ಅದೇ ವೇಳೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದರೆ, ಅಪ್ಪ ಅಮ್ಮ ಬಳಿಯಲ್ಲಿ ಇಲ್ಲದೇ ಇದ್ದರೆ ಮಕ್ಕಳು ಸುರಕ್ಷಿತರಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ. ಒಂದು ವರುಷದಲ್ಲಿ 13, 833 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಕೃತ್ಯಗಳನ್ನು ಮಾಡಿದವರು ಮಕ್ಕಳ ಸಂಬಂಧಿಕರೇ ಆಗಿದ್ದಾರೆ. ಕಳೆದ ವರುಷದ ಅಂಕಿ ಅಂಶಗಳನ್ನು ನೋಡುವುದಾದರೆ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶೇ. 86 ಪ್ರಕರಣಗಳಲ್ಲಿ ಸಂಬಂಧಿಕರೇ ಮಕ್ಕಳ ಮೇಲೆ ಈ ರೀತಿ ಕೃತ್ಯಗಳನ್ನು ಮಾಡಿದ್ದಾರೆ. ಆದಾಗ್ಯೂ , ಲೈಂಗಿಕ ದೌರ್ಜನ್ಯಕ್ಕೊಳಗಾದವರಲ್ಲಿ ಶೇ. 50 ರಷ್ಟು ಮಂದಿ 11 ಮತ್ತು 18ರ ನಡುವೆ ವಯಸ್ಸುಳ್ಳವರಾಗಿದ್ದಾರೆ. ಇವರಲ್ಲಿ ಶೇ. 91ರಷ್ಟು ಮಂದಿ ಸಂಬಂಧಿಕರಿಂದಲೇ ದೌರ್ಜನ್ಯಕ್ಕೊಳಪಟ್ಟವರಾಗಿದ್ದಾರೆ.