ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ: ಅಮೂಲ್ಯ ಹಸ್ತಪ್ರತಿಗಳ ಸಂಗ್ರಹಾಲಯ

15ನೇ ಶತಮಾನಕ್ಕೆ ಸೇರಿದ ಹಲವು ಕನ್ನಡ ಹಸ್ತಪ್ರತಿಗಳು ಬೆಂಗಳೂರಿನ ಬಸವನಗುಡಿಯಲ್ಲಿರುವ ...
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವಧಿಯ 18ನೇ ಶತಮಾನದ ಅಪರೂಪದ ತಾಳೆಗರಿ ಹಸ್ತಪ್ರತಿ
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವಧಿಯ 18ನೇ ಶತಮಾನದ ಅಪರೂಪದ ತಾಳೆಗರಿ ಹಸ್ತಪ್ರತಿ

ಬೆಂಗಳೂರು: 15ನೇ ಶತಮಾನಕ್ಕೆ ಸೇರಿದ ಹಲವು ಕನ್ನಡ ಹಸ್ತಪ್ರತಿಗಳು ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿವೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಸಂಸ್ಕೃತ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಹಸ್ತಪ್ರತಿಗಳು ಬಿಎಂಶ್ರೀ ಪ್ರತಿಷ್ಠಾನದಲ್ಲಿವೆ.

ಬಿಎಂಶ್ರೀ ಪ್ರತಿಷ್ಠಾನ ಸ್ಥಾಪಿಸಿದ್ದು 1979ರಲ್ಲಿ ಎಂಎ ಸೀತಾರಾಮ್ ಎಂಬುವವರು. ಅವರು ತಮ್ಮ ಗುರುಗಳಾದ ಬೆಲ್ಲೂರು ಮೈಲಾರಯ್ಯ ಶ್ರೀಕಂಠಯ್ಯ(ಬಿಎಂಶ್ರೀಕಂಠಯ್ಯ) ಅವರ ಸ್ಮರಣಾರ್ಥ ಈ ಪ್ರತಿಷ್ಠಾನ ಸ್ಥಾಪಿಸಿದರು. ಬಿಎಂಶ್ರೀಯವರು ಲೇಖಕ, ಬರಹಗಾರ ಮತ್ತು ಅನುವಾದಕರಾಗಿದ್ದವರು. ಈ ಸಂಸ್ಥೆಯನ್ನು 1980ರಲ್ಲಿ ಕುವೆಂಪು ಅಧಿಕೃತವಾಗಿ ಉದ್ಘಾಟಿಸಿದರು.

ಬಿಎಂಶ್ರೀ ಪ್ರತಿಷ್ಠಾನಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಸಿಕ್ಕಿದೆ. ಸಂಶೋಧಕರಿಗೆ, ತಜ್ಞರಿಗೆ ಇಲ್ಲಿ ಸಾಕಷ್ಟು ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳು ದೊರಕುತ್ತವೆ, ಎಂ.ಫಿಲ್ ವಿದ್ಯಾರ್ಥಿಗಳಿಗೆ ಇಲ್ಲಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ.



ತಾಳೆಗರಿಯ ಹಸ್ತಪ್ರತಿ



ಬಿಎಂ ಶ್ರೀ ಪ್ರತಿಷ್ಠಾನದಲ್ಲಿ ಸುಮಾರು 1,400 ತಾಳೆಗರಿ ಹಸ್ತಪ್ರತಿಗಳು ಮತ್ತು ಕಾಗದದಲ್ಲಿ ಬರೆದ ಹಸ್ತಪ್ರತಿಗಳು ಇವೆ. ಬೇರೆ ಬೇರೆ ಭಾಷೆಗಳಲ್ಲಿ ಸಿಗುತ್ತವೆ. ಕೆಲವು ಸುಮಾರು 200 ವರ್ಷಗಳ ಹಳೆಯ ಹಸ್ತಪ್ರತಿಗಳಿವೆ. ತಜ್ಞರ ನೆರವಿನಿಂದ ಸೂಕ್ಷ್ಮವಾದ ಈ ತಾಳೆಗರಿ ಹಸ್ತಪ್ರತಿಗಳನ್ನು ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳ ಮೂಲಕ ಕಾಲಕಾಲಕ್ಕೆ ನಿರ್ವಹಿಸಲಾಗುತ್ತಿದೆ. ಇವುಗಳನ್ನು ಆಧುನಿಕ ತಂತ್ರಜ್ಞಾನಗಳ ಮುೂಲಕ ಡಿಜಿಟಲೀಕರಣಗೊಳಿಸಿ ಇಡಲಾಗಿದೆ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ.
 
ಕೆಲವೊಂದನ್ನು ಸಂಸ್ಥೆಗಳು ಮತ್ತು ಖಾಸಗಿ ಮಾಲಿಕರು ದಾನ ನೀಡಿದ್ದಾರೆ.
ಪುರಾಣದ ವೇದಗಳು, ಆಯುರ್ವೇದ ಗ್ರಂಥಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಶ್ಲೋಕ ಮತ್ತು ದಾಖಲೆಗಳನ್ನು ರಾಜರುಗಳು ದಾನ ನೀಡಿದ್ದಾರೆ.
ಹಳೆಗನ್ನಡದಲ್ಲಿ ಆರು ತಿಂಗಳ ಡಿಪ್ಲೊಮಾವನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ನಿವೃತ್ತ ಹೊಂದಿದ ಅಧ್ಯಾಪಕರಿಗೆ ನೀಡಲಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ಕೂಡ ಡಿಪ್ಲೊಮಾದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.




ಪ್ರತಿಷ್ಠಾನದಲ್ಲಿರುವ ಕೆಲವು ಅಪರೂಪದ ವಸ್ತುಗಳು


ಪ್ರತಿಷ್ಠಾನದ ಗ್ರಂಥಾಲಯದಲ್ಲಿ 25,000ಕ್ಕೂ ಹೆಚ್ಚು ಪುಸ್ತಕಗಳಿವೆ. ಹಸ್ತಪ್ರತಿಶಾಸ್ತ್ರಗಳಲ್ಲಿ ಸೆಮಿನಾರ್ ಗಳನ್ನು ನಡೆಸುತ್ತಾರೆ. ಖಾಸಗಿ ಅನುದಾನಿತರಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಬಿಎಂಶ್ರೀ ಪ್ರತಿಷ್ಠಾನಕ್ಕೆ ಧನ ಸಹಾಯ ನೀಡಿವೆ. ಮೂವರು ಸಿಬ್ಬಂದಿ ಮತ್ತು ಹಲವು ಕಾರ್ಯಕರ್ತರು ಇಲ್ಲಿ ಕೆಲಸ ಮಾಡುತ್ತಾರೆ.

ತಾಂತ್ರಿಕ ನೆರವನ್ನು ಬಯಸುವ ಬಿಎಂಶ್ರೀ ಪ್ರತಿಷ್ಠಾನ ಹಸ್ತಪ್ರತಿಗಳ ಆಡಿಯೊ, ವಿಡಿಯೊ ಕ್ಲಿಪಿಂಗ್ ಗಳನ್ನು ಮಾಡುವ ಉದ್ದೇಶ ಹೊಂದಿದೆ. ಅದನ್ನು ಸಂಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಸುಲಭವಾಗಿ ನೀಡಬಹುದೆಂಬ ಲೆಕ್ಕಾಚಾರ ಪ್ರತಿಷ್ಠಾನದ್ದು.
ರಕ್ಷಣೆ ಹೇಗೆ: ತಾಳೆಗರಿ ಮತ್ತು ಕಾಗದ ಹಸ್ತಪ್ರತಿಗಳು ಹಾಳಾಗದಂತೆ ಸಂರಕ್ಷಿಸಲು ಕಾಲಕಾಲಕ್ಕೆ ಅದನ್ನು ಅರಿಶಿನ ತೈಲ, ತುಳಸಿ ತೈಲ ಮತ್ತು ರಾಸಾಯನಿಕಗಳಿಂದ ಸ್ವಚ್ಛ ಮಾಡಲಾಗುತ್ತದೆ. ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಸೂರ್ಯನ ಬೆಳಕಿಗೆ ಸಿಕ್ಕಿ ಹಾಳಾಗದಂತೆ ರಕ್ಷಿಸಲಾಗುತ್ತದೆ. ಕೆಲವನ್ನು ಪ್ರತಿವರ್ಷ ಸ್ವಚ್ಛಗೊಳಿಸುತ್ತಿದ್ದರೆ ಇನ್ನು ಕೆಲವನ್ನು ನಾಲ್ಕು ವರ್ಷಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com