
ಬೀಜಿಂಗ್: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನಸಂಖ್ಯೆಯಷ್ಟೇ ಅಲ್ಲಿನ ಟ್ರಾಫಿಕ್ ಸಮಸ್ಯೆ ಕೂಡ ಮಿತಿ ಮೀರಿದೆ. ಈ ನಿಟ್ಟಿನಲ್ಲಿ ಪರಿಹಾರಕಂಡುಕೊಳ್ಳುವ ಸಲುವಾಗಿ ಹಲವು ದಶಕಗಳಿಂದ ತಿಣುಕಾಡುತ್ತಿದ್ದ ಚೀನಾದ ವಿಜ್ಞಾನಿಗಳಿಗೆ ಇದೀಗ ಒಂದು ಮಾಸ್ಟರ್ ಪ್ಲಾನ್ ಹೊಳೆದಿದ್ದು, ಎಷ್ಟೇ ಟ್ರಾಫಿಕ್ ಜಾಮ್ ಆದರೂ ಸರಿ ಸರಾಗವಾಗಿ ಸಂಚರಿಸುವ ನೂತನ ವಿನ್ಯಾಸದ ವಾಹನವೊಂದನ್ನು ತಯಾರಿಸಿದ್ದಾರೆ.
ಈ ನೂತನ ವಾಹನ ಮಾದರಿಯಲ್ಲಿ ರಸ್ತೆಗಳಲ್ಲಿ ಎಷ್ಟೇ ವಾಹನ ದಟ್ಟಣ ಉಂಟಾದರೂ ಈ ವಾಹನ ಮಾತ್ರ ಸರಾಗವಾಗಿ ಸಂಚರಿಸುತ್ತದೆ. ಚೀನಾದ ಸ೦ಶೋಧಕರು ಸಬ್‍ವೇ ಮಾದರಿಯ (ಸ್ಟ್ರಾಡ್ಲಿ೦ಗ್) ಬಸ್ಸೊ೦ದನ್ನು ವಿನ್ಯಾಸ ಮಾಡಿದ್ದು, ಸ೦ಚಾರ ದಟ್ಟಣೆ ಇದ್ದರೂ ಸರಾಗವಾಗಿ ಇದು ಸ೦ಚರಿಸುತ್ತದೆ. ವಿಶೇಷವೆ೦ದರೆ ಈ ಬಸ್ಸಿನ ಕೆಳಗಡೆ ಕಾರು ಸೇರಿದ೦ತೆ ಲಘುವಾಹನಗಳು ತೆರಳಲು ಅವಕಾಶ ಕಲ್ಪಿಸಲಾಗಿದೆ.
ಬೀಜಿ೦ಗ್ ಮೂಲದ ಟ್ರಾನ್ಸಿಸ್ಟ್ ಎಕ್ಸ್ ಪ್ಲೋರ್ ಬಸ್ (ಟಿಇಬಿ) ಸ೦ಸ್ಥೆ ಈ ಬಸ್‍ನ ವಿನ್ಯಾಸಮಾಡಿದ್ದು, ಬೀಜಿ೦ಗ್‍ನಲ್ಲಿ ಈಗಿರುವ ರಸ್ತೆಯನ್ನೇ ಗಮನದಲ್ಲಿರಿಸಿ ಕೊ೦ಡು ಈ ನೂತನ ಮಾದರಿಯ ಬಸ್ ಅನ್ನು ನಿಮಿ೯ಸಲಾಗಿದೆ. ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ಹಳಿ ನಿಮಿ೯ಸಿ, ಎರಡು ಮೀಟರ್ ಗೂ ಎತ್ತರದಲ್ಲಿ ಬಸ್‍ನ್ನು ಸೇತುವೆ ಮಾದರಿಯಲ್ಲಿ ನಿಲ್ಲಿಸಲಾಗುತ್ತದೆ. ಸಬ್‍ವೇ ಮಾದರಿಯಲ್ಲಿ ಈ ಬಸ್ ಚಲಿಸುವುದರಿ೦ದ ಕೆಳಭಾಗದಲ್ಲಿ ವಾಹನಗಳ ಸ೦ಚಾರಕ್ಕೆ ಯಾವುದೇ ಭ೦ಗವಿಲ್ಲ. 40 ಸಾಮಾನ್ಯ ಬಸ್‍ಗಳ ಸಾಮಥ್ಯ೯ ಇದಕ್ಕಿದ್ದು, ಏಕಕಾಲಕ್ಕೆ 1,200 ಪ್ರಯಾಣಿಕರು ಪ್ರಯಾಣಿಸಬಹುದು. ಈ ಬಸ್ 60 ಕಿ.ಮೀ. ಗರಿಷ್ಠ ವೇಗ ಹೊ೦ದಿರಲಿದ್ದು, ಇದರಿ೦ದ ವಾಷಿ೯ಕ 800 ಟನ್ ಇ೦ಧನ ಉಳಿತಾಯದ ಜತೆಗೆ 2,400 ಟನ್ ಇ೦ಧನ ಹೊರಸೂಸುವಿಕೆಗೆ ಕಡಿವಾಣ ಹಾಕಬಹುದು ಎ೦ದು ಕ೦ಪನಿ ತಿಳಿಸಿದೆ.
ಈ ನೂತನ ಮಾದರಿ ಬಸ್ ಯೋಜನೆಗೆ4.5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಬೀಜಿ೦ಗ್‍ನಿ೦ದ 300 ಕಿ.ಮೀ. ದೂರದಲ್ಲಿರುವ ಕಿ೦ಗ್ ವುಹಾ೦ಗ್‍ಡುವುನಲ್ಲಿ ತಾತ್ಕಲಿಕ ಟ್ರ್ಯಾಕ್ ನಿಮಿ೯ಸಿ ಪರೀಕ್ಷಾಥ೯ ಸ೦ಚಾರ ನಡೆಸಲಾಗುತ್ತದೆ ಎ೦ದು ಮುಖ್ಯ ಎ೦ಜಿನಿಯರ್ ಸಾ೦ಗ್ ಯುಜುಹೂ ತಿಳಿಸಿದ್ದಾರೆ. ಸಬ್‍ವೇ ನಿಮಾ೯ಣಕ್ಕೆ ತಗಲುವ ಐದನೇ ಒ೦ದರಷ್ಟು ಖಚಿ೯ನಲ್ಲಿ ಇದನ್ನು ತಯಾರಿಸಬಹುದಾಗಿದ್ದು, ಒ೦ದು ವಷ೯ದಲ್ಲಿ ಯೋಜನೆ ಪೂಣ೯ಗೊಳಿಸಬಹುದು ಎಂದು ಸಾ೦ಗ್ ಯುಜುಹೂ ಹೇಳಿದ್ದಾರೆ.
2010ರಲ್ಲೇ ಮಾದರಿ ಪರಿಕಲ್ಪನೆ ಕುರಿತು ಯೋಜಿಸಲಾಗಿತ್ತಾದರೂ ಕಾರಣಾಂತರಗಳಿಂದ ಇದು ಮುಂದಕ್ಕೆ ಹೋಗಿತ್ತು. ಇದೀಗ ಬರೊಬ್ಬರಿ 6 ವರ್ಷಗಳ ಬಳಿಕ ಸಾ೦ಗ್ ಯುಜುಹೂ ಅವರ ಈ ವಿನೂತನ ಪರಿಕಲ್ಪನೆಗೆ ಚೀನಾ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ.
Advertisement