ಏಳಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೆತ್ತ ೧೯ ದಶಲಕ್ಷ ತಾಯಂದಿರು ಭಾರತದಲ್ಲಿದ್ದಾರೆ!

ಸುಮಾರು ೧೯ ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾರತದಲ್ಲಿ ಏಳು ಅಥವಾ ಅದಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾರೆ ಮತ್ತು ಅವರಲ್ಲಿ ೧೫ ದಶಲಕ್ಷ ಮಹಿಳೆಯರು (೮೦%) ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುಮಾರು ೧೯ ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾರತದಲ್ಲಿ ಏಳು ಅಥವಾ ಅದಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾರೆ ಮತ್ತು ಅವರಲ್ಲಿ ೧೫ ದಶಲಕ್ಷ ಮಹಿಳೆಯರು (೮೦%) ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಎನ್ನುತ್ತದೆ ಇಂಡಿಯಾಸ್ಪೆಂಡ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಜನಗಣತಿ ಮಾಹಿತಿ.

ಈ ೧೫ ದಶಲಕ್ಷ ಮಹಿಳೆಯರಲ್ಲಿ ಬಹುತೇಕರು ಅನಕ್ಷರಸ್ಥರು ಎಂದು ತಿಳಿಸಿರುವ ಸಮೀಕ್ಷೆ ಕೇವಲ ೦.೦೯ ದಶಲಕ್ಷ ಜನ ಮಾತ್ರ ಇವರಲ್ಲಿ ಪದವಿ ಪಡೆದಿದ್ದಾರೆ ಅಥವಾ ಅದಕ್ಕೂ ಹೆಚ್ಚಿನ ವ್ಯಾಸಂಗ ಮಾಡಿದ್ದಾರೆ ಎನ್ನುತ್ತದೆ ಗಣತಿ.

ವಿದ್ಯಾವಂತ ಮಹಿಳೆಯರು ಹೇರುವುದು ಕಡಿಮೆ ಎನ್ನುವ ಈ ಗಣತಿ, ೨೦೦೧ರಿಂದ ಮಹಿಳೆಯರು ಜನ್ಮ ನೀಡುವ ಸರಾಸರಿ ಪ್ರಮಾಣ ಕುಂಠಿತವಾಗಿದೆ ಎನ್ನುತ್ತದೆ.

೨೦೦೧ ರಲ್ಲಿ ಮಹಿಳೆಯರು ಜನ್ಮ ನೀಡುವ ಸರಾಸರಿ ಪ್ರಮಾಣ ಪ್ರತಿ ಮಹಿಳೆಯರಿಗೆ ೩.೮ ಇದ್ದು, ಈಗ ಅದು ೧೩% ಕುಂಠಿತವಾಗಿದ್ದು ೩.೩ ಆಗಿದೆ ಎನ್ನಲಾಗಿದೆ.

ಸೆಂಟ್ರಲ್ ಇಂಟಲ್ಲಿಜೆನ್ಸ್ ಏಜೆನ್ಸಿ (ಸಿ ಐ ಎ) ಪ್ರಕಾರ ಭಾರತದಲ್ಲಿ ಸರಾಸರಿ ಮಹಿಳಾ ಫಲವತ್ತತೆ ಪ್ರಮಾಣ ೨.೪೮ ಇದ್ದು ಬ್ರಿಕ್ಸ್ ದೇಶಗಳಲ್ಲಿ ಇದು ಹೆಚ್ಚಿನದ್ದು ಎಂದಿದೆ. ಪಾಕಿಸ್ತಾನ , ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆ ಇದೆ.

ಸಿ ಐ ಎ ಮಾಹಿತಿ ಮೇಲಿನ ಜನಗಣತಿಗಿಂತಲೂ ಭಿನ್ನವಾಗಿದ್ದರೂ, ಒಂದೇ ರೀತಿಯ ಭೌಗೋಳಿಕ ಲಕ್ಷಣಗಳುಳ್ಳ ಮತ್ತು ಆರ್ಥಿಕತೆಯುಳ್ಳ ದೇಶಗಳಿಗೆ ಹೋಲಿಸಿದಾಗ ಫಲವತ್ತತೆ ಪ್ರಮಾಣ ಭಾರತದಲ್ಲಿ ಹೆಚ್ಚಿದೆಯೆಂದು ತಿಳಿಸುತ್ತದೆ.

ಸಾಕ್ಷರತಾ ಪ್ರಮಾಣ ಹೆಚ್ಚಾದಂತೆ ಜನನ ಪ್ರಮಾಣವೂ ಕಡಿಮೆಯಾಗಿದೆ ಎಂದು ಜನಗಣತಿ ತಿಳಿಸಿದ್ದು, ಪದವಿ ಶಿಕ್ಷಣ ಪಡೆದ ಮಹಿಳೆಯರಲ್ಲಿ ಈ ಪ್ರಮಾಣ ೧.೯ ಇದೆ ಎಂದಿದೆ. ೨೦೧೧ರಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಹಿಂದಿನ ೫೩.೭% ನಿಂದ ೮೪.೬% ಗೆ ಏರಿದೆ ಎಂದು ಕೂಡ ತಿಳಿಯಲಾಗಿದೆ.

ಭಾರತದಲ್ಲಿ 10 ರಿಂದ ೧೯ ವರ್ಷದೊಳಗಿನ ಸುಮಾರು ೧೨.೭ ದಶಲಕ್ಷ ಹೆಣ್ಣುಮಕ್ಕಳನ್ನು ಮಾಡುವೆ ಮಾಡಿಕೊಡಲಾಗುತ್ತದೆ ಮತ್ತು ಅವರಿಗೆ ಆರು ದಶಲಕ್ಷ ಮಕ್ಕಳು ಜನಿಸುತ್ತವೆ ಎಂದು ಇಂಡಿಯಾಸ್ಪೆಂಡ್ ಈ ಹಿಂದೆ ವರದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com