ಆಹಾರ ವ್ಯರ್ಥವಾಗದಂತೆ ತಡೆಯಲು ಬೆಂಗಳೂರಿನ ನಾಲ್ವರು ವಿದ್ಯಾರ್ಥಿಗಳಿಂದ ಆ್ಯಪ್ ಅಭಿವೃದ್ಧಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಂತ್ರಜ್ಞಾನದ ಬಗ್ಗೆ ಒಲವು ಹೊಂದಿರುವ ನಾಲ್ವರು ವಿದ್ಯಾರ್ಥಿಗಳು ಆಹಾರ ಉದ್ಯಮದಲ್ಲಿನ ನಿರ್ಣಾಯಕ ಸಮಸ್ಯೆಯನ್ನು ತೊಡೆದುಹಾಕುವ ಉದ್ದೇಶ ಹೊಂದಿದ್ದಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2023 ರ ಪ್ರಕಾರ, ಭಾರತೀಯರು ವಾರ್ಷಿಕವಾಗಿ 68.7 ಮಿಲಿಯನ್ ಟನ್ ಆಹಾರವನ್ನು ವ್ಯರ್ಥ ಮಾಡುತ್ತಾರೆ. ಮನೆ ಆಹಾರ ವ್ಯರ್ಥದಲ್ಲಿ ಚೀನಾ ನಂತರ ಭಾರತ ದೇಶವು ಎರಡನೇ ಸ್ಥಾನದಲ್ಲಿದೆ. ಆಹಾರ ಉತ್ಪಾದನೆಯ ಸಮಯದಲ್ಲಿ ಶೇ. 35 ರಷ್ಟು ಆಹಾರವು ಕೊಳೆಯುತ್ತದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನ ಇಂಟರ್ ನ್ಯಾಷನಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈ ಯುವ ವಿದ್ಯಾರ್ಥಿಗಳು, ದೊಡ್ಡ ಪ್ರಮಾಣದಲ್ಲಿ ಆಹಾರ ವ್ಯರ್ಥವನ್ನು ನಿಭಾಯಿಸಲು ನವೀನ ವಿಧಾನವನ್ನು ಕಂಡುಕೊಂಡಿದ್ದಾರೆ. ಪ್ರಣವ್ ಭೂತಾದ, ಕುಶಾಲ್ ಪಾರ್ಥನಿ, ಯಶ್ ಗುಪ್ತಾ ಮತ್ತು ಸಿದ್ಧಾರ್ಥ್ ಚೌಹಾಣ್ ಅವರು ಆಹಾರ ತಾಜಾತನದ ನೈಜ-ಸಮಯದ ಮೇಲ್ವಿಚಾರಣೆಗಾಗಿ ಅನಿಲ ಸಂವೇದಕಗಳನ್ನು ಸಂಯೋಜಿಸುವ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದು ಕಂಪ್ಯೂಟರ್ ತಂತ್ರಜ್ಞಾನದೊಂದಿಗೆ ಸಂಭವನೀಯ ಹಾಳಾಗುವಿಕೆ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಕಡಿಮೆ-ವೆಚ್ಚದ, ಬಳಕೆದಾರ ಸ್ನೇಹಿ ಆ್ಯಪ್ ತಾಜಾತನ ಮತ್ತು ಕಲ್ಮಶಗಳನ್ನು ಪತ್ತೆಹಚ್ಚಲು ಅನಿಲ ಸಂವೇದಕ ತಂತ್ರಜ್ಞಾನವನ್ನು ಬಳಸುವ ಉದ್ದೇಶ ಹೊಂದಿದೆ. ಇದು ಉತ್ಪನ್ನಗಳ ಬಳಕೆಯು ಸುರಕ್ಷಿತ, ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂಬುದುರ ಖಾತ್ರಿಪಡಿಸುವಂತೆಯೇ, ಹಾಳಾಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಮತ್ತು ಮಾರಾಟ ಮಾಡಲು ಉತ್ಪಾದಕರಿಗೆ ಸಹಾಯ ಮಾಡುತ್ತದೆ.

ಆ್ಯಪ್ ಅಭಿವೃದ್ಧಿಪಡಿಸಿದವರಲ್ಲಿ ಒಬ್ಬರಾದ ಪ್ರಣವ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ, ಎಲ್ಲಾ ಆಹಾರ ಉತ್ಪನ್ನಗಳು ಕೊಳೆಯಲು ಪ್ರಾರಂಭಿಸಿದಾಗ ತರಕಾರಿಗಳು, ಹಣ್ಣುಗಳು, ಹಾಲು ಅಥವಾ ಇತರ ಖಾದ್ಯ ವಸ್ತುಗಳು ಕೆಲವು ಅನಿಲಗಳನ್ನು ಹೊರಸೂಸುತ್ತವೆ. ಈ ಸೆನ್ಸಾರ್ ಗಳು ಆ ರೀಡಿಂಗ್‌ಗಳನ್ನು ರೆಕಾರ್ಡ್ ಮಾಡಿ, ಅದನ್ನು ಕಂಪ್ಯೂಟರ್ ನಲ್ಲಿ ತಿಳಿಸುತ್ತದೆ. ಉತ್ಪನ್ನಗಳು ಮತ್ತು ಅವುಗಳ ನಿಯತಾಂಕಗಳನ್ನು ಆಧರಿಸಿ ಮೊದಲಿಗೆ ಉತ್ತಮ ಮತ್ತು ಕೆಟ್ಟ ಆಹಾರ ಮೌಲ್ಯಗಳ ಬಗ್ಗೆ ಕಂಪ್ಯೂಟರ್ ಮಾದರಿಯಲ್ಲಿ ತಿಳಿಯುತ್ತೇವೆ. ತದನಂತರ ಅದು ಹಾಳಾಗುವ ಸರಕುಗಳ ಆರೋಗ್ಯ ಮೌಲ್ಯವನ್ನು ನಿಖರವಾಗಿ ಗುರುತಿಸುತ್ತದೆ ಎಂದರು. ಎಲ್ಲಾ ಸೆನ್ಸಾರ್ ಗಳು ಸೇರಿ ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಸಾಧನದ ಬೆಲೆ ಕೇವಲ ರೂ. 1,000 ಎಂದು ಅವರು ತಿಳಿಸಿದರು.

ಈ ಸಾಧನ ಅವಶ್ಯಕತೆಗಳ ಆಧಾರದ ಮೇಲೆ 7 ರಿಂದ 12 ಗ್ಯಾಸ್ ಸೆನ್ಸರ್ ಗಳ ನೆಟ್‌ವರ್ಕ್ ಹೊಂದಿರುತ್ತದೆ, ಇದು ಕಾರ್ಬನ್ ಮಾನಾಕ್ಸೈಡ್, ಮೀಥೇನ್, ಹೈಡ್ರೋಜನ್ ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳಂತಹ ಅನಿಲಗಳನ್ನು ಪತ್ತೆಹಚ್ಚಲು ಆಯಕಟ್ಟಿನ ಸ್ಥಾನದಲ್ಲಿರುತ್ತದೆ. ಸಣ್ಣ-ಪ್ರಮಾಣದ ಮತ್ತು ದೊಡ್ಡ ವ್ಯವಹಾರಗಳಿಗೆ ಸಹಾಯ ಮಾಡಲು ರೂ. 2,000 ಬೆಲೆ ನಿಗದಿಗೆ ಗ್ರೂಪ್ ಬಯಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com