ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣ: ಬಿನ್ನಿ ಬನ್ಸಲ್

ಗೂಗಲ್ ಮಾಡಿದ ಅವಮಾನ ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣವಾಯಿತು ಎಂದು ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಹೇಳಿದ್ದಾರೆ.
ಬಿನ್ನಿ ಬನ್ಸಲ್
ಬಿನ್ನಿ ಬನ್ಸಲ್
ಬೆಂಗಳೂರು: ಗೂಗಲ್ ಮಾಡಿದ ಅವಮಾನ ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣವಾಯಿತು ಎಂದು ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಹೇಳಿದ್ದಾರೆ. 
ಬಿನ್ನಿ ಬನ್ಸಲ್ ಕೆಲಸಕ್ಕಾಗಿ ಎರಡು ಬಾರಿ ಗೂಗಲ್ ಗೆ ಅರ್ಜಿ ಹಾಕಿದ್ದರು. ಎರಡು ಬಾರಿಯು ಗೂಗಲ್ ಅರ್ಜಿಯನ್ನು ತಿರಸ್ಕರಿಸಿತ್ತು. ಇದರಿಂದ ಬೇಸರಗೊಂಡಿದ್ದ ಬಿನ್ನಿ ಸಹೋದರನ ಜತೆಗೂಡಿ ಫ್ಲಿಪ್ ಕಾರ್ಟ್ ಅನ್ನು ಆರಂಭಿಸಿದ್ದರು. 
ಬಿನ್ನಿ ಬನ್ಸಲ್ ಐಐಟಿ ದೆಹಲಿಯಿಂದ ಪದವಿ ಪಡೆದಿದ್ದರು. ಆರಂಭದಲ್ಲಿ ಸರ್ನಾಫ್ ಕಾರ್ಪೋರೇಶನ್ ಎಂಬ ಕಂಪನಿಯಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದರು. ಈ ವೇಳೆ ಬನ್ಸಲ್ ಎರಡು ಬಾರಿ ಗೂಗಲ್ ಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದರು. ಆದರೆ ರಿಜೆಕ್ಟ್ ಆಗಿದ್ದವು. 
ಇದಾದ ಬಳಿಕ ಸಹೋದರ ಸಚಿನ್ ಬನ್ಸಲ್ ಬಿನ್ನಿಯನ್ನು ಅಮೆಜಾನ್ ಗೆ ಸೇರುವಂತೆ ಪ್ರೇರೇಪಿಸಿದರು. ಅದರಂತೆ 2006ರಲ್ಲಿ ಬಿನ್ನಿ ಅಮೆಜಾನ್ ನಲ್ಲಿ ಸಿನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡತೊಡಗಿದರು. ಈ ಅವಧಿಯಲ್ಲೇ ಬಿನ್ನಿ ಮತ್ತು ಸಚಿನ್ ಇಬ್ಬರೂ ತಮ್ಮದೇ ಆದ ಇ-ಕಾರ್ಮಸ್ ಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಿ ಅದರಂತೆ ಫ್ಲಿಪ್ ಕಾರ್ಟ್ ಸಂಸ್ಥೆಯನ್ನು ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com