ಎಂಥಾ ಕಾಲ ಬಂತಪ್ಪ.. ನೀರು, ಮಣ್ಣಿನ ಬಳಿಕ ಉಸಿರಾಡುವ ಶುದ್ಧ ಗಾಳಿ ಕೂಡ ಮಾರಾಟಕ್ಕೆ!

ಉಸಿರಾಡುವ ಗಾಳಿಯನ್ನು ಮಾರಾಟ ಮಾಡಲಾಗುತ್ತಿದೆಯೇ ಎಂದು ಅಚ್ಚರಿ ಪಡಬೇಡಿ.. ಇದು ನಿಜ.. ನಾವು ಉಸಿರಾಡುವ ಗಾಳಿಯನ್ನು ಕೂಡ ಸಿಲಿಂಡರ್ ನಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೆನಡಾ: ಉಸಿರಾಡುವ ಗಾಳಿಯನ್ನು ಮಾರಾಟ ಮಾಡಲಾಗುತ್ತಿದೆಯೇ ಎಂದು ಅಚ್ಚರಿ ಪಡಬೇಡಿ.. ಇದು ನಿಜ.. ನಾವು ಉಸಿರಾಡುವ ಗಾಳಿಯನ್ನು ಕೂಡ ಸಿಲಿಂಡರ್ ನಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತಿದೆ.
ಹೌದು..ನೀರು, ಮಣ್ಣಿನ ಬಳಿಕ ಪಂಚಭೂತಗಳಲ್ಲಿ ಒಂದಾದ ಗಾಳಿ ಕೂಡ ಈಗ ಮಾರಾಟಕ್ಕಿದೆ. ಏನು ಉಸಿರಾಡುವ ಗಾಳಿಯನ್ನು ಮಾರಾಟ ಮಾಡಲಾಗುತ್ತಿದೆಯೇ ಎಂದು ಅಚ್ಚರಿ ಪಡಬೇಡಿ.. ಇದು ನಿಜ.. ನಾವು ಉಸಿರಾಡುವ ಗಾಳಿಯನ್ನು ಕೂಡ ಸಿಲಿಂಡರ್ ನಲ್ಲಿ ತುಂಬಿಸಿ ಮಾರಾಟ ಮಾಡಲಾಗುತ್ತಿದೆ.
ಆಧುನಿಕ ಜಗತ್ತು, ಬದಲಾದ ಜೀವನ ಶೈಲಿ, ನಗರೀಕರಣ ಮತ್ತು ವಾಯು ಮಾಲಿನ್ಯದ ಪರಿಣಾಮದಿಂದಾಗಿ ಇತ್ತೀಚಿನ ದಿನಗಳಲ್ಲಿ ಉಸಿರಾಡುವ ಗಾಳಿ ಕೂಡ ಕಲುಷಿತವಾಗುತ್ತಿದೆ. ನಾವು ಉಸಿರಾಡುತ್ತಿರುವುದು ಸ್ವಚ್ಛಗಾಳಿಯಲ್ಲ.. ಬದಲಿಗೆ ನೂರಾರು ಅನಾರೋಗ್ಯ ಸಮಸ್ಯೆ ಒಡ್ಡುವ ಕಲುಷಿತ ಗಾಳಿ ಎಂಬುದನ್ನು ಈಗಾಗಲೇ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಕೆನಡಾ, ಬೀಜಿಂಗ್,  ದೆಹಲಿ, ಮುಂಬೈ, ಲಖನೌ ಸೇರಿದಂತೆ ವಿಶ್ವದ ಪ್ರಮುಖ ನಗರಗಳು ವಾಯುಮಾಲೀನ್ಯ ಸಮಸ್ಯೆಯಿಂದಾಗಿ ಬಳಲುತ್ತಿವೆ.
ಇಂತಹ ಹೊತ್ತಿನಲ್ಲೇ ಕೆನಡಾದಲ್ಲಿ ಖಾಸಗಿ ಸಂಸ್ಥೆಯೊಂದು ಉಸಿರಾಡುವ ಸ್ವಚ್ಛ ಗಾಳಿಯನ್ನು ಮಾರಾಟಕ್ಕಿಡುವ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ಬಗ್ಗೆ ಮಾತೃಭೂಮಿ ಪತ್ರಿಕೆ ವರದಿ ಮಾಡಿದ್ದು, ಕೆನಡಾ ಮೂಲದ ವೈಟಲಿಟಿ ಏರ್ ಕಂಪನಿ ಎಂಬ ಸಂಸ್ಥೆ ಉಸಿರಾಡುವ ಗಾಳಿಯನ್ನು ಸಿಲಿಂಡರ್ ನಲ್ಲಿ ತುಂಬಿಸಿ ಮಾರಾಟಕ್ಕಿಟ್ಟಿದೆ. ಈ ಸಿಲಿಂಡರ್ ನಲ್ಲಿ ಶೇ. 95ರಷ್ಟು ಪರಿಶುದ್ಧ ಆಮ್ಲಜನಕವಿರುವ ಸ್ವಚ್ಛ ಗಾಳಿಯಿದೆ ಎಂದು ಹೇಳಿಕೊಂಡಿದೆ.
ಈ ಗಾಳಿಯ ಸಿಲಿಂಡರ್ ನಲ್ಲಿ 10 ಲೀಟರ್ ನಷ್ಟು ಸ್ವಚ್ಛ ಗಾಳಿ ಇರಲಿದ್ದು, ಬೆಲೆ ಕೇವಲ 1750 ರೂ.ಗಳು (25 ಡಾಲರ್ ಗಳು) ಮಾತ್ರ. ಈ ಸಿಲಿಂಡರ್ ಮೂಲಕ ಓರ್ವ ಮನುಷ್ಯ 200 ಬಾರಿ ಉಸಿರಾಡಬಹುದಂತೆ. ಅಂದರೆ ಪ್ರತೀ ಉಸಿರಾಟಕ್ಕೆ 8.75 ರೂ.ಗಳಾಗುತ್ತದೆ. ಕೆನಡಾದಲ್ಲಿ ಇದೀಗ ಈ ಗಾಳಿಯ ಸಿಲಿಂಡರ್ ಗಳಿಗೆ ವ್ಯಾಪಕ ಬೇಡಿಕೆ ಬಂದಿದ್ದು, ಇದರ ಬೇಡಿಕೆ ಯಾವ ಮಟ್ಟಿಗೆ ಇದೆ ಎಂದರೆ ವೈಟಲಿಟಿ ಏರ್ ಕಂಪನಿ ಓರ್ವ ಗ್ರಾಹಕನಿಗೆ ಒಂದು ಬಾರಿಗೆ ಮೂರು ಸಿಲಿಂಡರ್ ಮಾತ್ರ ಮಾರಾಟ ಮಾಡುವುದಾಗಿ ಮಿತಿ ಹೇರಿಕೊಂಡಿದೆ. 
ಇಷ್ಟಕ್ಕೂ ಈ ಸ್ವಚ್ಛ ಗಾಳಿ ಸಿಲಿಂಡರ್ ನ ವಿಶೇಷತೆ ಏನು?
ಇನ್ನು ಈ ವೈಟಲಿಟಿ ಏರ್ ಕಂಪನಿ ಕೆನಡಾ ಪರ್ವತ ಪ್ರದೇಶಗಳಿಂದ ಈ ಸ್ವಚ್ಛ ಗಾಳಿಯನ್ನು ಸಂಗ್ರಹಿಸಿ ಬಳಿಕ ಅದನ್ನು ಕಂಪ್ರೆಸರ್ ಗಳ ಮೂಲಕ ಅಲ್ಯೂಮಿನಿಯಂನಿಂದ ತಯಾರಾದ ಪುಟ್ಟ ಸಿಲಿಂಡರ್ ಗಳಲ್ಲಿ ತುಂಬಲಾಗುತ್ತದೆ. ಈ ಸಿಲಿಂಡರ್ ಗಳು ಸುಮಾರು 140 ಗ್ರಾ ತೂಕವಿರುತ್ತದೆ. ಮಾಸ್ಕ್ ನಂತಹ ಸಾಮಗ್ರಿಯಿಂದ ಮನುಷ್ಯನಿಗೆ ಈ ಸ್ವಚ್ಛ ಗಾಳಿಯನ್ನು ಉಸಿರಾಟಕ್ಕೆ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com