Axiom 4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನಕ್ಕೆ ಕೊನೆಗೂ ದಿನಾಂಕ ಫಿಕ್ಸ್; ಜೂನ್ 25ಕ್ಕೆ ಉಡಾವಣೆ

ಜೂನ್ 25ರಂದು ಆಕ್ಸಿಯಮ್-4 ಮಿಷನ್ ಉಡಾವಣೆ ಮಾಡಲಾಗುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
astronaut Group
ಗಗನಯಾತ್ರಿಗಳು
Updated on

ಬೆಂಗಳೂರು: ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ದೊಡ್ಡ ಮತ್ತು ಐತಿಹಾಸಿಕ ದಿನ ಕೊನೆಗೂ ಹತ್ತಿರ ಬಂದಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬುಧವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದ್ದಾರೆ.

ಜೂನ್ 25ರಂದು ಆಕ್ಸಿಯಮ್-4 ಮಿಷನ್ ಉಡಾವಣೆ ಮಾಡಲಾಗುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನೇತೃತ್ವದ‌ ಆಕ್ಸಿಯಮ್‌-4 ಬಾಹ್ಯಾಕಾಶ ಯೋಜನೆ ಜೂನ್ 25 ರಂದು ಉಡಾವಣೆಗೊಳ್ಳಲಿದೆ ಎಂದು ನಾಸಾ ಮತ್ತು ಸ್ಪೇಸ್‌ಎಕ್ಸ್‌ ಜಂಟಿಯಾಗಿ ಭರವಸೆ ನೀಡಿದೆ.

ತಾಂತ್ರಿಕ ತೊಂದರೆಗಳ ಕಾರಣಕ್ಕೆ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಆಕ್ಸಿಯಮ್-‌4 ಬಾಹ್ಯಾಕಾಶ ಕಾರ್ಯಾಚರಣೆಯನ್ನು ಎಲ್ಲಾ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಿದ ಬಳಿಕ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದ್ದು, ಬುಧವಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದೆ.

astronaut Group
ಆಕ್ಸಿಯಮ್-4 ಬೆನ್ನೇರಿ: ಶುಭಾಂಶು ಶುಕ್ಲಾ ಐತಿಹಾಸಿಕ ಯಾನ (ಜಾಗತಿಕ ಜಗಲಿ)

ಆ್ಯಕ್ಸಿಯಂ–4 ಮಿಷನ್ ಜೂನ್ 25 ರಂದು ಬೆಳಗಿನ ಜಾವ 2:31ಕ್ಕೆ ಫ್ಲೊರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ ಹಾರಾಟ ನಡೆಸಲಿದೆ ಎಂದು ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕಾರ್ಯಾಚರಣೆಯ ನೇರಪ್ರಸಾರವನ್ನು ಉಡಾವಣೆಗೆ ಸುಮಾರು ಎರಡು ಗಂಟೆಗಳ ಮೊದಲು ಪ್ರಾರಂಭಿಸಲಾಗುತ್ತದೆ. ಇದನ್ನು @SpaceX ಹ್ಯಾಂಡಲ್‌ನಲ್ಲಿ X-ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದಾಗಿದೆ.

‌ಕಮಾಂಡರ್ ಪೆಗ್ಗಿ ವಿಟ್ಸನ್ ಅವರು, ಆ್ಯಕ್ಸಿಯಂ–4 ವಾಣಿಜ್ಯ ಕಾರ್ಯಾಚರಣೆಯ ನೇತೃತ್ವವಹಿಸಿದ್ದು, ಶುಕ್ಲಾ ಮಿಷನ್ ಪೈಲಟ್ ಆಗಿ, ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com