ವರ್ಷಾಂತ್ಯಕ್ಕೆ 'ಗಗನಯಾನ', ಕೇಂದ್ರ ಸಂಪುಟದಿಂದ Chandrayaan 4 ಅನುಮೋದನೆ: ISRO ಅಧ್ಯಕ್ಷ ಎಸ್ ಸೋಮನಾಥ್!

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.
ISRO Chief
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್
Updated on

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕನಸಿನ ಯೋಜನೆ ಗಗನಯಾನ ಬಹುತೇಕ ಸಿದ್ಧವಾಗಿದ್ದು, ವರ್ಷಾಂತ್ಯದಲ್ಲಿ ಉಡಾವಣೆ ನಡೆಸುವ ಸಾಧ್ಯತೆ ಇದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ISRO Chief
ಗಗನಯಾನ-1 ಮಿಷನ್ ಈ ವರ್ಷಾಂತ್ಯ ಉಡಾವಣೆಗೆ ಸಿದ್ಧ, ಮಾಡ್ಯೂಲ್ ಸಿದ್ಧತೆ ಹಂತದಲ್ಲಿದೆ: ಇಸ್ರೊ ಅಧ್ಯಕ್ಷ ಸೋಮನಾಥ್

ಅಂತೆಯೇ ಇದೇ ವೇಳೆ ಚಂದ್ರಯಾನ 4 ಬಗ್ಗೆ ಮಾತನಾಡಿದ ಸೋಮನಾಥ್ ಅವರು, ಚಂದ್ರಯಾನ 4ಗೆ ಕೇಂದ್ರ ಸಚಿವ ಸಂಪುಟವು ಚಂದ್ರಯಾನ 4 ಯೋಜನೆಗೆ ಅನುಮೋದನೆಯನ್ನು ಘೋಷಿಸಿದೆ. ಆದ್ದರಿಂದ ಮುಂದಿನ ಕೆಲವು ತಿಂಗಳುಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿವೆ. ಇದೀಗ ನಾವು ಎಂಜಿನಿಯರಿಂಗ್ ಕಾರ್ಯ ಪೂರ್ಣಗೊಳಿಸಿ ಸಚಿವ ಸಂಪುಟ ಅನುಮೋದನೆ ಪಡೆದಿದ್ದೇವೆ. ಇದು ಅನೇಕ ಅಂಗೀಕಾರಗಳ ಮೂಲಕ ಹೋಗಬೇಕಾಗಿದೆ.

ಚಂದ್ರಯಾನ 3ರಲ್ಲಿ ನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿದಿದ್ದೆವು. ಈಗ ಚಂದ್ರನಿಂದ ಹಿಂತಿರುಗುವುದು ಮತ್ತೊಂದು ಕಾರ್ಯಾಚರಣೆಗೆ ಸಮಾನವಾಗಿದೆ. ಅಲ್ಲದೆ ನೌಕೆಯಲ್ಲಿನ ಮಾಡ್ಯೂಲ್‌ಗಳ ಸಂಖ್ಯೆ 5 ಆಗುತ್ತದೆ. ಇದಕ್ಕಾಗಿ ನಾವು ಉಡಾವಣಾ ಸಾಮರ್ಥ್ಯವನ್ನು ಹೊಂದಿಲ್ಲ, ಆದ್ದರಿಂದ ನಾವು ಎರಡು ಉಡಾವಣೆಗಳನ್ನು ಮಾಡಬೇಕಾಗಿದೆ. ಆದ್ದರಿಂದ ಆ ಯೋಜನೆ ಹೆಚ್ಚು ಸಂಕೀರ್ಣವಾಗಿದೆ ಎಂದು ಹೇಳಿದರು.

ಈ ಹಿಂದೆ ಗಗನಯಾನ ಯೋಜನೆ ಬಳಿಕ 2035ರ ಹೊತ್ತಿಗೆ ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲಿದ್ದು, 2040ರ ಹೊತ್ತಿಗೆ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ ಇದೆ. ಅಂತೆಯೇ ಶುಕ್ರ ಮತ್ತು ಮಂಗಳ ಗ್ರಹಕ್ಕೂ ನೌಕೆ ಕಳುಹಿಸುವ ಯೋಜನೆ ಇದೆ ಎಂದು ಸೋಮನಾಥ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com