ಇಂದಿರಾ ಕಾರಿಗೇ ದಂಡ ವಿಧಿಸಿದ್ದ ಬೇಡಿ..!

ಕಿರಣ್ ಬೇಡಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಐಪಿಎಸ್ ಅಧಿಕಾರಿಯಾಗಲ್ಲ. ಸಮಾಜ ವಿಜ್ಞಾನದ ಉಪನ್ಯಾಸಕರಾಗಿ!..
ಕಿರಣ್ ಬೇಡಿ (ಸಂಗ್ರಹ ಚಿತ್ರ)
ಕಿರಣ್ ಬೇಡಿ (ಸಂಗ್ರಹ ಚಿತ್ರ)

ಕಿರಣ್ ಬೇಡಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಐಪಿಎಸ್ ಅಧಿಕಾರಿಯಾಗಲ್ಲ. ಸಮಾಜ ವಿಜ್ಞಾನದ ಉಪನ್ಯಾಸಕರಾಗಿ!

1970-72ರವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ 1972ರಲ್ಲಿ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ ಇವರು. ಪೊಲೀಸ್ ಇಲಾಖೆಗೆ ಸೇರಿದ ಮೇಲೆ ನಾನಾ ವಿಭಾದದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಚಂಡೀಗಡದ ಲೆಫ್ಟಿನೆಂಟ್ ಗವರ್ನರ್‌ಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕೆ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಕಾರಿಗೇ ಕಿರಣ್ ಬೇಡಿ ದಂಡ ವಿಧಿಸಿದ್ದರು.

1994ರಲ್ಲಿ ಅವರಿಗೆ ರಾಮನ್ ಮ್ಯಾಗ್ಸಸೆ ಅವಾರ್ಡ್ ಮತ್ತು ಜವಾಹರ್ ಲಾಲ್ ನೆಹರು ಫೆಲೋಶಿಪ್ ಸಹ ಇವರಿಗೆ ಲಭಿಸಿದೆ. ಅರ್ಹವಾಗಿ ತನಗೆ ಸಿಗಬೇಕಿದ್ದ ಪೊಲೀಸ್ ಉನ್ನತ ಹುದ್ದೆ ತಮಗಿಂತ ಕಿರಿಯರ ಪಾಲಾದಾಗ ಪ್ರತಿಭಟನಾರ್ಥವಾಗಿ 2007ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com