಎಂದೇ ಹೇಳಲಾಗುತ್ತಿವ ಬಹು-ಭಾಷಾ ಕೃತಕ ಬುದ್ದಿಮತ್ತೆ 'ಕೃತ್ರಿಮ್ ಎಐ' ಅನ್ನು ರೈಡಿಂಗ್ ಸೇವಾ ಸಂಸ್ಥೆ ಓಲಾ ಅನಾವರಣಗೊಳಸಿದೆ.

ಸಾಮಾನ್ಯವಾಗಿ ಹಾಲಿ ಅಸ್ಥಿತ್ವದಲ್ಲಿರುವ ಚಾಟ್ ಜಿಪಿಟಿ ಎಐ ಇಂಗ್ಲಿಷ್ ನಲ್ಲಿ ಕೇಳವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತದೆ. ಆದರೆ ಪ್ರಸ್ತುತ ಓಲಾ ಸಂಸ್ಥೆ ಅನಾವರಣಗೊಳಿಸಿರುವ ಕೃತ್ರಿಮ್ ಎಐ ಬಹುಭಾಷಾ ಆ್ಯಪ್ ಆಗಿದ್ದು, ಸಂಸ್ಕೃತವೂ ಸೇರಿದಂತೆ 22 ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತೆಲುಗು, ಕನ್ನಡ ಮತ್ತು 10 ಭಾಷೆಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತದೆ.

ಈ ಬಗ್ಗೆ ಮಾತನಾಡಿರುವ ಓಲಾ ಸಂಸ್ಥೆಯ ಸಿಇಒ ಭವೀಶ್ ಅಗರ್ವಾಲ್ ಅವರು, ಕೃತ್ರಿಮ್ ಮುಂದಿನ ದಿನಗಳಲ್ಲಿ ಹೆಚ್ಚಿನ ಭಾರತೀಯ ಭಾಷೆಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com