ಹೀಗೂ ಉಂಟೆ..; ಕೈಲಿ ಜೆನ್ನರ್ ವಿಶ್ವ ದಾಖಲೆಯನ್ನೇ ಮುರಿದ ಒಂದು ಮೊಟ್ಟೆ!

ಕೈಲಿ ಜೆನ್ನರ್.. ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟಿ. ಆದರೆ ಈ ನಟಿಯ ಅಪರೂಪದ ದಾಖಲೆಯನ್ನು ಕೇವಲ ಒಂದು ಮೊಟ್ಟೆ ಅಳಿಸಿ ಹಾಕಿದೆ.

Published: 17th January 2019 12:00 PM  |   Last Updated: 17th January 2019 08:57 AM   |  A+A-


Photo Of An Egg Breaks Kylie Jenner's World Record For Most-Liked Instagram

ಕೈಲಿ ಜೆನ್ನರ್ ವಿಶ್ವದಾಖಲೆ ಮುರಿದ ಮೊಟ್ಟೆ

Posted By : SVN SVN
Source : Online Desk
ವಾಷಿಂಗ್ಟನ್: ಕೈಲಿ ಜೆನ್ನರ್.. ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್ ನ ಖ್ಯಾತ ನಟಿ. ಆದರೆ ಈ ನಟಿಯ ಅಪರೂಪದ ದಾಖಲೆಯನ್ನು ಕೇವಲ ಒಂದು ಮೊಟ್ಟೆ ಅಳಿಸಿ ಹಾಕಿದೆ.

ಅರೆ ಇದು ನಿಜ.. ಹೌದು.. ಈ ಹಿಂದೆ ಕೈಲಿ ಜೆನ್ನರ್ ರ ಒಂದು ಫೋಟೋಗೆ ದಾಖಲೆಯ ಸುಮಾರು 18 ಮಿಲಿಯನ್ ಲೈಕ್​ ಸಿಕ್ಕಿತ್ತು. ಆದರೆ ಈ ದಾಖಲೆಯನ್ನು ಒಂದು ಮೊಟ್ಟೆಯ ಫೋಟೋ ಮುರಿದು ಹಾಕಿದ್ದು. ಅಷ್ಟು ಮಾತ್ರವಲ್ಲದೇ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಮೊದಲ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಆ ಮೂಲಕ ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್​ ನಟಿ ಕೈಲಿ ಜೆನ್ನರ್​ ಈಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. 

ವರ್ಲ್ಡ್​​ ರೆಕಾರ್ಡ್​ ಎಗ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಮೊಟ್ಟೆಯೊಂದರ ಫೋಟೋ ಹಾಕಲಾಗಿತ್ತು. ಈ ಫೋಟೋಗೆ ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿತ್ತು. ಈದೀಗ ಈ ಫೋಟೋ ಯಾವ ಮಟ್ಟಿಗೆ ವೈರಲ್ ಆಗಿದೆ ಎಂದರೆ,  ಈ ಫೋಟೋಗೆ 47 ಕೋಟಿಗಿಂತಲೂ ಹೆಚ್ಚಿನ ಲೈಕ್ ಸಿಕ್ಕಿದೆ. ಈ ಮೂಲಕ ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ ಪಡೆದ ಫೋಟೋ ಎಂಬ ದಾಖಲೆ ಮೊಟ್ಟೆಯ ಪಾಲಾಗಿದೆ.

ಈ ಹಿಂದೆ ನಟಿ ಜೆನ್ನರ್ ತನ್ನ ಮಗಳ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ 18 ಮಿಲಿಯನ್ ಲೈಕ್ಸ್​ ಸಿಕ್ಕಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಅದ್ಯಾರೋ ಹಾಕಿದ ಒಂದು ಮೊಟ್ಟೆಯ ಫೋಟೋ ಅಳಿಸಿ ಹಾಕಿದೆ. ವರ್ಲ್ಡ್​ ರೆಕಾರ್ಡ್ ಎಗ್​ ಹೆಸರಿನ ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ  ಮೊಟ್ಟೆಯ ಫೋಟೋ ಅವರು ಅಪ್ಲೋಡ್​ ಮಾಡಿದ ಮೊದಲ ಚಿತ್ರವಾಗಿತ್ತು. ಅಲ್ಲದೆ ಅನಂತರ ಕೂಡ ಯಾವುದೇ ಫೋಟೋ ಹಾಕಿಲ್ಲ. ಹಾಕಿದ ಒಂದೇ ಒಂದು ಪೋಸ್ಟ್ ನಿಂದ ಈ ಖಾತೆಯನ್ನು 7.3 ಕೋಟಿ ಜನರು ಫಾಲೋ ಕೂಡ ಮಾಡುತ್ತಿದ್ದಾರೆ.
facebook twitter whatsapp