ವಜ್ರಗಳ ಕುರಿತು ನೀವು ನಂಬಲೇಬೇಕಾದ ಸತ್ಯ ಸಂಗತಿಗಳು ಇವು!

ವಜ್ರವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ...? ಯಾರಿಗಾದರೂ ವಜ್ರ ಸಿಕ್ಕಿದೆ ಎಂದರೆ, ಹೃದಯವೇ ಒಡೆದು ಹೋದಂತೆ ಜನರು ಪ್ರತಿಕ್ರಿಯೆ ನೀಡುತ್ತಾರೆ. ವಿಶ್ವದಲ್ಲಿ ಸಾಕಷ್ಟು ಹೆಸರು ಮಾಡಿರುವ ಗ್ರೇಟ್ ಮುಘಲ್, ಕೊಹಿನೂರ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಜ್ರವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ...? ಯಾರಿಗಾದರೂ ವಜ್ರ ಸಿಕ್ಕಿದೆ ಎಂದರೆ, ಹೃದಯವೇ ಒಡೆದು ಹೋದಂತೆ ಜನರು ಪ್ರತಿಕ್ರಿಯೆ ನೀಡುತ್ತಾರೆ. ವಿಶ್ವದಲ್ಲಿ ಸಾಕಷ್ಟು ಹೆಸರು ಮಾಡಿರುವ ಗ್ರೇಟ್ ಮುಘಲ್, ಕೊಹಿನೂರ್, ರೀಜೆಂಟ್, ಫ್ಲೋರೆಂಟೈನ್, ದರಿಯಾ-ಇ-ನೂರ್, ಪಿಗೋಟ್, ಟಾವೆರ್ನಿಯರ್ ಮತ್ತು ನಸಾಕ್ ವಜ್ರಗಳು ಭಾರತದಲ್ಲಿಯೇ ಸೃಷ್ಟಿಗೊಂಡ ವಜ್ರಗಳಾಗಿವೆ. 
ಪ್ರಾಚೀನ ಕಾಲದಲ್ಲಿ ವಜ್ರವನ್ನು ಸೌಂದರ್ಯ ಹಾಗೂ ಆಕರ್ಷಣೆಗಳಿಗಿಂತಲೂ ಹೆಚ್ಚಾಗಿ ಶಕ್ತಿ, ಅಜೇಯ ಹಾಗೂ ಧೈರ್ಯಕ್ಕಾಗಿ ಧರಿಸುತ್ತಿದ್ದರು ಎಂಬು ನಂಬಲಾಗಿತ್ತು. 
ಕ್ರಿ.ಪೂರ್ವ 4ನೇ ಶತಮಾನದಲ್ಲಿ ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ವಜ್ರಗಳು ಕಂಡು ಬಂದಿದ್ದವು. ಸಾಮರ್ಥ್ಯಗಳ ಹಾಗೂ ಬೆಳಕಿನ ಶಕ್ತಿಯಿಂದಾಗಿ ಸಾಕಷ್ಟು ಮೌಲ್ಯವನ್ನು ಪಡೆದುಕೊಂಡವು. ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಬೌಕಿತ ಗುಣಗಳಿಗೆ ಹೆಸರಾಗಿದ್ದು, ಅತಿ ಕಠಿಣವಾಗಿರುವುದರಿಂದ ವಜ್ರವನ್ನು ಘರ್ಷಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಒಂದು ವಜ್ರವನ್ನು ತಿದ್ದಬೇಕಾದರೆ, ಮತ್ತೊಂದು ವಜ್ರ ಬೇಕೆ ಬೇಕು. ಈ ಹಿಂದೆ ವಜ್ರವನ್ನು ವೈದ್ಯಕೀಯ ಚಿಕಿತ್ಸೆಗಳಿಗೂ ಬಳಸುತ್ತಿದ್ದರು. ವಜ್ರ ಅನಾರೋಗವನ್ನು ದೂರಾಗಿಸಿ, ಗಾಯವನ್ನು ದೂರಾಗಿಸುತ್ತದೆ ಎಂಬ ನಂಬಿಕೆಯಿತ್ತು. 
ಭಾರತದ ವಜ್ರ ಉತ್ಪಾದನೆಯು 16ನೇ ಶತಮಾನದಲ್ಲಿ 1,500ರಿಂದ 100,000 ಕ್ಯಾರಟ್ಗಳ ಗರಿಷ್ಠ ಉತ್ಪಾದನೆಯೊಂದಿಗೆ ಉತ್ತುಂಗಕ್ಕೇರಿತ್ತು. 18ನೇ ಶತಮಾನದವರೆಗೂ ಇಡೀ ಪ್ರಪಂಚಕ್ಕೆ ವಜ್ರಗಳಿಗೆ ಭಾರತವೇ ಏಕೈಕ ಮೂಲವಾಗಿತ್ತು. ಭಾರತದಲ್ಲಿ ವಜ್ರಗಳ ಗಣಿ ಖಾಲಿಯಾದ ಬಳಿಕ ಪರ್ಯಾಯ ಮೂಲಗಳಿಗೆ ಅನ್ವೇಷಣೆಗಳು ಆರಂಭವಾಗಿತ್ತು. ಇದಾದ ಬಳಿಕ 1725ರಲ್ಲಿ ಬ್ರೆಜಿಲ್ ನಲ್ಲಿ ಸಣ್ಣ ಪ್ರಮಾಣದಲ್ಲಿ ವಜ್ರಗಳು ಕಂಡು ಬಂದಿದ್ದವು. ಆದರೆ, ಬ್ರೆಜಿಲ್'ಗೆ ವಿಶ್ವದ ಬೇಡಿಕೆಯನ್ನು ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. 
ಇತ್ತೀಚಿನ ದಿನಗಳಲ್ಲಿ ವಜ್ರ ಶ್ರೀಮಂತರ ಪಾಲಾಗಿದ್ದು, ವಜ್ರವಿದ್ದ ವ್ಯಕ್ತಿ ಕೋಟ್ಯಾಧಿಪತಿಗಳೆಂದೇ ಹೇಳಲಾಗುತ್ತದೆ. ಇಂದು ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಮೊದಲ ಆಯ್ಕೆ ವಜ್ರವಾಗಿರುತ್ತದೆ. 
ವಜ್ರದ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳಿದ್ದು, ವಜ್ರ ಕುರಿತು ನೀವು ನಂಬಲು ಅಸಾಧ್ಯವಾದ 6 ಸತ್ಯಗಳು ಇಂತಿವೆ...
  • ಅತ್ಯಂತ ನಿಖರವಾದ ಸನ್ನಿವೇಶದಲ್ಲಿ ಮಾತ್ರ ನೈಸರ್ಗಿಕ ವಜ್ರದ ಹರಳಿನ ರಚನೆಯಾಗುತ್ತದೆ. ಇದು ಸೃಷ್ಟಿಯಾಗಬೇಕಾದರೆ ಇಂಗಾಲವನ್ನು ಹೊಂದಿರುವ ವಸ್ತುಗಳು 45ರಿಂದ 60 ಕಿಲೋಬಾರ್ ಗಳ ಒತ್ತಡಕ್ಕೆ 900ರಿಂದ 1300 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಒಳಗಾಗಬೇಕು. ಭೂಮಿಯಲ್ಲಿ ಈ ಸನ್ನಿವೇಶವಿರುವ ಎರಡು ಸ್ಥಾನಗಳು ಮಾತ್ರ ವಜ್ರಗಳನ್ನು ಸೃಷ್ಟಿ ಮಾಡಬಲ್ಲವು. ಅವೆಂದರೆ ನೆಲದಾಳದ ಭೂಖಂಡ ಫಲಕಗಳ ಅಡಿಯಲ್ಲಿರುವ ಲಿತೋಸ್ಫಿಯರ್, ಮತ್ತೊಂದು ಭೂಮಿಯ ಮೇಲೆ ಉಲ್ಕೆಗಳು ಅಪ್ಪಳಿಸಿದ ಸ್ಥಳಗಳು. ಉಲ್ಕೆಗಳು ಭೂಮಿಗೆ ಅಪ್ಪಳಿಸಿದ ಸ್ಥಳದಲ್ಲಿ ಅತಿ ಹೆಚ್ಚಿನ ಒತ್ತಡ ಮತ್ತು ಉಷ್ಣತೆ ಉಂಟಾಗಿ ಹಲವೊಮ್ಮ ವಜ್ರಗಳು ಹರಳುಗಟ್ಟುತ್ತವೆ. ಇಂತಹ ವಜ್ರಗಳು ಅತಿ ಚಿಕ್ಕದಾದ ಗಾತ್ರದಲ್ಲಿದ್ದು ಮೈಕ್ರೋವಜ್ರ ಹಾಗೂ ನ್ಯಾನೋವಜ್ರಗಳೆಂದು ಕರೆಯಲ್ಪಡುತ್ತವೆ. 
  • ಡೈನೋಸರ್ ಗಳು ಭೂಮಿಯ ಮೇಲೆ ಹುಟ್ಟುವುದಕ್ಕೂ ಮುನ್ನವೇ ವಜ್ರಗಳು ಸೃಷ್ಟಿಯಾಗಿದ್ದವು. 107 ದಶಲಕ್ಷ ವರ್ಷಗಳ ವರ್ಷಗಳ ಹಿಂದೆ ವಜ್ರಗಳು ಸೃಷ್ಟಿಯಾಗಿದ್ದವು. ಡೈನೋಸರ್ ಗಳು 65 ದಶಲಕ್ಷ ವರ್ಷಗಳ ಹಿಂದೆ ನಾಶಗೊಂಡಿದ್ದವು. 
  • ವಜ್ರ ವಿಶ್ವದಲ್ಲಿಯೇ ಅತ್ಯಂತ ಕಠಿಣ ವಸ್ತುಗಳಲ್ಲಿ ಒಂದಾಗಿದೆ. ಶತಕೋಟಿ ವರ್ಷಗಳ ಹಿಂದೆ ಭೂಮಿಯ ಆಳವಾದ ಪದರದಲ್ಲಿ ರಾಸಾಯನಿಕಗಳು, ಒತ್ತಡ ಹಾಗೂ ಉಷ್ಣತೆಯ ಬದಲಾವಣೆಗಳ ಒಂದು ವಿಶಿಷ್ಟ ಸಂಯೋಜನೆಯ ಸನ್ನಿವೇಶದಲ್ಲಿ ಸೃಷ್ಟಿಗೊಂಡಿತ್ತು. 
  • ಒರಟಾಗಿರುವ ವಜ್ರಗಳನ್ನು ಪಾಲಿಷ್ ಮಾಡುವಾಗ ಅರ್ಧದಷ್ಟು ವ್ಯರ್ಥಗೊಳ್ಳುತ್ತವೆ. ವಜ್ರಗಳನ್ನು ಕತ್ತರಿಸುವುದನ್ನು ಕಲಿಯಲು ಎರಡು ವರ್ಷಗಳ ಕಾಲವಾದರೂ ಬೇಕಾಗುತ್ತದೆ. ಅತಿದೊಡ್ಡ ಮತ್ತು ಅತ್ಯಂತ ಬೆಲೆಬಾಳುವ ವಜ್ರಗಳನ್ನು ಕತ್ತರಿಸಲು ಅನುಭವಿ ಕುಶಲಕರ್ಮಿಗಳಿಗೇ 2 ವರ್ಷ ಬೇಕಾಗುತ್ತದೆ. 
  • ವಜ್ರ ಅತ್ಯಂತ ವಿರಳ ಹಾಗೂ ಮೌಲ್ಯಯುತ ವಸ್ತುವಾಗಿದೆ. ವಜ್ರ ಕುರಿತ ಮಹತ್ವದ ಆವಿಷ್ಕಾರಗಳು 20 ವರ್ಷಗಳ ಹಿಂದೆ ನಡೆದಿತ್ತು. ಪ್ರಪಂಚದಲ್ಲಿ ಸುಮಾರು 50 ಸ್ಥಳಗಳಲ್ಲಿ ವಜ್ರಗಳು ಕಂಡು ಬಂದಿದ್ದವು. ದಕ್ಷಿಣ ಆಫ್ರಿಕಾ, ರಷ್ಯಾ ಮತ್ತು ಬೋಟ್ಸ್ವಾನಾಗಳು ವಜ್ರಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದ ಸ್ಥಳಗಳಾಗಿವೆ. 
  • ವಜ್ರಗಳಿಗೆ ಇಡೀ ವಿಶ್ವದಲ್ಲಿಯೇ ಭಾರತ ಮೂಲವಾಗಿತ್ತು. 1400ರ ದಶಕದಲ ಆರಂಭದಲ್ಲಿ ಭಾರತೀಯ ವಜ್ರಗಳನ್ನು ಯೂರೋಪಿಯನ್ ಮತ್ತು ವೆನಿಸ್ ವ್ಯಾಪಾರ ಕೇಂದ್ರಗಳಲ್ಲಿ ಮಾರಾಟ ಮಾಡಲು ಆರಂಭ ಮಾಡಲಾಗಿತ್ತು. ಕೊಹಿನೂರ್ ವಜ್ರ ಇದರಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು. ಇದೀಗ ಈ ಕೊಹಿನೂರ್ ವಜ್ರ ಬ್ರಿಟೀಷರ ಪಾಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com