ವಿಶ್ವದ ಬಲಿಷ್ಟ ಯುದ್ಧ ವಿಮಾನಗಳಂತೆ ಪ್ರಬಲವಲ್ಲದೇ ಇದ್ದರೂ ಭಾರತಕ್ಕೆ ತೇಜಸ್ ವಿಶೇಷ!

ಪ್ರಸ್ತುತ ವಾಯುಸೇನೆಗೆ ಸೇರ್ಪಡೆಯಾಗುತ್ತಿರುವ ತೇಜಸ್ ಯುದ್ಧ ವಿಮಾನಗಳು ವಿಶ್ವದ ಬಲಾಢ್ಯ ಸೇನೆಗಳ ಬಳಿ ಇರುವ ಯುದ್ಧ ವಿಮಾನಗಳಂತೆ ಪ್ರಬಲ ಯುದ್ಧ ವಿಮಾನವಲ್ಲದೇ ಇದ್ದರೂ, ಭವಿಷ್ಯದಲ್ಲಿ ಈ ಬಲಾಢ್ಯ ದೇಶಗಳ ಪ್ರಬಲ ಯುದ್ಧ ವಿಮಾನಗಳಿಗೆ ಸ್ಪರ್ಧೆಯೊಡ್ಡಬಲ್ಲ ಸಾಮರ್ಥ್ಯಹೊಂದಿದೆ...
ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)
ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)

ಬೆಂಗಳೂರು: ಪ್ರಸ್ತುತ ವಾಯುಸೇನೆಗೆ ಸೇರ್ಪಡೆಯಾಗುತ್ತಿರುವ ತೇಜಸ್ ಯುದ್ಧ ವಿಮಾನಗಳು ವಿಶ್ವದ ಬಲಾಢ್ಯ ಸೇನೆಗಳ ಬಳಿ ಇರುವ ಯುದ್ಧ ವಿಮಾನಗಳಂತೆ ಪ್ರಬಲ ಯುದ್ಧ ವಿಮಾನವಲ್ಲದೇ ಇದ್ದರೂ, ಭವಿಷ್ಯದಲ್ಲಿ ಈ ಬಲಾಢ್ಯ ದೇಶಗಳ ಪ್ರಬಲ ಯುದ್ಧ ವಿಮಾನಗಳಿಗೆ ಸ್ಪರ್ಧೆಯೊಡ್ಡಬಲ್ಲ ಸಾಮರ್ಥ್ಯಹೊಂದಿದೆ.

ಭವಿಷ್ಯದಲ್ಲಿ ಈ ತೇಜಸ್ ಯುದ್ಧ ವಿಮಾನವನ್ನು ಮೇಲ್ದರ್ಜೆಗೇರಿಸುವ ಮೂಲಕ ಯುದ್ಧ ವಿಮಾನವನ್ನು ಬಲಿಷ್ಟವನ್ನಾಗಿಸುವ ಗುರಿ ಹೆಚ್ ಎಎಲ್ ನದ್ದಾಗಿದೆ. ಇದೇ ಕಾರಣಕ್ಕಾಗಿ ಭಾರತೀಯ ವಾಯುಸೇನೆಗೆ ತೇಜಸ್ ದೊಡ್ಡ ಶಕ್ತಿ ಎಂದು ಹೇಳಲಾಗುತ್ತಿದೆ.

ಇನ್ನು ದೇಶೀ ನಿರ್ಮಿತ ಯುದ್ಧ ವಿಮಾನವೆಂಬ ಖ್ಯಾತಿ ಪಡೆದಿರುವ ತೇಜಸ್ ತಾಂತ್ರಿಕವಾಗಿ ಹಲುವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇತ್ತೀಚಿನ ತಲೆಮಾರಿನ ಯುದ್ಧ ವಿಮಾನದ ಅತ್ಯಾಧುನಿಕ ತ೦ತ್ರಜ್ಞಾನ ಹೊ೦ದಿದೆ. ಇನ್ನು ಆಕಾಶಮಾಗ೯ದಲ್ಲಿಯೇ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯವನ್ನು ತೇಜಸ್ ಹೊಂದಿದ್ದು, ಅತ್ಯಾಧುನಿಕ  ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಮಾರ್ಗಮಧ್ಯೆಯೇ ಅಂದರೆ ಆಕಾಶಮಾಗ೯ದಲ್ಲೇ ಇ೦ಧನ ಭತಿ೯ ಮಾಡಿಕೊಳ್ಳುವ ವ್ಯವಸ್ಥೆಯನ್ನು ತೇಜಸ್ ಗೆ ಕಲ್ಪಿಸಲಾಗಿದ್ದು, ಬಾ೦ಬ್ ದಾಳಿಯ ಸಾಮಥ್ಯ೯ವನ್ನು ಕೂಡ ಹೊಂದಿದೆ.

ಒಟ್ಟು ತೇಜಸ್ ಸುಮಾರು 7,070 ಕೆಜಿ ಹೊಂದಿದ್ದು, ಲೋಡ್ ಆದಾದ ಇದರ ತೂಕ 9, 500 ಕೆಜಿಯಾಗಿರುತ್ತದೆ. ಇದರ ಗರಿಷ್ಠ ಟೇಕ್ ಆಫ್ ಸಾಮರ್ಥ್ಯ 13, 200ಕೆಜಿ ತೂಕವಿದೆ. ಹೀಗಾಗಿ ಭಾರತದ ಬ್ರಹ್ಮೋಸ್ ನಂತಹ ಪ್ರಬಲ ಕ್ಷಿಪಣಿಗಳನ್ನು ಹೊತ್ತು ಸಾಗುವ ಸಾಮರ್ಥ್ಯ ತೇಜಸ್ ಗಿದೆ. ತೇಜಸ್ ಯುದ್ಧ ವಿಮಾನದ ರೆಕ್ಕೆಯ ವಿಸ್ತಾರ 38.4ಮೀ. ಇದ್ದು,  2, 458ಕೆಜಿಯಷ್ಟು ಆಂತರಿಕ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಪ್ರತೀ ಗಂಟೆಗೆ ಗರಿಷ್ಠ 2, 205 ಕಿ.ಮೀ ವೇಗದಲ್ಲಿ ತೇಜಸ್ ಚಲಿಸುತ್ತದೆ.

ಪಾಕಿಸ್ತಾನದ ಥ೦ಡರ್ ಜೆಎಫ್-17ಗಿಂತಲೂ ತೇಜಸ್ ಬಲಾಢ್ಯ
ಭಾರತ ಸರ್ಕಾರ ತೇಜಸ್ ಯುದ್ಧ ವಿಮಾನ ಯೋಜನೆಯನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಪಾಕಿಸ್ತಾನವು ಕೂಡ ಚೀನಾದ ಚೆ೦ಗ್ಡು ಏರ್ ಕ್ರಾಫ್ಟ್ ಇ೦ಡಸ್ಟ್ರಿ ಕಾಪೋ೯ರೇಷನ್ ಸಹಯೋಗದೊ೦ದಿಗೆ ಜೆಫ್‍-17 ಥ೦ಡರ್ ಯುದ್ಧ ವಿಮಾನ ನಿಮಾ೯ಣಕ್ಕೆ ಕೈಹಾಕಿತ್ತು. 2010ರಲ್ಲಿ ಆರ೦ಭವಾದ ಈ ಯೋಜನೆಯು ಈ ವಷ೯ದ ಜನವರಿಯಲ್ಲಿ ಮುಕ್ತಾಯಗೊ೦ಡು ಎರಡು ವಿಮಾನಗಳನ್ನು ಸೇನೆಗೆ ಸೇಪ೯ಡೆಗೊಳಿಸಲಾಗಿತ್ತು. ಜೆ-17ಗೆ ಹೋಲಿಸಿದರೆ ತಾಂತ್ರಿಕವಾಗಿ ತೇಜಸ್ ಹಲವು ವೈಶಿಷ್ಟ್ಯತೆಗಳನ್ನು ಹೊ೦ದಿದೆ. ಎರಡು ವಿಮಾನಗಳೂ ಸಿ೦ಗಲ್ ಇ೦ಜಿನ್ ಸಾಮಥ್ಯ೯ದ್ದಾಗಿದೆ.

ಜೆ-17 ಶಸ್ತ್ರಾಸ್ತ್ರ ರಹಿತ ವಿಮಾನದ ಖಾಲಿತೂಕವು 6,411 ಕೆಜಿಗಳಿದ್ದರೆ, ತೇಜಸ್ ನ ತೂಕವು 7, 070 ಕೆಜಿಯಷ್ಟಿದೆ. ಟೇಕಾಫ್ ಆಗಲು ಜೆಎಫ್-17 ಗೆ 609 ಮೀಟರ್ ಉದ್ದದ ರನ್ ವೇ ಅಗತ್ಯವಿದ್ದರೆ, ತೇಜಸ್ ಗೆ 460ಮೀ ರನ್ ವೇ ಸಾಕಾಗುತ್ತದೆ. ಲ್ಯಾ೦ಡಿ೦ಗ್ ನಲ್ಲಿಯೂ ಜೆಎಫ್-17 ಕ್ರಮಿಸುವ ಕನಿಷ್ಠ ಅ೦ತರವು 823 ಮೀ.ನಷ್ಟಿದ್ದರೆ, ತೇಜಸ್ ಗೆ 750 ಮೀಟರ್ ಉದ್ಧದ ರನ್ ವೇ ಸಾಕಾಗುತ್ತದೆ. ಜೆಎಫ್-17 ಮೂರನೇ ತಲೆಮಾರಿನ ಯುದ್ಧ ವಿಮಾನವಾಗಿದ್ದರೆ, ತೇಜಸ್ ಸುಧಾರಿತ ಆವೃತ್ತಿಯು ಐದನೇ ತಲೆಮಾರಿನ ಯುದ್ಧ ವಿಮಾನವಾಗಿದೆ.

2018ರ ಬಳಿಕ ನಿರ್ಮಾಣವಾಗಲಿರುವ ಅಪ್ ಗ್ರೇಟೆಡ್ ತೇಜಸ್ ವಿಮಾನಗಳಿಗೆ ಅಗತ್ಯವಿರುವ ಉಪಕರಣಗಳನ್ನು ವಿದೇಶಿ ಸಂಸ್ಥೆಗಳು ಪೂರೈಕೆ ಮಾಡಲಿದ್ದು, ಅತ್ಯುತ್ತಮ ಗುಣಮಟ್ಟದ ಯುದ್ಧ  ವಿಮಾನವಾಗಿ ತೇಜಸ್ ಹೊರಹೊಮ್ಮಲಿದೆ. 2018ರಲ್ಲಿ ತೇಜಸ್ ಮಾರ್ಕ್ ಐ ಹೆಸರಿನ ಅತ್ಯಾಧುನಿಕ 20 ಯುದ್ಧ ವಿಮಾನಗಳು ಸೇನೆಗೆ ಸೇರ್ಪಡೆಯಾಗಲಿವೆ. ಅಲ್ಲದೆ ಈ ಮಾದರಿಯ ಯುದ್ಧ ವಿಮಾನಗಳು ವಿಶ್ವದ ಯಾವುದೇ ರಾಷ್ಟ್ರದ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯ ಕಣ್ತಪ್ಪಿಸಿ ಸಾಗುವ ತಂತ್ರಜ್ಞಾನವನ್ನು ಹೊಂದಿರಲಿದೆ. 2026ರ ವೇಳೆಗೆ ಅತ್ಯಂತ ಸುಧಾರಿತ 100 ತೇಜಸ್ ಮಾರ್ಕ್ ಐಎ ಯುದ್ಧ ವಿಮಾನಗಳು ಸೇನೆಗೆ ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ಭಾರತ ನಿರ್ಮಿತ ತೇಜಸ್ ಯುದ್ಧ ವಿಮಾನಗಳನ್ನು ಶ್ರೀಲ೦ಕಾ ಮತ್ತು ಈಜಿಪ್ಟ್ ದೇಶಗಳು ಖರೀದಿಸಲು ಆಸಕ್ತಿ ತೋರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com